ನಾನಾವತಿ ಪ್ರಕರಣ: ನಾನಾ ಅವತರಣಿಕೆಗೆ ರುಸ್ತುಂ ಸೇರ್ಪಡೆ

ಭಾರತೀಯ ನೌಕಾಪಡೆ ಅಧಿಕಾರಿಯಾಗಿದ್ದ ಕವಾಸ್ ಮಾಣಿಕ್‌ಷಾ ನಾನಾವತಿ ತಮ್ಮ ಬ್ರಿಟಿಷ್ ಪತ್ನಿಯ ಪ್ರಿಯಕರನನ್ನು ಮುಂಬೈ ನಲ್ಲಿ ಹತ್ಯೆ ಮಾಡಿ, ಪೊಲೀಸರಿಗೆ ಶರಣಾದರು. ಈ ಹತ್ಯೆ ಪ್ರಕರಣದ ವಿಚಾರಣೆಯನ್ನು ಸ್ಥಳೀಯ ಮಾಧ್ಯಮ ವಿಸತ್ತೃತವಾಗಿ ಪ್ರಚಾರ ಮಾಡಿತು. ಈ ಪ್ರಕರಣವನ್ನೇ ಕಥಾವಸ್ತುವಾಗಿ ಇಟ್ಟುಕೊಂಡು ಎರಡು ಹಿಂದಿ ಚಲನಚಿತ್ರಗಳು ನಿರ್ಮಾಣವಾದವು. ಇದೀಗ ಮೂರನೆ ಶೀರ್ಷಿಕೆ ಈ ಪಟ್ಟಿಗೆ ಸೇರಿದೆ. ಟಿನು ಸುರೇಶ್ ದೇಸಾಯಿ ನಿರ್ದೇಶನ ಹಾಗೂ ಅಕ್ಷಯ್ ಕುಮಾರ್ ಅಭಿನಯದ ರುಸ್ತುಂ ಚಿತ್ರ ಮುಂದಿನ ತಿಂಗಳ 12ರಂದು ಬಿಡುಗಡೆಯಾಗಲಿದೆ. ರುಸ್ತುಂ ಪವ್ರಿಯಾಗಿ ಅಕ್ಷಯ್ ಕುಮಾರ್ ಜತೆ ಇಲೆನಾ ಡಿಕಬ್ರಾೂಜ್ ಹಾಗೂ ಅರ್ಜನ್ ಬಜ್ವಾ ತಾರಾಗಣದಲ್ಲಿದ್ದಾರೆ.
ನಾನಾವತಿ ಪ್ರಕರಣ ಭಾರತದಲ್ಲಿ ವಿಕೃತ ಆಕರ್ಷಣೆಗೆ ಒಳಗಾಯಿತು. ಮುಂಬೈ ಪತ್ರಿಕೆಗಳು ಇದನ್ನು ವಿಸ್ತೃತವಾಗಿ ವರದಿ ಮಾಡಿದವು. ಅದರಲ್ಲೂ ಮುಖ್ಯವಾಗಿ ಬ್ಲಿಟ್ಸ್ ನಿಯತಕಾಲಿಕ ಇದನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಬಿಂಬಿಸಿತು. ತಾನೇ ಹತ್ಯೆ ಮಾಡಿದ್ದಾಗಿ ನಾನಾವತಿ ಹೇಳಿಕೊಂಡರೂ, ಸಾರ್ವಜನಿಕ ಅನುಕಂಪ ಅವರ ಕಡೆಗೇ ಅಧಿಕವಾಗಿ ಇತ್ತು. ಪತ್ನಿ ಸಿಲ್ವಿಯಾ, ತಮ್ಮ ಸ್ನೇಹಿತ ಪ್ರೇಮ್ ಅಹುಜಾ ಜತೆ ಪ್ರೇಮಸಂಬಂಧ ಹೊಂದಿದ್ದು ನಾನಾವತಿ ಗಮನಕ್ಕೆ ಬರುತ್ತದೆ. 1959ರ ಏಪ್ರಿಲ್ 27ರಂದು ನಾನಾವತಿ ಸಿಲ್ವಿಯಾ ಹಾಗೂ ಮೂವರು ಮಕ್ಕಳನ್ನು ದಕ್ಷಿಣ ಮುಂಬೈನ ಮೆಟ್ರೊ ಸಿನೆಮಾ ಮಂದಿರದಲ್ಲಿ ಬಿಟ್ಟು ಅಹುಜಾ ಮನೆಗೆ ಹೋಗಿ ಸಿಲ್ವಿಯಾಳನ್ನು ಮದುವೆಯಾಗುವಂತೆ ಆತನನ್ನು ಕೇಳಿಕೊಳ್ಳುತ್ತಾರೆ. ಅಹುಜಾ ಅದಕ್ಕೆ ನಿರಾಕರಿಸಿದಾಗ ಆತನನ್ನು ಗುಂಡಿಟ್ಟು ಕೊಂದು ಪೊಲೀಸರಿಗೆ ಶರಣಾಗುತ್ತಾರೆ.
