Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ಶಿಸ್ತಿನ ಪಕ್ಷ’ದ ಭಿನ್ನಮತೀಯ...

‘ಶಿಸ್ತಿನ ಪಕ್ಷ’ದ ಭಿನ್ನಮತೀಯ ಚಟುವಟಿಕೆಗಳು!

ಕು. ಸ. ಮಧುಸೂದನ ನಾಯರ್ಕು. ಸ. ಮಧುಸೂದನ ನಾಯರ್4 July 2016 11:09 PM IST
share
‘ಶಿಸ್ತಿನ ಪಕ್ಷ’ದ ಭಿನ್ನಮತೀಯ ಚಟುವಟಿಕೆಗಳು!

 ಸದ್ಯದ ಮಟ್ಟಿಗೆ ದುರ್ಬಲವಾದಂತೆ ಕಾಣುತ್ತಿರುವ ರಾಜ್ಯ ಕಾಂಗ್ರೆಸ್‌ನ ಸ್ಥಿತಿಯನ್ನು, ಒಡೆದ ಮನೆಯಂತಾಗಿರುವ ಜನತಾದಳವನ್ನು ಸಂತೋಷದಿಂದಲೇ ಗಮನಿಸುತ್ತಿರುವ ರಾಜ್ಯ ಭಾಜಪದ ನಾಯಕರಿಗೆ ಇನ್ನೇನು 2018ರ ಹೊತ್ತಿಗೆ ತಾವು ಅಕಾರಕ್ಕೆ ಬಂದು ಬಿಡುತ್ತೇವೆಂಬ ಕನಸೊಂದು ಬಿದ್ದಂತಿದೆ. ಇಂತಹ ಅತಿಯಾದ ಆತ್ಮವಿಶ್ವಾಸದಿಂದಲೇ ಅದರ ನಾಯಕರು ಈಗಾಗಲೇ ಪಕ್ಷದೊಳಗೆ ಪ್ರಾಬಲ್ಯ ಸಾಸಲು ಪೈಪೋಟಿ ನಡೆಸುತ್ತಿದ್ದಾರೆ. ಇಂತಹ ಪೈಪೋಟಿಯ ಕಾರಣದಿಂದಲೆ ಶಿಸ್ತಿನ ಪಕ್ಷವೆಂದು ಹೆಸರಾದ ಭಾಜಪದಲ್ಲಿಯೂ ಭಿನ್ನಮತೀಯ ಚಟುವಟಿಕೆಗಳು ಪ್ರಾರಂಭವಾಗಿವೆ. ಇದು ಸ್ವಲ್ಪಮಟ್ಟಿಗೆ ನಿರೀಕ್ಷಿತವೇ ಆಗಿತ್ತೆಂದರೆ ತಪ್ಪಾಗಲಾದು. ಇದೀಗ ರಾಜ್ಯದ ಭಾಜಪ ಅಧ್ಯಕ್ಷರಾದ ಯಡಿಯೂರಪ್ಪನವರ ಕಾರ್ಯವೈಖರಿಯ ಬಗ್ಗೆ ಪಕ್ಷದ ನಾಯಕರಲ್ಲಿ ತೀವ್ರವಾದ ಅಸಮಾಧಾನ ತಲೆ ತೋರಿದೆ. ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಪದಾಕಾರಿಗಳನ್ನು ನೇಮಕ ಮಾಡುವಲ್ಲಿ ಯಡಿಯೂರಪ್ಪನವರು ಕೆಜೆಪಿಯಿಂದ ವಲಸೆ ಬಂದವರಿಗೆ ಮಣೆ ಹಾಕುತ್ತಾ, ನೇಮಕಾತಿಯ ಬಗ್ಗೆ ಪಕ್ಷದ ಇತರೆ ನಾಯಕರುಗಳ ಜೊತೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆಂಬುದು ಈಗ ಭಿನ್ನತೆಯ ಮಾತಾಡುತ್ತಿರುವ ನಾಯಕರುಗಳ ಆರೋಪವಾಗಿದೆ.

