Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸೆಪ್ಟಂಬರ್ 11ರ ದಾಳಿ

ಸೆಪ್ಟಂಬರ್ 11ರ ದಾಳಿ

ರಹಸ್ಯ ಪುಟಗಳಲ್ಲೇನಿದೆ?

ವಾರ್ತಾಭಾರತಿವಾರ್ತಾಭಾರತಿ3 July 2016 11:36 PM IST
share
ಸೆಪ್ಟಂಬರ್ 11ರ ದಾಳಿ

ಸಂತ್ರಸ್ತ ಕುಟುಂಬಗಳ ಆರೋಪ
ಸೆಪ್ಟಂಬರ್ 11ರ ಘಟನೆಯ ಜತೆ ಸೌದಿ ಅರೇಬಿಯಾ ನಂಟು ಹೊಂದಿದೆ ಎಂಬ ವಿಷಯದ ಬಗೆಗೆ ಸುತ್ತಿಕೊಂಡಿರುವ ವಿವಾದವನ್ನು ನೋಡುವವರು ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಚಾರವೆಂದರೆ, ಸೌದಿ ಅರೇಬಿಯಾದವರು ಬಿನ್ ಲಾಡೆನ್ ಹಾಗೂ ಅಲ್ ಖಾಯಿದಾ ಹೊಂದಿರುವ ನಂಟಿನ ಬಗ್ಗೆ ಯಾರಿಂದಲೂ ಸೆಪ್ಟಂಬರ್ 11ರ ಘಟನೆಯ ಮುನ್ನ ಅಥವಾ ಆ ಬಳಿಕ ತನಿಖೆ ನಡೆದಿಲ್ಲ ಎಂದು ಘಟನೆಯ ವಿಧವಾ ಸಂತ್ರಸ್ತೆ ಕ್ರಿಸ್ಟೆನ್ ಬ್ರೆಟ್‌ವೈಸರ್ ಇತ್ತೀಚೆಗೆ ತಮ್ಮ ಅಂಕಣದಲ್ಲಿ ಅಭಿಪ್ರಾಯಪಟ್ಟಿದ್ದರು.

ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಸೆಪ್ಟಂಬರ್ 11ರ ಉಗ್ರರದಾಳಿಗೆ ಸಂಬಂಧಪಟ್ಟ 21 ಪುಟಗಳ ರಹಸ್ಯ ವರದಿಯನ್ನು ಬಹಿರಂಗಗೊಳಿಸಬೇಕೇ ಎಂಬ ಬಗ್ಗೆ ಶ್ವೇತಭವನ ಹಾಗೂ ವಿಚಕ್ಷಣಾ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಘಟನೆಯ ಬಗ್ಗೆ ಅಮೆರಿಕ ಸಂಸತ್ತಿನ ಕಾಂಗ್ರೆಸ್ ನಿಯೋಗ ನಡೆಸಿದ ತನಿಖಾ ವರದಿ ಅದು. ದಾಳಿಯಲ್ಲಿ ಸೌದಿ ಅರೇಬಿಯಾದ ಸಂಭಾವ್ಯ ಪಾತ್ರದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಅಥವಾ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುವ ಸಾಧ್ಯತೆ ಇದೆ.
ಶ್ವೇತಭವನದ ಭದ್ರತಾ ಕೊಠಡಿಯಲ್ಲಿ ಈ ದಾಖಲೆಗಳನ್ನು ಜತನದಿಂದ ಇರಿಸಲಾಗಿದೆ. ಅಮೆರಿಕದಲ್ಲಿರುವ ಕೆಲ ಅಪಹರಣಕಾರರಿಗೆ ದೊರಕಿರುವ ವಿದೇಶಿ ನೆರವಿನ ಮೂಲಗಳ ಬಗೆಗೆ ಮಾಹಿತಿ ಒಳಗೊಂಡಿದೆ ಎನ್ನಲಾಗಿದೆ.