ಅಂದು ಭಾರತದಲ್ಲಿ ಜಾರಿಯಲ್ಲಿದ್ದ ನ್ಯಾಯ ತೀರ್ಮಾನ ವ್ಯವಸ್ಥೆಯಲ್ಲಿ ಸೆಷನ್ಸ್ ನ್ಯಾಯಾಲಯ ಮಟ್ಟದ ನ್ಯಾಯತೀರ್ಮಾನದಲ್ಲಿ ಪೂರ್ವ ನಿಯೋಜಿತ ಕೃತ್ಯ ಎಸಗಿದ ನಾನಾವತಿಯನ್ನು ಅಮಾಯಕ ಎಂದು ಪರಿಗಣಿಸಿತು. ಪ್ರಕರಣವನ್ನು ಮುಂಬೈ ಹೈಕೋರ್ಟ್‌ಗೆ ಒಪ್ಪಿಸಲಾಯಿತು. ಅಹುಜಾ ಬೇಜವಾಬ್ದಾರಿಯ ಪ್ಲೇಬಾಯ್ ಎಂಬ ಮಾಧ್ಯಮ ವರದಿಗಳಿಂದ ನ್ಯಾಯಾಧಿಕಾರಿ ಪ್ರೇರಿತರಾಗಿದ್ದರು ಎಂದು ನಂಬಲಾಗಿತ್ತು. ಭಾರತ ಸರಕಾರ ಆ ಬಳಿಕ ನ್ಯಾಯ ತೀರ್ಮಾನ ವ್ಯವಸ್ಥೆಯನ್ನು ರದ್ದು ಮಾಡಿತು.
ಮುಂಬೈ ಹೈಕೋರ್ಟ್ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತಾದರೂ ಅಲ್ಲೂ ನಾನಾವತಿ ವಿರುದ್ಧ ತೀರ್ಪು ಬಂತು. ಅಪಾರ ಸಾರ್ವಜನಿಕ ಬೆಂಬಲ, ಬೇಜವಾಬ್ದಾರಿಯುತ ಮಾಧ್ಯಮ ಪ್ರಚಾರ ಹಾಗೂ ನಾನಾವತಿ ಉನ್ನತ ಮಟ್ಟದಲ್ಲಿ ಹೊಂದಿದ್ದ ಸಂಪರ್ಕದ ಕಾರಣದಿಂದಾಗಿ ಪ್ರೇಮ್ ಅಹುಜಾ ಸಹೋದರಿ ಮಮೀ ಅಹುಜಾ, ಈ ಅಧಿಕಾರಿಗೆ ಕ್ಷಮಾದಾನ ನೀಡುವಂತೆ ಮನವೊಲಿಸಿದರು. ಬಳಿಕ ಅವರು ಭಾರತದಿಂದ ವಲಸೆ ಹೋಗಿ ಕುಟುಂಬದೊಂದಿಗೆ ಕೆನಡಾದಲ್ಲಿ ನೆಲೆಸಿದ ಅವರು 2003ರಲ್ಲಿ ಮೃತಪಟ್ಟರು.
