ತಮಿಳುನಾಡು: ಟ್ರಕ್‌ನಿಂದ ರೂ. 570 ಕೋಟಿ ವಶ ಪ್ರಕರಣ : ತನಿಖೆಗೆ ಮದ್ರಾಸ್ ಹೈಕೋರ್ಟ್ ಸಿಬಿಐಗೆ ಆದೇಶ

ಹೊಸದಿಲ್ಲಿ, ಜು.4: ತ್ರಿಪುರ್ ಜಿಲ್ಲೆಯಲ್ಲಿ ಕಳೆದ ಚುನಾವಣೆಯ ಸಂದರ್ಭದಲ್ಲಿ 570 ಕೋಟಿ ರೂ. ಹಣ ವಶಪಡಿಸಿಕೊಂಡಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೋಮವಾರ ಮದ್ರಾಸ್ ಹೈಕೋರ್ಟ್ ಸಿಬಿಐಗೆ ಆದೇಶ ನೀಡಿದೆ.
ಕಳೆದ ಮೇ ತಿಂಗಳಲ್ಲಿ ಚುನಾವಣೆಯ ವೇಳೆ ಮೂರು ಟ್ರಕ್‌ಗಳಲ್ಲಿ ಪತ್ತೆಯಾದ ಹಣದ ಬಗ್ಗೆ ಭಾರತೀಯ ಸ್ಟೇಟ್ ಬ್ಯಾಂಕ್ ತನಗೆ ಸೇರಿದ್ದೆಂದು ಹೇಳಿತ್ತು. ಆದರೆ ಡಿಎಂಕೆ ಲೀಡರ್ ಟಿಕೆಎಸ್ ಎಲಂಗೊವನ್ ಅವರು ಟ್ರಕ್ ನಕಲಿ ನಂಬರ‍್ ಪ್ಲೇಟ್ ಹೊಂದಿದ್ದು, ಹಣದ ಕಟ್ಟುಗಳಲ್ಲಿ ಎಕ್ಸಿಸ್ ಬ್ಯಾಂಕ್ ಸೀಲ್ ಇದೆ ಹಾಗೂ ಅಧಿಕಾರಿಗಳು ಹಣ ಎಸ್‌ಬಿಐಗೆ ಸೇರಿದ್ದೆಂದು ನಕಲಿ ದಾಖಲೆ ಸೃಷ್ಟಿಸಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು.
Next Story





