ನಾಳೆ ವಿದ್ಯುತ್ ನಿಲುಗಡೆ
ಉಡುಪಿ, ಜು.3: ಕುಂದಾಪುರ-ಬೈಂದೂರು 33 ಕೆ.ವಿ. ಮಾರ್ಗದ ವಾಹಕ ಬದಲಾವಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು.5ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:
ಶಿರೂರು, ಬೈಂದೂರು, ಉಪ್ಪುಂದ, ಕಂಬದಕೋಣೆ, ಕಾಲ್ತೊಡು, ಗೋಳಿಹೊಳೆ, ಕೊಲ್ಲೂರು, ನಾವುಂದ, ಮರವಂತೆ, ತ್ರಾಸಿ, ಗಂಗೊಳ್ಳಿ, ಗುಜ್ಜ್ಜಾಡಿ, ಆಲೂರು, ನಾಡಾ, ಬಡಾಕೆರೆ, ಸೇನಾಪುರ, ನೂಜಾಡಿ, ಹೆಮ್ಮಾಡಿ, ಕಟ್‌ಬೇಲ್ತೂರು, ದೇವಲ್ಕುಂದ, ವಂಡ್ಸೆ, ಚಿತ್ತೂರು, ಹೊಸೂರು, ಇಡೂರು, ಜಡ್ಕಲ್, ಮುದೂರು, ತಲ್ಲೂರು, ಕರ್ಕುಂಜೆ, ಕೆರಾಡಿ, ಬೆಳ್ಳಾಲ, ಕೊಡ್ಲಾಡಿ, ಗುಲ್ವಾಡಿ, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳು.
Next Story





