Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾವಲ್ ಕಟ್ಟೆ: ಹಿದಾಯ ಫೌಂಡೇಶನ್ ಜುಬೈಲ್...

ಕಾವಲ್ ಕಟ್ಟೆ: ಹಿದಾಯ ಫೌಂಡೇಶನ್ ಜುಬೈಲ್ ಯುನಿಟ್ ನಿಂದ ಇಫ್ತಾರ್ ಕೂಟ

ಹನೀಫ್ ಪುತ್ತೂರುಹನೀಫ್ ಪುತ್ತೂರು4 July 2016 11:11 AM IST
share
ಕಾವಲ್ ಕಟ್ಟೆ: ಹಿದಾಯ ಫೌಂಡೇಶನ್ ಜುಬೈಲ್ ಯುನಿಟ್ ನಿಂದ ಇಫ್ತಾರ್ ಕೂಟ

ಕಾವಲ್ ಕಟ್ಟೆ ಹಿದಾಯ ಫೌಂಡೇಶನ್ ಸಮುದಾಯ ಸೇವಾ ಕಾಲನಿಯಲ್ಲಿ ಜುಬೈಲ್ ಯುನಿಟ್ ವತಿಯಿಂದ  ಇಫ್ತಾರ್ ಕೂಟ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಮುಹಮ್ಮದ್ ಆರಿಫ್ ಪಡುಬಿದ್ರೆ ಕರಾವಳಿ ಮುಸ್ಲಿಮರ ಇತಿಹಾಸದಲ್ಲಿ ಹಿದಾಯ ಶೇರ್ ಆಂಡ್ ಕೇರ್ ಕಾಲನಿ ಮಹತ್ವ ಪೂರ್ಣ ಯೋಜನೆ. ಇದು ಇಸ್ಲಾಮಿನ ಅನುಯಾಯಿಗಳ ನಿಸ್ವಾರ್ಥ ಸೇವೆಗೆ ಕನ್ನಡಿಯಾಗಿದೆ. ಇಂತಹ ಪ್ರಯತ್ನಗಳು ಈ ಮೊದಲು ನಾನು ಕಂಡು ಕೇಳರಿಯದು ಎಂದು ಹೇಳಿದರು.

ಪವಿತ್ರ ಕುರ್ ಆನ್ ಹೇಳುತ್ತದೆ ನಿಮಗೆ ಇಷ್ಟಪಡುವ ವಸ್ತುವನ್ನು ದಾನ ಮಾಡುವವರೆಗೂ ನಿಮ್ಮ ದಾನವು ಅಲ್ಲಾಹನಿಗೆ ಪ್ರಿಯವಾಗಿರಲಾರದು ಎಂದು. ಅದನ್ನು ಹಿದಾಯ ಫೌಂಡೇಶನ್ ನಿರೂಪಿಸಿದೆ . ಸುಂದರವಾದ ಮನೆಗಳು ಮತ್ತು ಎಲ್ಲಾ ಸೌಲಭ್ಯಗಳು.  ಇದು ಸುಲಭದ ಕೆಲಸವಲ್ಲ ಎಂದು ಟಾಲೆಂಟ್ ರಿಸರ್ಚ್ ಪೌಂಡೇಶನ್ ಇದರ ಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕಿನ ಹಿದಾಯ ಶೇರ್ ಎಂಡ್ ಕೇರ್ ಕಾಲನಿಯಲ್ಲಿ ಕರಾವಳಿ ಜಿಲ್ಲೆಯ ಅತ್ಯಂತ ಕಡು ಬಡತನದಲ್ಲಿ ಹಾಗೂ ಅನಾಥರಾಗಿದ್ದ ಕುಟುಂಬವು ಎಲ್ಲಾ ಮೂಲ ಸೌಲಭ್ಯಗಳೊಂದಿಗೆ ಬದುಕುತ್ತಿದೆ. ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಸಂಕಷ್ಬದಿಂದ ಬದುಕುತ್ತಿದ್ದ ಇಂತಹ ಕುಟುಂಬವನ್ನು ಒಂದೇ ಕಡೆ ಸೇರಿಸಿ ಅವರ ಸರ್ವಾಂಗೀಣ ಕಲ್ಯಾಣ ಮಾಡುವ ಉದ್ದೇಶದಿಂದ ಈ ಕಾಲನಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಸುಮಾರು ಮೂವತ್ತಾರು ಕುಟುಂಬಗಳು ವಾಸಿಸುತ್ತಿದೆ.ಯಾವುದೇ ಆಸರೆ ಇಲ್ಲದೆ ಬದುಕುತ್ತಿದ್ದ ಮಹಿಳೆಯರು ಮಕ್ಕಳು ಇಲ್ಲಿ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಈ ಕುಟುಂಬಗಳು ಇಂದು ಸಮುದಾಯ ಸ್ನೇಹಿಗಳ ನೆರವಿನಿಂದ ಅತ್ಯಂತ ಉತ್ತಮ ಜೀವನ ಅನುಕೂಲತೆ ಪಡೆಯುತ್ತಿದ್ದಾರೆ. ಇವರೊಂದಿಗೆ ಸೇರಿ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುವುದನ್ನು ಹಿದಾಯ ಫೌಂಡೇಶನ್ ಮಾಡುತ್ತಲೇ ಬಂದಿದೆ. ಇದೀಗ ಜುಬೈಲ್ ಯುನಿಟ್ ನ ಇಫ್ತಾರ್ ಕೂಟವು ಅದರ ಒಂದು ಭಾಗವಾಗಿದೆ.

