ಯುವ-ಶ್ರೀಮಂತ ಪ್ರೌಢ ಭಾರತೀಯರಿಗೆ ಬಾದಾಮಿ, ಫಲಾಹಾರ ಇಷ್ಟ!

ಮುಂಬೈ, ಜು.3: ಭರ್ಜರಿ ಶೇ.97ರಷ್ಟು ಯುವ ಹಾಗೂ ಶ್ರೀಮಂತ ಭಾರತೀಯರು ಸಂತೋಷದಲ್ಲಿರುವಾಗ ಬಾದಾಮಿ, ಹಣ್ಣುಗಳು ಹಾಗೂ ಇತರ ಒಣ ಹಣ್ಣುಗಳನ್ನು ತಿನ್ನಲು ಇಚ್ಛಿಸುತ್ತಾರೆಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.
ಬಹುಸಂಖ್ಯಾತ ಯುವ ಹಾಗೂ ಶ್ರೀಮಂತ ಪ್ರೌಢರಿಗೆ ಉಪಾಹಾರ ಸೇವನೆ ಸಂತೋಷದ ಅಭಿವ್ಯಕ್ತಿಯಾಗಿರುತ್ತದೆ. ಯುವ ಹಾಗೂ ಶ್ರೀಮಂತ ಭಾರತೀಯರು ಸಂತೋಷದಲ್ಲಿರುವಾಗ ಅದರಲ್ಲಿ ಶೇ.97 ಮಂದಿ ಬಾದಾಮಿ, ಹಣ್ಣುಗಳು ಹಾಗೂ ಇತರ ಒಣ ಹಣ್ಣುಗಳ ಸೇವನೆಗೆ ಆದ್ಯತೆ ನೀಡುತ್ತಾರೆಂದು ಮಾರುಕಟ್ಟೆ ಸಮೀಕ್ಷಾ ಸಂಸ್ಥೆ ಇಪ್ಸೋಸ್ ನಡೆಸಿದ ಸಮೀಕ್ಷೆಯೊಂದು ಹೇಳಿದೆ.
ಸಮೀಕ್ಷೆಯಲ್ಲಿ ದಿಲ್ಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚಂಡಿಗಡ, ನಾಗಪುರ, ಭೋಪಾಲ್ ಹಾಗೂ ಕೊಯಂಬತ್ತೂರುಗಳ 18-35ರ ವಯೋಮಾನದ ಶ್ರೀಮಂತ ಪುರುಷರು ಹಾಗೂ ಮಹಿಳೆಯರ ಸಂದರ್ಶನ ನಡೆಸಲಾಗಿದೆ.
ನಗರಗಳಲ್ಲಿ ಬೆಂಗಳೂರಿನ ಶೇ.99, ಚಂಡಿಗಡದ ಶೇ.99 ಹಾಗೂ ಕೊಯಂಬತ್ತೂರಿನ ಶೇ.99 ಮಂದಿ ಸಂಶೋಧನ ಸಮಯದಲ್ಲಿ ಬಾದಾಮಿ ತಿನ್ನಲು ಬಯಸುತ್ತೇವೆಂದು ತಿಳಿಸಿದ್ದಾರೆಂದು ಸಮೀಕ್ಷೆ ಹೇಳಿದೆ.
ಯುವಕರು ಹಾಗೂ ಶ್ರೀಮಂತ ಪ್ರೌಢರು ತಮ್ಮ ಉಪಾಹಾರವು ಬಹಳ ರುಚಿಕರ, ವಿನೋದಮಯ, ಬಿಸಿ ಹಾಗೂ ಗರಿಗರಿಯಾಗಿರಬೇಕೆಂದು ಬಯಸುತ್ತಾರೆ. ಅದೇ ವೇಳೆ, ಅದು ಆರೋಗ್ಯಕರ, ಪೌಷ್ಟಿಕ ಹಾಗೂ ಶಕ್ತಿ ನೀಡುವಂತಹದಾಗಿರಬೇಕೆಂದು ಇಚ್ಛಿಸುತ್ತಾರೆ. ಇದು ಆರೋಗ್ಯದ ಉಪಾಹಾರದತ್ತ ಅವರ ಮಾನಸಿಕತೆ ಪಲ್ಲಟಗೊಂಡಿರುವುದನ್ನು ಸೂಚಿಸುತ್ತಿದೆಯೆಂದು ಅದು ತಿಳಿಸಿದೆ.
