ಉಳ್ಳಾಲ ವ್ಯಾಪ್ತಿಯಲ್ಲಿ ಮುಂದುವರಿದ ಕಡಲ್ಕೊರೆತದ ಆರ್ಭಟ: 7 ಮನೆಗಳಿಗೆ ಹಾನಿ
ಉಳ್ಳಾಲ, ಜು.4: ಉಳ್ಳಾಲದಲ್ಲಿ ಕಡಲ್ಕೊರೆತದ ಆರ್ಭಟ ಹೆಚ್ಚಾಗಿದ್ದು ಮುಕ್ಕಚ್ಚೇರಿ, ಸುಭಾಷ್ ನಗರ, ಕೈಕೋ, ಹಿಲೇರಿಯಾ ನಗರದಲ್ಲಿ ಈಗಾಗಲೇ ಸುಮಾರು 7 ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಹಲವಾರು ಮನೆಗಳು ಅಪಾಯದಂಚಿನಲ್ಲಿವೆ.
ಉಳ್ಳಾಲದ ಹಿಲೇರಿಯಾ ಮತ್ತು ಕೈಕೊ ಪ್ರದೇಶಗಳಲ್ಲಿ ಸಮುದ್ರತೀರಕ್ಕೆ ಎತ್ತರದ ಕಲ್ಲಿನ ತಡೆಗೋಡೆಯ ಹಾಕಲಾಗಿದ್ದರೂ ಅದರ ಮೇಲಿಂದ ಬೃಹದಾಕಾರದ ಅಲೆಗಳು ಎದ್ದು 7 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಬಾವ, ಇಸ್ಮಾಯೀಲ್, ಸಲೀಂ, ಬಾನು, ಸಮೀರ, ಆಲಿಯಬ್ಬ, ಫಕೀರ್ ಎಂಬವರ ಮನೆಗೆ ಹಾನಿಯುಂಟಾಗಿದೆ.
ಮನೆಗಳಿಗೆ ನುಗ್ಗಿದ ಸಮುದ್ರದ ನೀರು:
ಈ ಭಾಗದ ಹಲವಾರು ಮನೆಗಳಿಗೆ ಸಮುದ್ರದ ನೀರು ನುಗ್ಗಿದ್ದು, ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕದಳದ ಸಿಬ್ಬಂದಿ ಮೋಟಾರ್ ಪಂಪ್ ಮೂಲಕ ನೀರನ್ನು ಖಾಲಿ ಮಾಡುವ ಕೆಲಸ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರವಾಗಿರುವುದರಿಂದ ತುರ್ತಾಗಿ ಅಗ್ನಿಶಾಮಕದಳದ ಔಟ್‌ಪೋಸ್ಟ್ ಮಾಡಬೇಕೆಂಬ ಒತ್ತಾಯವೂ ಸ್ಥಳೀಯರಿಂದ ಕೇಳಿ ಬಂದಿದೆ.
Next Story





.jpg.jpg)

