ಪುತ್ತೂರು: ಬೈಕ್ ಅಪಘಾತದ ಗಾಯಾಳು ಮೃತ್ಯು
ಪುತ್ತೂರು, ಜು.3: ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಚಿಕಿತ್ಸೆ ಫಲಕಾರಿಂಾಗದೆ ರವಿವಾರ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರ ಚೇತರಿಸಿಕೊಳ್ಳುತ್ತಿದ್ದಾರೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಲೂಯಿಸ್ ಎಂಬವರ ಪುತ್ರ ಕಿಸ್ಟೋಫರ್ ಡಿಸೋಜ(33) ಮೃತಪಟ್ಟವರು. ಜು. 2 ರಂದು ಸಂಜೆ ಬೆದ್ರಾಳದಿಂದ ಸಾಲ್ಮರ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಕಿಸ್ಟೋಫರ್ ಚಲಾಯಿಸುತ್ತಿದ್ದ ಹೋಂಡಾ ಅ್ಯಕ್ಟೀವಾ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿತ್ತು. ಘಟನೆಯಲ್ಲಿ ಸವಾರ ಕ್ರಿಸ್ಟೋಪರ್ ಹಾಗೂ ಸಹಸವಾರ ಸಾಲ್ಮರ ಗ್ರೇಸಿಸ್ ಡಿಸೋಜರ ಪುತ್ರ ಫ್ರಾನ್ಸಿಸ್ ಗಾಯಗೊಂಡಿದ್ದರು.
ಈ ಪೈಕಿ ಗಂಭೀರ ಗಾಯಗೊಂಡ ಕಿಸ್ಟೋಪರ್‌ರನ್ನು ಮೊದಲಿಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಸಹ ಸವಾರ ಫ್ರಾನ್ಸಿಸ್ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





