ಪುತ್ತೂರು: ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ

ಪುತ್ತೂರು,ಜು.3: ಅರಣ್ಯ ಇಲಾಖೆಯ ವತಿಯಿಂದ ಜು.2ರಿಂದ 10ರ ತನಕ ನಡೆಯಲಿರುವ ಕೋಟಿ ವೃಕ್ಷ ಅಭಿಯಾನಕ್ಕೆ ಶನಿವಾರ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಾಯಿಲಕೊಚ್ಚಿ ಎಂಬಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಸುಂದರ ಶೆಟ್ಟಿ, ವಲಯ ಅರಣ್ಯ ಅಧಿಕಾರಿ ವಿ.ಪಿ. ಕಾರ್ಯಪ್ಪ, ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಜೀವ್ ರೈ ಕುತ್ಯಾಡಿ, ಉಪವಲಯ ಅರಣ್ಯ ಅಧಿಕಾರಿಗಳಾದ ಪ್ರಕಾಶ್ ಬಿ.ಟಿ. ನಾರಾಯಣ ಕೆ. ಮತ್ತಿತರರು ಭಾಗವಹಿಸಿದ್ದರು.
Next Story