ದೇಶಾದ್ಯಂತ ಮನೆಮಾತಾಗಿದ್ದ ಈ ಪ್ರಕರಣವನ್ನು ಮೊದಲು ಆರ್.ಕೆ.ನಯ್ಯರ್ ‘ಯಹ್ ರಾಸ್ತೆ ಹೈ ಪ್ಯಾರ್ ಕೇ’ ಹೆಸರಿನಲ್ಲಿ ತೆರೆಗೆ ತಂದರು. ಚಿತ್ರದ ನಿರ್ಮಾಪಕರಾಗಿದ್ದ ಸುನೀಲ್ ದತ್, ಪೈಲಟ್ ಅನಿಲ್ ಪಾತ್ರವನ್ನು ನಿರ್ವಹಿಸಿದ್ದರು. ಅನಿಲ್ ಪ್ಯಾರಿಸ್ ಮೂಲದ ನೀನಾ (ಲೀಲಾ ನಾಯ್ಡು) ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನೂ ಪಡೆದಿದ್ದ. ಅನಿಲ್ ಹೊರದೇಶಕ್ಕೆ ಹೋಗಿದ್ದಾಗ ಅನಿಲ್‌ನ ಸ್ನೇಹಿತ ಅಶೋಕ್ (ರಹಮಾನ್), ನೀನಾಳನ್ನು ಸೆಳೆದುಕೊಂಡಿದ್ದ. ವಿದೇಶದಿಂದ ಅನಿಲ್ ವಾಪಸಾದಾಗ, ತನ್ನ ಹಿಂದೆ ಏನು ನಡೆದಿದೆ ಎನ್ನುವುದು ತಿಳಿದು ಆತನ ಮನಸ್ಸು ಛಿದ್ರವಾಗುತ್ತದೆ. ಆತ ಅಶೋಕ್ ವಿರುದ್ಧ ಸಂಘರ್ಷಕ್ಕೆ ಇಳಿಯುತ್ತಾನೆ. ಇಬ್ಬರ ನಡುವಿನ ಜಗಳದಲ್ಲಿ ಅಶೋಕ್ ಸಾಯುತ್ತಾನೆ.
ಈ ಭಾವಸೂಕ್ಷ್ಮ ಕಥಾವಸ್ತುವನ್ನು ಹೊಂದಿದ್ದರೂ, ‘ಯಹ್ ರಾಸ್ತೆ ಹೈ ಪ್ಯಾರ್ ಕೇ’ ಚಿತ್ರ ಪ್ರೇಕ್ಷಕರ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಯಿತು. ಚಿತ್ರ ಜನಮನ್ನಣೆ ಪಡೆಯಲಿಲ್ಲ. ಇಂಥ ಕಲಬೆರಕೆ ಸಂಸ್ಕೃತಿಯನ್ನು ಬಿಂಬಿಸುವ ಸಾಹಸಿ ಚಿತ್ರ ಎನಿಸಿಕೊಂಡರೂ ಅಂದಿನ ಕಾಲದ ನೈತಿಕ ಮನೋಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತೆರೆಯ ಮೇಲಿನ ಘಟನಾವಳಿಗಳಲ್ಲಿ ಬಹಳಷ್ಟನ್ನು ಬಚ್ಚಿಡಲಾಯಿತು. ಅಶೋಕ್‌ನ ಸೆಳೆತಕ್ಕೆ ನೀನಾ ಸಮರ್ಪಕವಾಗಿ ಸ್ಪಂದಿಸಲಿಲ್ಲ. ಮದ್ಯಪಾನದ ಅಮಲಿನಲ್ಲಿ ಆಕೆ ಸೆಳೆತಕ್ಕೆ ಒಳಗಾದಳು ಎಂದು ಬಿಂಬಿಸಲಾಯಿತು. ಅಂತಿಮ ಟ್ವಿಸ್ಟ್‌ನಲ್ಲಿ ಅನಿಲ್ ಕೊಲೆಗಾರ ಅಲ್ಲ ಎಂದು ಬಹಿರಂಗಪಡಿಸಿತು. ಈ ದುರ್ಬಲ ಕಥಾಹಂದರ ಚಿತ್ರಕ್ಕೆ ಪ್ರತಿಕೂಲವಾಗಿ ಪರಿಣಮಿಸಿತು. ವಾಸ್ತವ ಘಟನೆ ಇನ್ನೂ ಸಾರ್ವಜನಿಕರ ಮನಸ್ಸಿನಲ್ಲಿ ಹಸಿಯಾಗಿದ್ದುದರಿಂದ ಈ ದುರ್ಬಲ ಕಥಾಹಂದರವನ್ನು ಸಹಜವಾಗಿಯೇ ಜನ ತಿರಸ್ಕರಿಸಿದರು.