ಈ ಜಂಟಿ ಸಂಸದೀಯ ತನಿಖಾ ತಂಡದ ಸಹ ಅಧ್ಯಕ್ಷರಾಗಿದ್ದ ಮಾಜಿ ಸೆನೆಟರ್ ಬಾಬ್‌ಗ್ರಹಾಂ ಅವರ ಪ್ರಕಾರ, ಸೌದಿ ಅರೇಬಿಯಾ ಈ ಚಟುವಟಿಕೆಗಳಿಗೆ ಮೂಲ ಹಣಕಾಸು ಸೌಲಭ್ಯ ಒದಗಿಸಿದ ಬಗ್ಗೆ ಬೆಟ್ಟು ಮಾಡಿದೆ.
ಆದರೆ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸೌದಿ ಅರೇಬಿಯಾ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. ಆದರೆ ಸೆಪ್ಟಂಬರ್ 11ರ ಘಟನೆಯ ಸಂತ್ರಸ್ತರು ಹೇಳುವಂತೆ, ಅಲ್ ಖಾಯಿದಾ ಹಾಗೂ ಸೌದಿ ಅರೇಬಿಯಾ ನಡುವೆ ಇರುವ ಸಂಬಂಧವನ್ನು ಇದುವರೆಗೆ ಸಮಗ್ರವಾಗಿ ಯಾರೂ ತನಿಖೆ ನಡೆಸಿಲ್ಲ. ಘಟನೆಗೆ ಮುನ್ನ ಅಥವಾ ಘಟನೆಯ ಬಳಿಕವೂ ಈ ತನಿಖೆ ನಡೆದಿಲ್ಲ ಎನ್ನುವುದು ಅವರ ವಾದ. ಈ ಘಟನೆಗೂ ಸೌದಿ ಅರೇಬಿಯಾ ದೇಶಕ್ಕೂ ಇರುವ ಸಂಬಂಧದ ಕುರಿತು ವಾದ ಹಾಗೂ ಕಣ್ಮರೆಯಾಗಿರುವ 28 ಪುಟಗಳ ಒಳನೋಟ ಇಲ್ಲಿದೆ:
ತನಿಖಾ ಆಯೋಗ :
ಮಾಜಿ ಗವರ್ನರ್ ಟಾಮ್ ಕೀನ್ ಹಾಗೂ ಮಾಜಿ ಪ್ರತಿನಿಧಿ ಲೀ ಹ್ಯಾಮಿಲ್ಟನ್ ಅವರ ನೇತೃತ್ವ್ವದ ಸಮಿತಿಯನ್ನು, ಜಂಟಿ ಸಂಸದೀಯ ಸಮಿತಿಯ ತನಿಖೆ ಮುಂದುವರಿಸುವ ಸಲುವಾಗಿ ನೇಮಕ ಮಾಡಲಾಗಿತ್ತು. ಈ ರಹಸ್ಯ 28 ಪುಟಗಳ ಹೊರತಾಗಿ ವರದಿಯ ಉಳಿದ ಭಾಗ 2002ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.
