Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಶೂಟೌಟ್‌ನಲ್ಲಿ ಇಟಲಿಯನ್ನು ಹೊರಗಟ್ಟಿದ...

ಶೂಟೌಟ್‌ನಲ್ಲಿ ಇಟಲಿಯನ್ನು ಹೊರಗಟ್ಟಿದ ಜರ್ಮನಿ

ಸೆಮಿಫೈನಲ್‌ಗೆ ವಿಶ್ವ ಚಾಂಪಿಯನ್

ವಾರ್ತಾಭಾರತಿವಾರ್ತಾಭಾರತಿ4 July 2016 12:09 AM IST
share
ಶೂಟೌಟ್‌ನಲ್ಲಿ ಇಟಲಿಯನ್ನು ಹೊರಗಟ್ಟಿದ ಜರ್ಮನಿ

  ಬೊರ್ಡೆಕ್ಸ್, ಜೂ.3: ಇಲ್ಲಿ ನಡೆದ ಯುರೋ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿ ತಂಡ ಇಟಲಿಯನ್ನು ಮ್ಯಾರಥಾನ್ ಪೆನಾಲ್ಟಿ ಶೂಟೌಟ್‌ನಲ್ಲಿ 6-5 ಅಂತರದಲ್ಲಿ ಬಗ್ಗು ಬಡಿದು ಸೆಮಿಫೈನಲ್ ತಲುಪಿದೆ.
ಕುತೂಹಲ ಕೆರಳಿಸಿದ್ದ ಪಂದ್ಯ ಉಭಯ ತಂಡಗಳು 1-1 ಗೋಲು ದಾಖಲಿಸಿದ ಪರಿಣಾಮವಾಗಿ ಡ್ರಾದಲ್ಲಿ ಕೊನೆಗೊಂಡಿತ್ತು. ಬಳಿಕ ಫಲಿತಾಂಶ ನಿರ್ಧಾರಕ್ಕೆ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿಯ ವಿರುದ್ಧ ಸಾಂಪ್ರದಾಯಿಕ ಎದುರಾಳಿ ಜರ್ಮನಿ ಮೇಲುಗೈ ಸಾಧಿಸಿತು.
ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳಿಂದಲೂ ಗೋಲು ದಾಖಲಾಗಲಿಲ್ಲ. ದ್ವಿತಿಯಾರ್ಧದಲ್ಲಿ ಜರ್ಮನಿಯ ಮಸೂದ್ ಒಝಿಲ್ ಪಂದ್ಯದ 65ನೆ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಖಾತೆ ತೆರೆದರು. ಇವರಿಗೆ ಮಾರಿಯೊ ಗೊಮೆಝ್ ಮತ್ತು ಜೋನ್ಸನ್ ಹೆಕ್ಟರ್ ಗೋಲು ದಾಖಲಿಸಲು ಅವಕಾಶ ಮುಕ್ತಗೊಳಿಸಿದರು.
ಜರ್ಮನಿಯ ಆಟಗಾರ ಜೆರೊಮೆ ಬೊಟೆಂಗ್ ಮಾಡಿಕೊಂಡ ಎಡವಟ್ಟಿನಿಂದಾಗಿ ಇಟಲಿಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಪಂದ್ಯ ಕೊನೆಗೊಳ್ಳಲು 12 ನಿಮಿಷಗಳ ಅವಕಾಶ ಇದ್ದಾಗ ಲಿನಾರ್ಡೊ ಬೋನುಸಿಗೆ ಸಿಕ್ಕಿದ ಪೆನಾಲ್ಟಿ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಅವರು ಬದುಕಿನಲ್ಲೇ ಮೊದಲ ಪೆನಾಲ್ಟಿ ಗೋಲು ಜಮೆ ಮಾಡಿ ತಂಡಕ್ಕೆ 1-1 ಸಮಬಲ ಸಾಧಿಸಲು ನೆರವಾದರು.
 ಪಂದ್ಯ 1-1 ಗೋಲುಗಳೊಂದಿಗೆ ಡ್ರಾದಲ್ಲಿ ಕೊನೆಗೊಂಡಾಗ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿಯ 2 ಮತ್ತು ಇಟಲಿಯ ಎರಡು ಪೆನಾಲ್ಟಿ ಹೊಡೆತಗಳು ಗುರಿ ತಲುಪಲಿಲ್ಲ. ಜರ್ಮನಿ ಪೆನಾಲ್ಟಿ ಶೂಟೌಟ್‌ನಲ್ಲಿ 1976ರಿಂದ ಈ ವರೆಗೆ ಒಮ್ಮೆಯೂ ಸೋತಿಲ್ಲ. 40 ವರ್ಷ ಮತ್ತು 13 ದಿನಗಳ ಮೊದಲು ಅದು ಝಕೊಸ್ಲೊವಾಕಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಅನುಭವಿಸಿತ್ತು.
ಯುರೋಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಕೀಪರ್ ಗಿಯಾನುಲುಗಿ ಬಫನ್ ಮತ್ತು ಜರ್ಮನಿಯ ಮ್ಯಾನುಯೆಲ್ ನೆಯುರ್ ಅವರು ಒತ್ತಡದ ಪರಿಸ್ಥಿತಿಯನ್ನು ಎದುರಿಸಿದರು. ಇದರಲ್ಲಿ ಜರ್ಮನಿಯ ನೆಯುರ್ ಮೇಲುಗೈ ಸಾಧಿಸಿದರು.
ಮುಲ್ಲರ್‌ಗೆ ತಪ್ಪಿದ ಪೆನಾಲ್ಟಿ
 
