ತಂದೆಯ ಮೃತದೇಹಕ್ಕೆ ಉಣಿಸುತ್ತಿದ್ದ ಮಹಿಳೆ !
.jpg)
ಬಾರ್ದ್ವಾನ್, ಜುಲೈ 3: ತಂದೆ ಮೃತರಾಗಿದ್ದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಯುವತಿಯೊಬ್ಬಳು ಮನೆಯಲ್ಲಿ ಐದು ದಿವಸಗಳ ಕಾಲ ಅದರೊಂದಿಗೆ ಉಳಿದುಕೊಂಡಿದ್ದ ಘಟನೆ ಪಶ್ಚಿಮಬಂಗಾಳದ ಬರ್ದ್ವಾನ್‌ನಿಂದ ವರದಿಯಾಗಿದೆ. ಪಣ್ಮಣಿ ಎಂಬ ಮಹಿಳೆ ತನ್ನ ತಂದೆ ಪಂಚುಸೊರೇನ್(68) ಮೃತರಾಗಿ ಐದು ದಿವಸಗಳ ಕಾಲ ಸ್ಥಳೀಯ ಮಧಾಬ್ದೀಹಿ ಪೊಲೀಸ್‌ರು ಬರುವವರೆಗೂ ಅವರ ಮೃತಶರೀರದೊಂದಿಗೆ ವಾಸಿಸಿದ್ದಳು.
ಮಾತ್ರವಲ್ಲ ಪಣ್ಮಣಿ ಮೃತತಂದೆಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಉಣಿಸಲು ಯತ್ನಿಸಿದ್ದಳು ಎಂಬುದನ್ನು ಪೊಲೀಸರು ಗುರುತಿಸಿದ್ದಾರೆ. ತಂದೆ ತೀರಿಹೋಗಿದ್ದಾರೆ ಎಂದು ಮಗಳಿಗೆ ಮನವರಿಕೆ ಮಾಡಿಕೊಡಲು ತಾವು ಬಹಳಕಷ್ಟಪಟ್ಟೆವೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹ ಸಂಸ್ಕಾರ ಕಾರ್ಯ ಮನೆಯಲ್ಲಿ ನೆರವೇರಿಸುವ ಸಿದ್ಧತೆಗಳು ನಡೆಯುತ್ತಿವೆ. ಇವರ ಮನೆಸ್ವಲ್ಪ ಜನವಿರಳ ಪ್ರದೇಶದಲ್ಲಿತ್ತು. ಆದ್ದರಿಂದ ತಂದೆ ಪಂಚು ಸೊರೇನ್ ಮೃತರಾಗಿದ್ದು ಇತರರ ಅರಿವಿಗೂ ಬಂದಿರಲಿಲ್ಲ. ನಿನ್ನೆ ಈ ದಾರಿಯಾಗಿ ಕೆಲವು ಗ್ರಾಮಸ್ಥರು ಹೋದಾಗ ಮನೆಯೊಳಗಿನಿಂದ ವಾಸನೆ ಬರುವುದನ್ನು ಗಮನಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ತಿಳಿಸಿದ್ದರು. ನಂತರ ಪೊಲೀಸರು ಆಗಮಿಸಿ ಮಹಿಳೆಯ ತಂದೆ ಶವಸಂಸ್ಕಾರಕ್ಕೆ ಏರ್ಪಾಟು ಮಾಡಿದರು.
ತಂದೆಯ ಪಂಚು ಸೋರೇನ್ ನಿವೃತ್ತ ಕಂದಾಯ ಅಧಿಕಾರಿಯಾಗಿದ್ದರು. ಎಂಟು ವರ್ಷಗಳ ಹಿಂದೆ ತಾಯಿ ಮೃತರಾದಾಗಲೂ ಪಣ್ಮಣಿ ಇದೇರೀತಿ ಮಾಡಿದ್ದಳೆಂದು ವರದಿಯಾಗಿದೆ.