ಯಾವಾಗ ಯಡಿಯೂರಪ್ಪನವರು ತಮ್ಮ ಕೆಜೆಪಿಯನ್ನು ಭಾಜಪದಲ್ಲಿ ವಿಲೀನಗೊಳಿಸಿ ಪಕ್ಷದೊಳಗೆ ಕಾಲಿಟ್ಟರೊ ಅವತ್ತೇ ಯಡಿಯೂರಪ್ಪನವರಿಂದ ಇಂತಹದೊಂದು ನಡೆಯನ್ನು ನಿರೀಕ್ಷಿಸಲಾಗಿತ್ತು ಮತ್ತು ಅದರಲ್ಲಿ ಆಶ್ಚರ್ಯ ಪಡುವಂತದ್ದೇನು ಇರಲಿಲ್ಲ. ಯಾಕೆಂದರೆ ತಾವು ಭಾಜಪವನ್ನು ಬಿಟ್ಟು ಕೆಜೆಪಿ ಕಟ್ಟಬೇಕಾಗಿ ಬಂದಂತಹ ಕಷ್ಟದ ಸಮಯದಲ್ಲಿ ತಮ್ಮ ಜೊತೆ ತಮಗಾಗಿ ಪಕ್ಷ ತೊರೆದು ಬಂದವರಿಗೆ ಸೂಕ್ತ ನೆಲೆ ಕಲ್ಪಿಸಿಕೊಡಬೇಕಾಗಿದ್ದುದು ಅವರ ಕರ್ತವ್ಯವಾಗಿತ್ತು. ಅದನ್ನವರು ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಯಡಿಯೂರಪ್ಪನವರು ಸ್ವಲ್ಪಅವಸರಕ್ಕೆ ಬಿದ್ದಂತೆ ಕಾಣುತ್ತಿದೆ. ಇಲ್ಲಿ ಭಿನ್ನಮತೀಯ ನಾಯಕರುಗಳ ಮುಖ್ಯ ಆರೋಪವಿರುವುದು ಯಡಿಯೂರಪ್ಪನವರು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವಾಗ ಆಯಾ ಜಿಲ್ಲೆಗಳ ಪ್ರಭಾವಿ ನಾಯಕರ ಜೊತೆ ಸಮಾಲೋಚನೆ ನಡೆಸದೆ ಅವರ ಒಂದೂ ಮಾತೂ ಕೇಳದೆ ನೇಮಕ ಮಾಡಿದ್ದಾರೆನ್ನುವುದು. ಮೂವತ್ತು ಜಿಲ್ಲೆಗಳಲ್ಲಿ ಎಂಟು ಜಿಲ್ಲೆಗಳಿಗೆ ಕೆಜೆಪಿಯಿಂದ ಬಂದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆಯೆಂಬುದು ಸದರಿ ನಾಯಕರ ಆರೋಪವಾಗಿದೆ. ಈ ಜಿಲ್ಲಾಧ್ಯಕ್ಷರ ಆಯ್ಕೆಯ ವಿಚಾರ ಇಷ್ಟೊಂದು ವಿವಾದ ಸೃಷ್ಟಿಸಿರುವುದು ಬಹುಮುಖ್ಯವಾಗಿ ಎರಡು ಜಿಲ್ಲೆಗಳಲ್ಲಿ, ಅದು ಶಿವಮೊಗ್ಗ ಮತ್ತು ಚಿಕ್ಕಮಗಳೂರುಗಳಲ್ಲಿ. ಮೊದಲೇ ಶಿವಮೊಗ್ಗದ ವಿಷಯದಲ್ಲಿ ಈಶ್ವರಪ್ಪನವರಿಗೆ ಕಳೆದ ಚುನಾವಣೆಯಲ್ಲಿ ಕೆಜೆಪಿಯ ಕಾರಣದಿಂದಾಗಿ ತಾವು ಸೋತ ನೋವಿದೆ. ಅಂತಹದ್ದರಲ್ಲಿ ಅದೇ ಕೆಜೆಪಿಯಿಂದ ಸ್ಪರ್ಸಿ ತಮಗೆ ಸೋಲುಣ್ಣುವಂತೆ ಮಾಡಿದ ವ್ಯಕ್ತಿಯನ್ನೀಗ ಜಿಲ್ಲಾಧ್ಯಕ್ಷರನ್ನಾಗಿ ಮಾಡಿರುವುದು ಅವರ ಕೋಪಕ್ಕೆ ಕಾರಣವಾಗಿದೆ. ಅದೂ ಅಲ್ಲದೆ ತಮ್ಮ ಮಗ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷನಾಗಲು ಪೂರಕವಾಗುವ ಮೀಸಲಾತಿ ಬರದಂತೆ ಮಾಡುವಲ್ಲಿ ಯಡಿಯೂರಪ್ಪನವರ ಪಾತ್ರವೂ ಇದೆಯೆಂಬುದು ಸಹ ಈಶ್ವರಪ್ಪನವರ ಅಸಮಾಧಾನಕ್ಕೆ ಕಾರಣವಾಗಿದೆ. ಶಿವಮೊಗ್ಗದ ಜಿಲ್ಲಾ ಭಾಜಪದಲ್ಲಿ ತಮ್ಮ ಪಾತ್ರವನ್ನು ನಗಣ್ಯಗೊಳಿಸಲು ಯಡಿಯೂರಪ್ಪನವರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆಂಬುದು ಈಶ್ವರಪ್ಪನವರ ಭಿನ್ನಮತದ ಮೂಲವಾಗಿದೆ.