‘ಯಹ್ ರಾಸ್ತೆ ಹೈ ಪ್ಯಾರ್ ಕೇ’ ಚಿತ್ರ ಕಳಪೆಯಾಗಲು ಲೀಲಾ ನಾಯ್ಡು ಅವರ ತೀರಾ ಕೆಳಮಟ್ಟದ ನಟನಾ ಕೌಶಲ್ಯ ಕೂಡಾ ಕಾರಣವಾಯಿತು. ತೀರಾ ಆಧುನಿಕ ಹಾಗೂ ಪಾಶ್ಚಾತ್ಯ ಜೀವನಶೈಲಿಯ ನೀನಾ ಪಾತ್ರಕ್ಕೆ ಆಕೆ ಸೂಕ್ತ ಆಯ್ಕೆಯಾಗಿದ್ದರೂ, ಆಕೆಯ ಪ್ರದರ್ಶನ ತೀರಾ ಸಾಮಾನ್ಯವಾಗಿದ್ದುದು ಚಿತ್ರಕ್ಕೆ ಮಾರಕವಾಗಿ ಪರಿಣಮಿಸಿತು. ಸುನಿಲ್ ದತ್ ಕೂಡಾ ಕೆಲ ಪ್ರಭಾವಿ ಕ್ಷಣಗಳನ್ನು ಕಟ್ಟಿಕೊಂಡ ಹೊರತಾಗಿಯೂ, ಉತ್ಕೃಷ್ಟ ನಿರ್ವಹಣೆಯನ್ನೇನೂ ತೋರಲಿಲ್ಲ. ಈ ಚಿತ್ರದಲ್ಲಿ ಗಮನ ಸೆಳೆದ ಅಂಶವೆಂದರೆ, ಅಶೋಕ್ ಕುಮಾರ್ ಹಾಗೂ ಎದುರಾಳಿ ವಕೀಲನಾಗಿದ್ದ ಮೋತಿಲಾಲ್‌ನ ಪಾತ್ರ. ಇದರ ಜತೆಗೆ ರವಿಯ ಸಂಗೀತ ಹಾಗೂ ಕೆ.ಎಚ್.ಕಪಾಡಿಯಾ ಅವರ ಛಾಯಾಗ್ರಹಣ.
ಒಂದು ದಶಕದ ನಂತರ ಈ ಹತ್ಯೆ ಘಟನೆಯನ್ನು ದುರ್ಬಲವಾಗಿ ಕಟ್ಟಿಕೊಡುವ ಮತ್ತೊಂದು ಚಿತ್ರ ತೆರೆ ಕಂಡಿತು. ಕೆ.ಎ.ಅಬ್ಬಾಸ್ ಅವರ ಕಥೆಯನ್ನಾಧರಿಸಿದ ಗುಲ್ಜಾರ್ ಅವರ ‘ಅಚಾನಕ್’ ಚಿತ್ರ 1973ರಲ್ಲಿ ತೆರೆ ಕಂಡಿತು. ಇದರಲ್ಲೂ ತ್ರಿಕೋನ ಪ್ರೇಮ ಕೊಲೆಯಲ್ಲಿ ಪರ್ಯಾವಸಾನವಾಗುವ ಚಿತ್ರಣವಿದೆ. ಸೇನೆಯ ಮೇಜರ್ ರಣಜೀತ್ ಖನ್ನಾ (ವಿನೋದ್ ಖನ್ನಾ) ಮನೆಗೆ ಮರಳಿದಾಗ ಪತ್ನಿ ಪುಷ್ಪಾ (ಲಿಲ್ಲಿ ಚಕ್ರವರ್ತಿ) ತನ್ನ ಆಪ್ತ ಸ್ನೇಹಿತ ಪ್ರಕಾಶ್ (ರವಿರಾಜ್) ಜತೆ ಅನುರಕ್ತಳಾಗಿರುವುದು ಗಮನಕ್ಕೆ ಬರುತ್ತದೆ. ಇಬ್ಬರನ್ನೂ ಹತ್ಯೆ ಮಾಡುವ ಖನ್ನಾ ಮರಣದಂಡನೆಗೆ ಗುರಿಯಾಗುತ್ತಾನೆ. ಬಳಿಕ ಜೈಲಿನಿಂದ ತಪ್ಪಿಸಿಕೊಂಡು, ಪುಷ್ಪಾಳ ಮಂಗಳಸೂತ್ರವನ್ನು ಗಂಗಾನದಿಯಲ್ಲಿ ಮುಳುಗಿಸುತ್ತಾನೆ. ಪೊಲೀಸರು ಈತನ ಹುಡುಕಾಟದಲ್ಲಿದ್ದಾಗ ತೀವ್ರ ಗಾಯಗೊಳ್ಳುತ್ತಾನೆ. ಪವಾಡಸದೃಶವಾಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಾನೆ. ಆದರೆ ಈಗಾಗಲೇ ಅಪರಾಧಿಯಾಗಿರುವುದರಿಂದ ಆತನನ್ನು ನೇಣುಗಂಬಕ್ಕೇರಿಸಲಾಯಿತು.
ಇಲ್ಲಿ ಕಥೆ ತೀರಾ ಸರಳವಾಗಿದ್ದರೂ, ಗುಲ್ಜಾರ್ ಶೈಲಿಯಲ್ಲೇ ಇತ್ತು. ಬಹುಹಂತಗಳಲ್ಲಿ ಅನಾವರಣಗೊಳ್ಳುತ್ತಾ, ವಿಚಿತ್ರ ಶೈಲಿಯಲ್ಲಿತ್ತು. ಈ ಚಿತ್ರ ಆರಂಭವಾಗುವುದು ಆಸ್ಪತ್ರೆಯ ದೃಶ್ಯದೊಂದಿಗೆ. ಮಾರಣಾಂತಿಕವಾಗಿ ಗಾಯಗೊಂಡಿದ್ದ ಖನ್ನಾನನ್ನು ಉಳಿಸಲು ಪ್ರಯತ್ನ ನಡೆಯುತ್ತಿರುತ್ತದೆ. ಹಲವು ಪ್ಲ್ಯಾಷ್‌ಬ್ಯಾಕ್‌ಗಳು, ಅದರೊಳಗೆ ಮತ್ತೆ ಪ್ಲ್ಯಾಷ್‌ಬ್ಯಾಕ್‌ಗಳು ಕಥೆಯಲ್ಲಿ ತುಂಬಿಕೊಳ್ಳುತ್ತವೆ. ‘ಅಚಾನಕ್’ ಚಿತ್ರ ಯಾವುದೇ ಘಟನೆಗಳನ್ನು ದುರ್ಬಲಗೊಳಿಸಿಲ್ಲ ಅಥವಾ ಪುಷ್ಪಾಳ ದಾಂಪತ್ಯದ್ರೋಹದ ಘಟನೆಗಳನ್ನು ಮುಚ್ಚಿಟ್ಟಿಲ್ಲ. ಪ್ರಕಾಶ್ ಜತೆ ಅನುರಕ್ತಳಾಗಿರುವ ರೀತಿಯಲ್ಲೇ ಬಿಂಬಿಸಲಾಗಿತ್ತು.