ಹಿದಾಯ ಫೌಂಡೇಶನ್ ಇದರ ಅಧ್ಯಕ್ಷ  ಝಕರಿಯಾ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜುಬೈಲ್ ಯುನಿಟ್ ನ ಅಧ್ಯಕ್ಷ ಇಸ್ಮಾಯೀಲ್ ರಿಯಲ್ ಟೆಕ್ಕ್, ಉಪಾಧ್ಯಕ್ಷ ಆಸಿಫ್ ಡೀಲ್ಸ್, ಜುಬೈಲ್ ಯುನಿಟ್  ಸ್ಥಾಪಕಾಧ್ಯಕ್ಷ ಆಸಿಫ್ ಅಮೇಕೋ, ಅಲ್ ಮುಝೈನ್ ಶರೀಫ್ ಜೋಕಟ್ಟೆ, ಇಮ್ರಾನ್, ಆಫಿಝ್,ನಜೀಬ್ ಇಫ್ತಾರ್ ಕೂಟದಲ್ಲಿ ಜುಬೈಲ್ ಯುನಿಟ್ ನಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ  ಸರ್ಕಲ್ ಇನ್ ಸ್ಪೆಕ್ಟರ್ ರಫೀಕ್,ಉಧ್ಯಮಿ ಫತವುಲ್ಲಾ ತೋನ್ಸೆ,ಇಕ್ಬಾಲ್ ನಾವುಂದ ಕತ್ತಾರ್ ,ಹಿದಾಯ ಮಂಗಳೂರು ಯುನಿಟ್ ಅಧ್ಯಕ್ಷ ಇಮ್ತೀಯಾಝ್ ಆಹ್ಮದ್,  ಆಬಿದ್ ಅಸ್ಗರ್ ಹಾಗೂ ಹಿದಾಯ ಸ್ಥಾಪಕ ಅಧ್ಯಕ್ಷ ಕಾಸೀಂ ಅಹ್ಮದ್  ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಯುನಿಟ್ ವತಿಯಿಂದ ಕಾಲನಿಯ ಮಕ್ಕಳಿಗೆ ಇಸ್ಲಾಮಿಕ್ ವಸ್ತ್ರಗಳನ್ನು  ವಿತರಿಸಲಾಯಿತು.

ಈ ಇಫ್ತಾರ್ ಕೂಟದಲ್ಲಿ ನೂರಾರು ಮಂದಿ ಭಾಗವಹಿಸಿದರು. 

share
ಹನೀಫ್ ಪುತ್ತೂರು
ಹನೀಫ್ ಪುತ್ತೂರು
Next Story
X