ವೃದ್ಧೆ ಸಾವು
ಕೋಟ, ಜು.3: ಬೇಳೂರು ಗ್ರಾಮದ ಕೆದೂರು ಸ್ಫೂರ್ತಿಧಾಮದ ವೃದ್ಧಾಶ್ರಮದಲ್ಲಿದ್ದ ಗಂಗಮ್ಮ(89) ಎಂಬವರು ಜು.2ರಂದು ರಾತ್ರಿ 8ಗಂಟೆಗೆ ಮೃತಪಟ್ಟಿದ್ದಾರೆ.
ಮೃತರು ಮೂಲತಃ ಶಂಕರನಾರಾಯಣದ ನಿವಾಸಿ ಎಂಬ ಬಗ್ಗೆ ಮಾಹಿತಿ ಇದೆ. ಮೃತರ ವಾರಸುದಾರರು ಇದ್ದಲ್ಲಿ ವೃದ್ಧಾಶ್ರಮ ಅಥವಾ ಕೋಟ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
Next Story