ಪುಷ್ಪಾ ಹಾಗೂ ಪ್ರಕಾಶ್ ಅವರ ಹತ್ಯೆ ಘಟನೆಗಳನ್ನು ಸಂಪಾದಿಸುವಲ್ಲಿ ಚುರುಕುತನ ಈ ಚಿತ್ರದಲ್ಲಿ ಗಮನ ಸೆಳೆಯುತ್ತದೆ. ಪ್ರತಿ ದೃಶ್ಯಗಳಲ್ಲೂ, ಗಣಜೀತ್ ಅಪರಾಧದ ಚಿತ್ರಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಒಬ್ಬ ವಿರೋಧಿಯನ್ನು ಹೇಗೆ ಕೊಲ್ಲಬೇಕು ಎಂಬ ಹಿರಿಯ ಸೇನಾಧಿಕಾರಿಯ ಸೂಚನೆಗಳ ಪ್ಲ್ಯಾಷ್‌ಬ್ಯಾಕ್ ಮತ್ತೆ ಮತ್ತೆ ಆತನಲ್ಲಿ ಕಾಣಿಸಿಕೊಳ್ಳುತ್ತವೆ. ಮತ್ತೆ ಹತ್ಯೆಯ ಘಟನೆಗೆ ಚಿತ್ರ ತೆರೆದುಕೊಳ್ಳುತ್ತದೆ. ವಾಸ್ತವವಾಗಿ ಹತ್ಯೆ ಮಾಡುವ ಚಿತ್ರಣ ಸಿನೆಮಾದಲ್ಲಿ ಕಾಣಸಿಗುವುದಿಲ್ಲ. 1970ರಲ್ಲಿದ್ದ ಸಂಪಾದನಾ ತಂತ್ರಗಳಲ್ಲಿ, ಝೂಮ್ ಲೆನ್ಸ್ ಗಳ ಸಮರ್ಪಕ ಬಳಕೆ ಅಚ್ಚರಿ ಹುಟ್ಟಿಸುತ್ತದೆ ಹಾಗೂ ಇಂದಿನ ಚಿತ್ರಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ತಂತ್ರಗಳನ್ನು ಇಲ್ಲಿ ಅನುಸರಿಸಲಾಗಿದೆ.
ಇಷ್ಟಾಗಿಯೂ ‘ಅಚಾನಕ್’ ನೈತಿಕವಾಗಿ ಹೆಚ್ಚು ಗೊಂದಲಕಾರಿ ಮತ್ತು ಎರಡು ಚಿತ್ರಗಳ ಪೈಕಿ ಹೆಚ್ಚಿನ ಶ್ರೀಮಂತಿಕೆ ಹೊಂದಿದ್ದ ಚಿತ್ರ. ಗುಲ್ಜರ್ ನಿರ್ಮಾಣದ ಚಿತ್ರಗಳಲ್ಲಿ ಅಪರೂಪಕ್ಕೆ ಎಂಬಂತೆ ಸನ್ ಮೇಲೆ ಬಂಧು ಚಿತ್ರದ ಲಯ ಹೊರತುಪಡಿಸಿದಂತೆ ಬೇರೆ ಯಾವ ಹಾಡುಗಳೂ ಚಿತ್ರದಲ್ಲಿರಲಿಲ್ಲ.
ನಾನಾವತಿ ಪ್ರಕರಣದ ಬಗೆಗಿನ ಉಲ್ಲೇಖವನ್ನು ಬಿಂಬಿಸಿದ ಇತ್ತೀಚಿನ ಚಿತ್ರವೆಂದರೆ, ಅನುರಾಗ್ ಕಶ್ಯಪ್ ಅವರ ‘ಬಾಂಬೆ ವೆಲ್ವೆಟ್’ ಚಿತ್ರ. 2015ರಲ್ಲಿ ತೆರೆ ಕಂಡ ಈ ಚಿತ್ರದ ಸೆಲ್ವಿಯಾ ಹಾಡಿನಲ್ಲಿ ಅನುಷ್ಕಾ ಶರ್ಮಾ, ನೈಟ್‌ಕ್ಲಬ್ ಗಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸದಾ ಗುಂಯ್‌ಗುಡುತ್ತಿದೆ. ಈ ಹತ್ಯೆ ಘಟನೆ ಹಿನ್ನೆಲೆಯಲ್ಲಿ ಎದ್ದ ಟ್ಯಾಬ್ಲೋಯ್ಡೋ ಹುಚ್ಚು ಉನ್ಮಾದವನ್ನು ಬಿಂಬಿಸುತ್ತದೆ.