 ಇನ್ನು ಅದೇ ರೀತಿ ಚಿಕ್ಕಮಗಳೂರು ಜಿಲ್ಲಾ ಭಾಜಪದಲ್ಲಿ ಸಿ.ಟ.ರವಿಯವರದೇ ಅಂತಿಮ ಮಾತಾಗಿತ್ತು. ಆದರೆ ಯಾವಾಗ ಶೋಭಾ ಕರಂದ್ಲಾಜೆಯವರು ಇಲ್ಲಿಂದ ಸಂಸದರಾಗಿ ಹೋದರೋ ಅದರಿಂದೀಚೆಗೆ ರವಿಯವರ ಪ್ರಾಮುಖ್ಯತೆ ಕಡಿಮೆ ಮಾಡುವಲ್ಲಿ ಶೋಭಾ ಸಲರಾಗಿದ್ದಾರೆ. ಇದೀಗ ಚಿಕ್ಕಮಗಳೂರು ಭಾಜಪದಲ್ಲಿ ಸ್ಪಷ್ಟವಾಗಿ ಎರಡು ಗುಂಪುಗಳಾಗಿವೆ. ರವಿಯವರಿಗೆ ಮುಜುಗರ ಉಂಟುಮಾಡಲೆಂದೇ ಯಡಿಯೂರಪ್ಪನವರು ಶೃಂಗೇರಿಯ ಶಾಸಕ ಜೀವರಾಜ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಾರೆಂಬುದು ರವಿಯವರ ಅಸಮಾಧಾನಕ್ಕೆ ಕಾರಣವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಇಂತಹುದೇ ವಾತಾವರಣ ಸೃಷ್ಟಿಯಾಗಿದ್ದು ಇದು ಭಾಜಪದ ನಾಯಕರಲ್ಲಿ ಅತೃಪ್ತಿಯನ್ನುಂಟು ಮಾಡಿದೆ. ಕಳೆದ ವಿಧಾನಪರಿಷತ್ ಚುನಾವಣೆಗೆ ವಿ. ಸೋಮಣ್ಣರವರು ಅಭ್ಯರ್ಥಿಯಾಗಲು ಬಹಳ ಕಷ್ಟ ಪಡಬೇಕಾಯಿತು. ಅವರನ್ನು ಅಭ್ಯರ್ಥಿಯನ್ನಾಗಿಸದಿರಲು ಯಡಿಯೂರಪ್ಪನವರು ಬಹಳ ಪ್ರಯತ್ನಿಸಿದ್ದರು, ಹೈಕಮಾಂಡ್ ಮಧ್ಯಪ್ರವೇಶದಿಂದ ಸೋಮಣ್ಣ ವಿಧಾನಪರಿಷತ್ ಪ್ರವೇಶಿಸುವಂತಾಯಿತು. ಈ ಹಿಂದೆ ಕೆಜೆಪಿ ಕಟ್ಟಿದಾಗ ತಮ್ಮ ಜೊತೆ ಅವರು ಬರಲಿಲ್ಲವೆಂಬ ಸಿಟ್ಟಿನ ಕಾರಣಕ್ಕೆ ಯಡಿಯೂರಪ್ಪನವರು ಅವರನ್ನು ವಿರೋಸಿದ್ದು ಸುಳ್ಳೇನಲ್ಲ. ಇನ್ನು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಕಾರ ಹಿಡಿಯುವ ವಿಚಾರದಲ್ಲೂ ಯಡಿಯೂರಪ್ಪನವರು ಮನಸ್ಸು ಮಾಡಿ ರಂಗಕ್ಕೆ ಇಳಿದಿದ್ದರೆ ಜನತಾದಳ ಕಾಂಗ್ರೆಸ್ ನಡುವೆ ಮೈತ್ರಿ ಸಾಧ್ಯವಾಗುತ್ತಿರಲಿಲ್ಲ. ಆದರೆ ಅಶೋಕ್ ಅವರಿಗೆ ಮುಖಭಂಗ ಮಾಡಲೆಂದೇ ಯಡಿಯೂರಪ್ಪನವರು ಚುನಾವಣೆಯ ಬಗ್ಗೆಯಾಗಿ ಮೈತ್ರಿಯ ಬಗ್ಗೆಯಾಗಲಿ ಎಳ್ಳಷ್ಟೂ ಆಸಕ್ತಿ ತೋರಿಸಲಿಲ್ಲವೆಂಬುದು ಆಶೋಕ್, ಅನಂತ್ ಕುಮಾರ್ ಅವರ ಅಸಮಾಧಾನಕ್ಕೆ ಮೂಲಭೂತ ಕಾರಣವಾಗಿದೆ.

  
ಆದರೆ ಇದೆಲ್ಲಕ್ಕಿಂತ ಬಹು ಮುಖ್ಯವಾಗಿ ಭಿನ್ನಮತೀಯರ ಅಸಮಾಧಾನವಿರುವುದು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಯಡಿಯೂರಪ್ಪನವರು ನೀಡುತ್ತಿರುವ ಪ್ರಾಮುಖ್ಯತೆಯಿಂದ. ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರ ಬಹುತೇಕ ಪ್ರವಾಸಗಳಲ್ಲಿ ಜೊತೆಯಾಗಿ ಹೋಗುವ ಶೋಭಾರವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಉಳಿದ ನಾಯಕರನ್ನು ಅವರು ಕಡೆಗಣಿಸುತ್ತಿದ್ದಾರೆಂಬುದು ಇತರ ನಾಯಕರ ಆರೋಪವಾಗಿದೆ. ಇದಕ್ಕೆ ