ಕೊನೆಗೂ ಕೇರಳಕ್ಕೆ ತಲುಪಿದ ನಾಸಿರ್ ಮಅದನಿ

ಬೆಂಗಳೂರು,ಜು.4: ಪಿಡಿಪಿ ಚೇರ್ಮಾನ್ ಅಬ್ದುಲ್ ನಾಸಿರ್ ಮಅದನಿ ಮತ್ತು ಕುಟುಂಬವು ಬೆಂಗಳೂರಿನಿಂದ ಇಂಡಿಗೋ ಏರ್‌ಲೈನ್ಸ್ ವಿಮಾನದ ಮೂಲಕ ರಾತ್ರಿ 8:30ಕ್ಕೆ ಕೊಚ್ಚಿಯ ನೆಡುಂಬಾಶ್ಸೇರಿ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಮಧ್ಯರಾತ್ರಿ 12:30 ಕ್ಕೆ ಅನ್ವರ್‌ಶ್ಶೇರಿಯಲ್ಲಿರುವ ತನ್ನ ನಿವಾಸವನ್ನು ತಲುಪಲಿದ್ದಾರೆ. ಈ ಮೊದಲು ಕೇಂದ್ರ ವಿಮಾನ ಮಂತ್ರಾಲಯದ ಅನುಮತಿಬೇಕೆಂಬ ವಿಮಾನಾಧಿಕಾರಿಗಳ ನಿಲುವಿನಿಂದಾಗಿ ಮಅದನಿಯವರ ಯಾತ್ರೆ ವಿಳಂಬವಾಯಿತು.
ಬೆಂಗಳೂರಿನಿಂದ 1:55ಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಮಅದನಿಯನ್ನು ಕಳುಹಿಸಿಕೊಡಲು ಸಾಧ್ಯವಿಲ್ಲ ಎಂಬ ವಿಮಾನ ಅಧಿಕಾರಿಗಳ ನಿರ್ಧಾರದಿಂದಾಗಿ ಯಾತ್ರೆಗೂ ಮೊಟಕುಗೊಂಡಿತ್ತು. ಯಾತ್ರೆಗೆ ಕೇಂದ್ರ ವಿಮಾನ ಮಂತ್ರಾಲಯದ ಅನುಮತಿ ಅಗತ್ಯ ಎಂದು ವಿಮಾನಾಧಿಕಾರಿಗಳು ನಿಲುವು ತಳೆದ ಹಿನ್ನೆಲೆಯಲ್ಲಿ ಭಾರೀ ವಿವಾದ ಉಂಟಾಗಿತ್ತು. ಬಳಿಕ ಇಂಡಿಗೋ ಏರ್‌ಲೈನ್ಸ್ ವಿಮಾನದ ಉನ್ನತ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತಮ್ಮ ತಪ್ಪಿನ ಬಗ್ಗೆ ಕ್ಷಮೆ ಯಾಚಿಸಿ ಸಂಜೆ 7:15ರ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಕಳುಹಿಸಿಕೊಡಲು ಒಪ್ಪಿಕೊಳ್ಳುವುದರ ಮೂಲಕ ವಿವಾದವು ಬಗೆಹರಿದಿತ್ತು. ಮಅದನಿಯನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಬೆಳಗ್ಗೆಯಿಂದಲೇ ನಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಕಾದು ನಿಂತಿದ್ದರು.
ಅಸೌಖ್ಯದಲ್ಲಿರುವ ತಾಯಿಯ ಭೇಟಿಗೆ ಊರಿಗೆ ತೆರಳಲು ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ನೀಡಿದ ಹಿನ್ನೆಲೆಯಲ್ಲಿ ಮಅದನಿಯವರು ಕೇರಳಕ್ಕೆ ಆಗಮಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ 8 ದಿನಗಳ ಮಟ್ಟಿಗೆ ಊರಿಗೆ ತೆರಳಲು ವಿಚಾರಣಾ ನ್ಯಾಯಾಲಯವು ಅನುಮತಿ ನೀಡಿತ್ತು





