ಡ್ರಗ್ಸ್ ದಂಧೆಯಲ್ಲಿ ಬಾಲಿವುಡ್
ಮಾನ್ಯರೆ,
ಇತ್ತೀಚೆಗೆ ಡ್ರಗ್ಸ್ ಬಗ್ಗೆ ಸಿನಿಮಾ ಜನರು ಕಾಳಜಿ ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ. ಡ್ರಗ್ಸ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ‘ಉಡ್ತಾ ಪಂಜಾಬ್’ ಎನ್ನುವ ಚಿತ್ರ ಸಾಕಷ್ಟು ಸುದ್ದಿ ಮಾಡಿತು ಮತ್ತು ಸಾಮಾಜಿಕ ಸಂದೇಶವನ್ನು ಹೊಂದಿದೆ ಎಂದೂ ಸಿನಿಮಾ ಕರ್ತರು ಹೇಳಿದರು. ಆದರೆ ಇತ್ತೀಚೆಗೆ ಡ್ರಗ್ಸ್ ದಂಧೆಯಲ್ಲಿ ಹಲವು ಸಿನಿಮಾ ನಟರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಡ್ರಗ್ಸ್ ದಂಧೆಯ ಹಿಂದೆ ಬಾಲಿವುಡ್ ಜನರೂ ಕೈ ಸೇರಿಸಿರುವುದು ಬೆಳಕಿಗೆ ಬಂದಿದೆ. ಖ್ಯಾತ ಮಾಡೆಲ್‌ಗಳೂ ಇದರ ಹಿಂದೆ ಇದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ತಮ್ಮ ಸಿನಿಮಾಗಳ ಮೂಲಕ ಜನರಿಗೆ ಉಪದೇಶ ನೀಡುವ ಸಿನಿಮಾ ಮಂದಿ ತಮ್ಮದೇ ಸಹೋದ್ಯೋಗಿಗಳಲ್ಲಿ ಡ್ರಗ್ಸ್ ಕುರಿತಂತೆ ಜಾಗೃತಿ ಮೂಡಿಸಬೇಕಾಗಿದೆ. ಬಾಲಿವುಡ್‌ನ್ನು ಸುತ್ತಿಕೊಂಡಿರುವ ಮಾದಕವ್ಯಸನದ ವಿರುದ್ಧ ತಮ್ಮಿಳಗೆ ಜಾಗೃತಿ ಮೂಡಿಸಲಿ. ಯಾಕೆಂದರೆ ಬಾಲಿವುಡ್ ಜನರನ್ನು, ಶ್ರೀಸಾಮಾನ್ಯರು ತಮ್ಮ ಹೀರೋಗಳು ಎಂದು ಭಾವಿಸುತ್ತಾರೆ. ಅವರೇ ಈ ಡ್ರಗ್ಸ್ ಚಟಕ್ಕೆ ಸಿಕ್ಕಿದರೆ ಅವರು ಸಿನಿಮಾದಲ್ಲಿ ಅದೇನು ಉಪದೇಶ ಮಾಡಿದರೂ ಸಮಾಜಕ್ಕೆ ಪ್ರಯೋಜನವಿಲ್ಲ.