29 ಪುಟಗಳಲ್ಲಿ ಬಹುತೇಕ ಕಚ್ಚಾ, ಪರಾಮರ್ಶಿಸದ ಅಂಶಗಳು ಇವೆ ಎಂದು ಕೀನ್ ಹಾಗೂ ಹ್ಯಾಮಿಲ್ಟನ್ ಈ ವರ್ಷ ಬಹಿರಂಗಪಡಿಸಿದ್ದರು. ಈ ಎಲ್ಲಾ ಮಾಹಿತಿಗಳನ್ನು ಎಫ್‌ಬಿಐ ಕಡತಗಳಲ್ಲಿ ದಾಖಲಿಸಲಾಗಿದೆ. ಇದು ಮುಂದಿನ ತನಿಖೆಗೆ ಹಲವು ಸುಳಿವುಗಳನ್ನು ಒಳಗೊಂಡಿದೆ. ಆದರೆ ಈ ಸುಳಿವುಗಳನ್ನು ಪರಾಮರ್ಶಿಸಲು ಸಂಸದೀಯ ನಿಯೋಗಕ್ಕೆ ಅವಕಾಶವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಈ ಆಯೋಗದ ಸದಸ್ಯರು ಹಾಗೂ ಸಿಬ್ಬಂದಿ, ಈ 28 ಪುಟಗಳಲ್ಲಿ ದೊರಕಿರುವ ಸುಳಿವಿನ ತನಿಖೆಗಾಗಿ ಸುಮಾರು 18 ತಿಂಗಳ ಕಾಲ ಶ್ರಮಿಸಿದ್ದಾರೆ. ಅಂತಿಮವಾಗಿ 2004ರ ಜುಲೈ ತಿಂಗಳಲ್ಲಿ 567 ಪುಟಗಳ ವರದಿಯನ್ನು ಬಿಡುಗಡೆ ಮಾಡಲಾಯಿತು. ಸೌದಿ ಸರಕಾರ ಒಂದು ಸಂಸ್ಥೆಯಾಗಿ ಅಥವಾ ವೈಯಕ್ತಿಕವಾಗಿ ಸೌದಿ ಅಧಿಕಾರಿಗಳು ಅಲ್ ಖಾಯಿದಾಗೆ ಹಣಕಾಸು ನೆರವು ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವ ಪುರಾವೆಗಳೂ ಇಲ್ಲ ಎಂದು ಈ ಆಯೋಗದ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಸೌದಿ ಅರೇಬಿಯಾ ಸರಕಾರದ ನೆರವು ಪಡೆಯುವ ದತ್ತಿ ಸಂಸ್ಥೆಗಳು ತಮಗೆ ನೀಡಿದ ಅನುದಾವನ್ನು ಆಲ್ ಖಾಯಿದಾಗೆ ವರ್ಗಾಯಿಸಿರುವ ಸಾಧ್ಯತೆಗಳನ್ನು ಆಯೋಗದ ವರದಿ ಅಲ್ಲಗಳೆದಿಲ್ಲ. ಆಯೋಗದ ಕಾರ್ಯನಿರ್ವಹಣೆಯ ಟೀಕಾಕಾರರು ಹೇಳುವ ಪ್ರಕಾರ, ಸೌದಿ ಅರೇಬಿಯಾ ವಿರುದ್ಧ ಇದ್ದ ಎಲ್ಲ ಸುಳಿವುಗಳ ಬಗ್ಗೆ ತನಿಖೆ ನಡೆಸಲು ಆಯೋಗ ಮುಂದಾಗಿರಲಿಲ್ಲ. ಹೀಗೆ ಮಾಡುವುದಕ್ಕೆ ಹಲವು ಏಜೆನ್ಸಿಗಳು ತಡೆಯಾದವು. ವಿವಿಧ ಸರಕಾರಿ ಸಂಸ್ಥೆಗಳು ಅಗತ್ಯ ಮಾಹಿತಿಗಳನ್ನು ತಡೆಹಿಡಿದವು ಎಂದು ಕೀನ್ ಹಾಗೂ ಹ್ಯಾಮಿಲ್ಟನ್ ಆಪಾದಿಸಿದ್ದರು.
ಸಿಐಎ ಏನು ಹೇಳುತ್ತದೆ?
ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಹೇಳುವಂತೆ, ಈ 28 ಪುಟಗಳಲ್ಲಿ, ದಾಳಿಕೋರರ ಜತೆಗೆ ಸೌದಿ ಅರೇಬಿಯಾದ ಸಂಭಾವ್ಯ ಸಂಪರ್ಕದ ಬಗೆಗಿನ ಪ್ರಾಥಮಿಕ ಮಾಹಿತಿ ಒಳಗೊಂಡಿದೆ. ಆಗ ಇದನ್ನು ದೃಢೀಕರಿಸಲೂ ಇಲ್ಲ ಅಥವಾ ಪರಿಶೀಲಿಸಲೂ ಇಲ್ಲ. ಸೌದಿ ಅರೇಬಿಯಾದ ಸಂಪರ್ಕದ ಬಗೆಗಿನ ಆರೋಪವನ್ನು ಆಯೋಗ ಕೂಲಂಕಷವಾಗಿ ಪರಿಶೀಲಿಸಿದೆ. ಆದರೆ ಸೆಪ್ಟಂಬರ್ 11ರ ಘಟನೆಗೆ ಸೌದಿ ಅರೇಬಿಯಾ ಸರಕಾರ ನೆರವು ನೀಡಿದ ಬಗ್ಗೆ ಅಥವಾ ಸೌದಿ ಅರೇಬಿಯಾದ ಯಾವ ಅಧಿಕಾರಿಯೂ ವೈಯಕ್ತಿಕವಾಗಿ ಇದಕ್ಕೆ ನೆರವು ನೀಡಿರುವುದಕ್ಕೆ ಯಾವ ಪುರಾವೆಯೂ ಸಿಕ್ಕಿಲ್ಲ.
2015ರ ಜೂನ್ ತಿಂಗಳಲ್ಲಿ ಸಿಐಎ ಇನ್‌ಸ್ಪೆಕ್ಟರ್ ಜನರಲ್ ನೀಡಿದ ವರದಿಯಲ್ಲಿ ಕೂಡಾ, ಸೌದಿ ಸರಕಾರ ಸೆಪ್ಟಂಬರ್ 11ರ ಘಟನೆಯ ಮೊದಲು ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡಿದೆ ಎನ್ನುವುದನ್ನು ದೃಢಪಡಿಸುವ ಯಾವ ವಿಶ್ವಾಸಾರ್ಹ ಮಾಹಿತಿಯೂ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಸಿಐಎಯ ಪೂರ್ವ ವಿಭಾಗದ ಬಳಿ ಇರುವ ಮತ್ತು ಭಯೋತ್ಪಾದಕ ನಿಗ್ರಹ ಕೇಂದ್ರದ ಬಳಿ ಇರುವ ಜನರು ಹೇಳುವ ಪ್ರಕಾರ, ಸರಕಾರದಲ್ಲೇ ಈ ಉಗ್ರರ ಅನುಕಂಪ ಹೊಂದಿರುವವರು ಅಲ್ ಖಾಯಿದಾಗೆ ಬೆಂಬಲ ನೀಡಿರುವ ಸಾಧ್ಯತೆ ಇದೆ ಎಂದು ವಿವರಿಸಲಾಗಿದೆ.
ಸೌದಿ ನಿಲುವು ಏನು?
ಸೌದಿ ಅರೇಬಿಯಾದ ವಿದೇಶಾಂಗ ಖಾತೆ ಸಚಿವ ಆದಿಲ್ ಅಲ್ ಜುಬೈರ್ ವಾಷಿಂಗ್ಟನ್‌ನಲ್ಲಿ ಹೇಳಿರುವಂತೆ, ಜನರು ಈ 28 ಪುಟಗಳನ್ನು ನೋಡಿದರೆ ಮತ್ತು ದಾಳಿ ಬಗೆಗಿನ ತನಿಖೆಯ ಫಲಿತಾಂಶವನ್ನು ನೋಡಿದರೆ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬ ನಿರ್ಧಾರಕ್ಕೆ ಯಾರು ಬೇಕಾದರೂ ಬರಬಹುದು. ಇದು ನಿರೂಪಿಸಲಾಗದು ಹಾಗೂ ಯಾರೂ ಇದರಿಂದ ದೊಡ್ಡ ಪ್ರಯೋಜನ ಪಡೆಯಲಾಗದು. ಅದರಲ್ಲಿ ಏನೂ ಇಲ್ಲ ಎಂದು ಝುಬೈರ್ ಸ್ಪಷ್ಟಪಡಿಸಿದ್ದರು.