ಶೇ.30ರಷ್ಟು ಜನರು ತಮಗೆ ಹಸಿವಿಲ್ಲದಿದ್ದಾಗಲೂ ಒತ್ತಡದಲ್ಲಿದ್ದಾಗ ಉಪಾಹಾರದ (ಕುರುಕಲು ತಿಂಡಿ) ಕಡೆಗೆ ಹೆಚ್ಚು ವಾಲುತ್ತಾರೆಂದೂ ಸಮೀಕ್ಷೆ ಬಹಿರಂಗಪಡಿಸಿದೆ.
ಕುತೂಹಲದ ವಿಷಯವೆಂದರೆ ಮುಂಬೈ, ಚಂಡಿಗಡ ಹಾಗೂ ಭೋಪಾಲ್‌ಗಳಲ್ಲಿ ಒತ್ತಡವಿರುವಾಗ ಉಪಾಹಾರ ಸೇವಿಸುವವರು ಕನಿಷ್ಠ ಸಂಖ್ಯೆಯಲ್ಲಿದ್ದರೆ, ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ಹೆಚ್ಚಿದ್ದಾರೆ.
ನ್ಯಾಯಮೂರ್ತಿಗಳ ನೇಮಕಾತಿ ಅರ್ಜಿಗಳ ವೌಲ್ಯಮಾಪನ ಸಮಿತಿಗೆ ಸಿಜೆಐ ತಿರಸ್ಕಾರಹೊಸದಿಲ್ಲಿ, ಜು.3: ನ್ಯಾಯಾಧೀಶರಾಗಿ ಭಡ್ತಿ ಅಥವಾ ನೇಮಕಾತಿ ಶಿಫಾರಸು ಮಾಡಬಹುದಾದವರ ಹೆಸರುಗಳನ್ನು ನಿರ್ಧರಿಸಲು ಅರ್ಜಿಗಳನ್ನು ಕೊಲೀಜಿಯಂಗೆ ಕಳುಹಿಸುವ ಮೊದಲು, ಅವುಗಳ ವೌಲ್ಯಮಾಪನ ನಡೆಸುವುದಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ರಚಿಸುವ ಸರಕಾರದ ಯೋಜನೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ತಿರಸ್ಕರಿಸಿದ್ದಾರೆ.
ವೈಧಾನಿಕ ಮನವಿಯ (ಎಂಒಪಿ) ಕರಡು ರಚಿಸಿರುವ ಸಚಿವರ ಗುಂಪಿನ ನೇತೃತ್ವ ವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಬುಧವಾರ ಸಂಜೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್‌ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಆ ವೇಳೆ ಅವರು ಪರಿಷ್ಕೃತ ಕರಡು ಎಂಒಪಿಯ ಈ ಪರಿಚ್ಛೇದದ ಬಗ್ಗೆ ಅಸಮ್ಮತಿ ಸೂಚಿಸಿದ್ದಾರೆ. ನ್ಯಾಯಮೂರ್ತಿಗಳೇ ನ್ಯಾಯಮೂರ್ತಿ ಗಳನ್ನು ನೇಮಿಸುವ 2 ದಶಕಗಳಿಗೂ ಹಳೆಯ ಕೊಲೀಜಿಯಂ ಪದ್ಧತಿಯ ಬದಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಸಂಸತ್ತು ಜಾರಿಗೊಳಿಸಿತ್ತು. ಆದರೆ, ಅದನ್ನು ಸುಪ್ರೀಂಕೋರ್ಟ್ ಕಳೆದ ವರ್ಷ ಅಕ್ಟೋಬರ್ 16ರಂದು ರದ್ದುಗೊಳಿಸಿತ್ತು.ೊಲೀಜಿಯಂ ವ್ಯವಸ್ಥೆ ಹೆಚ್ಚು ಪಾರದರ್ಶಕವಾಗಿರುವಂತೆ ಮಾಡುವ ಮಾರ್ಗಗಳನ್ನು ನಿರ್ಧರಿಸುವ ಸಮಯದಲ್ಲಿ ಸುಪ್ರೀಂಕೋರ್ಟ್, ರಾಜ್ಯಗಳೊಡನೆ ಸಮಾಲೋಚಿಸಿ ಎಂಒಪಿಯ ಕರಡನ್ನು ಪುನಾರಚಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.