   ಜರ್ಮನಿಯ ಮತ್ತು ಇಟಲಿಯ ತಲಾ 9 ಮಂದಿ ಪೆನಾಲ್ಟಿ ಶೂಟೌಟ್‌ನಲ್ಲಿ ಚೆಂಡನ್ನು ಗುರಿಯತ್ತ ತಲುಪಿಸುವ ಪ್ರಯತ್ನ ನಡೆಸಿದ್ದರು. ಜರ್ಮನಿಯ 6 ಮಂದಿ ಮತ್ತು ಇಟಲಿಯ 5 ಮಂದಿ ಮಾತ್ರ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಜರ್ಮನಿಯ ಥಾಮಸ್ ಮುಲ್ಲರ್, ಮಸೂದ್ ಒಝಿಲ್, ಸ್ಕಿವಿನ್‌ಸ್ಟೀಜೆರ್ ವಿಫಲರಾದರು. ಮುಲ್ಲರ್ ಚೆಂಡನ್ನು ಗುರಿಯತ್ತ ಹೊಡೆದರೂ ಚೆಂಡನ್ನು ಇಟಲಿಯ ಗೋಲು ಕೀಪರ್ ಗೋಲು ಬಾಕ್ಸ್ ಸೇರದಂತೆ ತಡೆದರು.
 ಒಝಿಲ್ ಬಾರಿಸಿದ ಚೆಂಡು ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿಯಿತು. ಸ್ಕಿವಿನ್‌ಸ್ಟೀಜೆರ್ ಅವರಿಂದ ಚೆಂಡು ಗುರಿ ಸೇರಲಿಲ್ಲ.
ಕೊರುಸ್ ಜರ್ಮನಿಯ ಗೋಲು ಖಾತೆಯನ್ನು ತೆರೆದರು. ಡ್ರಾಕ್ಸೆಲೆರ್ , ಹೂಮೆಲ್ಸ್, ಕಿಮಿಕ್, ಬೋಟೆಂಗ್ ಮತ್ತು ಹೆಕ್ಟೊರ್ ಚೆಂಡನ್ನು ಗುರಿ ತಲುಪಿಸಿದರು.
  ಇಟಲಿಯ ಝಾಝ್, ಪೆಲ್ಲೆ, ಬೊನುಸಿ , ಡರ್ಮಿಯನ್ ಗೋಲು ಗಳಿಸುವಲ್ಲಿ ಎಡವಿದರು. ಇನ್ಸಿಗ್ನೆ, ಬ್ರಾಝ್‌ಗಿಲಿ, ಗಿಯಾಚೆರಿನಿ , ಪಾರ್ಲೊ ಮತ್ತು ಡೆ ಸ್ಕಿಲಿಯೊ ಅವರು ಬಾರಿಸಿದ ಚೆಂಡು ಗುರಿ ಸೇರಿದರೂ ತಂಡಕ್ಕೆ ಗೆಲುವು ದೊರೆಲಿಲ್ಲ.
ಜರ್ಮನಿಯ ಸ್ಟಾರ್ ಆಟಗಾರ ಥಾಮಸ್ ಮುಲ್ಲರ್ ಅವರ ಸ್ಪಾಟ್ ಕಿಕ್ ಮೊದಲ ಬಾರಿ ಗುರಿ ತಪ್ಪಿದೆ. ಬಫನ್ ಅವರು ಮುಲ್ಲರ್‌ಗೆ ಗೋಲು ನಿರಾಕರಿಸಿದರು. ಆದರೆ ತಂಡದ ಸಹ ಆಟಗಾರರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಈ ಗೆಲುವಿನೊಂದಿಗೆ ಜರ್ಮನಿಯ ಮತ್ತೊಮ್ಮೆ ಮೇಜರ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.ಇಟಲಿಗೆ ಅವಕಾಶ ಕೈ ತಪ್ಪಿದೆ. ಖ್ಯಾತ ಗೋಲ್ ಕೀಪರ್ ಗಿಯಾಲುಗಿ ಬಫನ್ ಈ ಸೋಲಿನೊಂದಿಗೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ದೂರ ಸರಿಯುವ ಹಾದಿಯಲ್ಲಿದ್ದಾರೆ. 38ರ ಹರೆಯದ ಬಫನ್ ಅವರು ಹೆಕ್ಟರ್ ಅವರು ಬಾರಿಸಿದ ಚೆಂಡನ್ನು ರಕ್ಷಣಾತ್ಮಕವಾಗಿ ತಡೆಯುವಲ್ಲಿ ವಿಫಲರಾದರು. ಇದು ಇಟಲಿಯ ಸೋಲಿಗೆ ಕಾರಣವಾಯಿತು.
ಜರ್ಮನಿಯ ಗೋಲು ಕೀಪರ್ ಮಾನುಯೆಲ ನ್ಯೂಯೆರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
,,,,,,,,,
‘‘ ಇಟಲಿ ತಂಡ ಕಳೆದ ಎರಡು ವರ್ಷಗಳಿಂದ ಚೆನ್ನಾಗಿ ಆಡಿತ್ತು. ಆದರೆ ತಂಡದ ಆಟಗಾರರು ಮಹತ್ವದ ಪಂದ್ಯದಲ್ಲಿ ಎಡವಿದರು. ಅವರಿಗೆ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಯಾಚಿಸುವೆನು. - ಆ್ಯಂಟೊನಿಯೊ ಕೊಂಟೆ , ಇಟಲಿಯ ಕೋಚ್.
 ‘‘ ಹೆಚ್ಚುವರಿ ಸಮಯದಲ್ಲಿ ಉಭಯ ತಂಡಗಳು ಚೆನ್ನಾಗಿ ಆಡಿತ್ತು. ಯಾರಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಮಗೆ ಪೆನಾಲ್ಟಿ ನಾಟಕೀಯವಾಗಿ ತಪ್ಪಿತು. ಅನುಭವಿ ಆಟಗಾರರಿಗೆ ಸಾಧ್ಯವಾಗದ ಕಾರ್ಯವನ್ನು ಕಿರಿಯ ಆಟಗಾರರು ಮಾಡಿದರು-ಜೋಕಿಮ್ ಲೋವ್, ಜರ್ಮನಿ ತಂಡದ ಕೋಚ್.
,,,,,,,,,,,,,,,,,
ಹೃದಯವೇ ಬಾಯಿಗೆ ಬಂದಂತಾಗಿತ್ತು: ಹೆಕ್ಟರ್
ಬೊರ್ಡೆಕ್ಸ್, ಜು.3: ಜೋನಸ್ ಹೆಕ್ಟರ್ ಅವರ ಪೆನಾಲ್ಟಿ ಕಿಕ್ ಜರ್ಮನಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ವಿರುದ್ಧ ಜರ್ಮನಿ 6-5 ಗೋಲುಗಳ ಅಂತರದಲ್ಲಿ ಗೆಲುವಿಗೆ ಹೆಕ್ಟರ್ ನೆರವಾದರು.

