ತೆಂಕಮಿಜಾರು : ಮನೆಯ ಮೇಲೆ ಉರುಳಿದ ಮರ

ಮೂಡುಬಿದಿರೆ, ಜು.4: ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯಲ್ಲಿ ರವಿವಾರ ಬೀಸಿದ ಗಾಳಿ ಮಳೆಗೆ ತೆಂಕಮಿಜಾರು ಗ್ರಾಮದ ರುಕ್ಮಿಣಿ ಎಂಬವರ ಮನೆ ಮೇಲೆ ಮರವೊಂದು ಬಿದ್ದ ಪರಿಣಾಮವಾಗಿ ಮನೆಯ ಹೆಂಚು ಮತ್ತು ಪಕ್ಕಾಸು ನೆಲಕ್ಕೆ ಉರುಳಿದ್ದು ಸುಮಾರು 20,000 ರೂ. ನಷ್ಟ ಉಂಟಾಗಿದೆ.
ಪಂಚಾಯತ್ ಸದಸ್ಯ ಹರಿಪ್ರಸಾದ್ ಶೆಟ್ಟಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಹಾಗೂ ಗ್ರಾಮಕರಣಿಕ ನವೀನ್ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