2002ರಲ್ಲಿ ಸೌದಿ ಅರೇಬಿಯಾ ಈ 28 ಪುಟಗಳ ವರದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು. ಹಾಗೆ ಬಹಿರಂಗಪಡಿಸಿದಾಗ ಮಾತ್ರ ಸರಕಾರ ಯಾವುದೇ ಆರೋಪಗಳ ಬಗ್ಗೆ ಸ್ಪಂದಿಸಲು ಸಾಧ್ಯ ಹಾಗೂ ಸೌದಿ ಅರೇಬಿಯಾದ ನಾಗರಿಕರು ಯಾರೇ ಈ ದಾಳಿಯಲ್ಲಿ ಪಾಲ್ಗೊಂಡಿದ್ದರೂ ಅವರನ್ನು ಶಿಕ್ಷಿಸಲು ಸಾಧ್ಯ. ಅದು ಬಿಟ್ಟು ಆ ಖಾಲಿ ಹಾಳೆಗಳ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಾಗದು ಎಂದು ಹೇಳಿದ್ದರು.
ಎಫ್‌ಬಿಐ ಏನು ಹೇಳುತ್ತದೆ?
ಅಮೆರಿಕ ಕಾಂಗ್ರೆಸ್ 2015ರಲ್ಲಿ, ಸೆಪ್ಟಂಬರ್ 11ರ ಪರಾಮರ್ಶೆ ಆಯೋಗವನ್ನು ನೇಮಕ ಮಾಡಿ, ಇತ್ತೀಚಿನ ವರ್ಷಗಳಲ್ಲಿ ಕ್ರೋಡೀಕರಿಸಿದ ಮಾಹಿತಿಗಳ ಬಗ್ಗೆ ಪರಿಶೀಲಿಸಲು ಸೂಚಿಸಿತು. ಈ ಆಯೋಗ ಪ್ರಮುಖ ಎಫ್‌ಬಿಐ ಸಿಬ್ಬಂದಿಯನ್ನು ಸಂದರ್ಶಿಸಿ, ಸೆಪ್ಟಂಬರ್ 11ರ ಘಟನೆ ಬಗ್ಗೆ ಯಾವುದೇ ಹೊಸ ಮಾಹಿತಿಯನ್ನು ಪತ್ತೆ ಮಾಡಲಾಗಿದಯೇ ಎಂದು ಕೇಳಿತು.
2015ರ ಮಾರ್ಚ್‌ನಲ್ಲಿ ನೀಡಿದ ತನ್ನ ವರದಿಯಲ್ಲಿ ಆಯೋಗ, ಸೆಪ್ಟಂಬರ್ 11ರ ಘಟನೆಗೆ ಸಂಬಂಧಿಸಿದಂತೆ ಮೂಲ ತನಿಖೆಯಲ್ಲಿ ಕಂಡುಕೊಂಡ ಅಂಶವನ್ನು ಬದಲಿಸುವಂಥ ಯಾವ ಹೊಸ ಮಾಹಿತಿಯೂ ಲಭ್ಯವಿಲ್ಲ. ಈ ಘಟನೆಗೆ ಕಾರಣರಾದವರ ಬಗ್ಗೆ ಅಥವಾ ದಾಳಿಕೋರರಿಗೆ ಬೆಂಬಲ ನೀಡಿರುವ ಬಗ್ಗೆ ಯಾವ ಹೊಸ ಮಾಹಿತಿಯೂ ಇಲ್ಲ ಎಂದು ಸ್ಪಷ್ಟಪಡಿಸಿತು.
ಕೃಪೆ: ದಿ ಎಕನಾಮಿಕ್ ಟೈಮ್ಸ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X