ಜರ್ಮನಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿತು. ಮ್ಯಾರಥಾನ್ ಪೆನಾಲ್ಟಿ ಕಿಕ್‌ನಲ್ಲಿ ಗೋಲು ಗಳಿಸುವ ಸಂದರ್ಭದಲ್ಲಿ ‘‘ ನನಗೆ ಹೃದಯ ಬಾಯಿಗೆ ಬಂದ ಅನುಭವ ಆಗಿತ್ತು’’ ಎಂದು ಆಕ್ಷಣದ ಬಗ್ಗೆ ಬಣ್ಣಿಸಿದ್ದಾರೆ.
 26ರ ಹರೆಯದ ಡಿಫೆಂಡರ್ ಹೆಕ್ಟರ್ ನಿಧಾನವಾಗಿ ಕಾಲಿನಿಂದ ಚೆಂಡನ್ನು ಗುರಿಯತ್ತ ಕಳಹಿಸಿದ್ದರು. ನಿರ್ಣಾಯಕ ಪೆನಾಲ್ಟಿಯಲ್ಲಿ ಹೆಕ್ಟರ್ ಒತ್ತಡಕ್ಕೊಳಗಾಗಿದ್ದರು. ಆದರೆ ಒಝಿಲ್ ಮತ್ತು ಮುಲ್ಲರ್‌ಗೆ ಗೋಲು ನಿರಾಕರಿಸಿದ ಇಟಲಿಯ ಗೋಲು ಕೀಪರ್ ಬಫನ್ ಚೆಂಡನ್ನು ತಡೆಯುವಲ್ಲಿ ಎಡವಿದರು. ಇದರಿಂದಾಗಿ ಇಟಲಿ ಕೂಟದಿಂದ ಹೊರದಬ್ಬಲ್ಪಟ್ಟಿತ್ತು. ಜರ್ಮನಿ ಸೆಮಿಫೈನಲ್ ತಲುಪಿತು.
,,,,,,,,,,,,,,,,,

share
ವಾರ್ತಾಭಾರತಿ
ವಾರ್ತಾಭಾರತಿ
Next Story
X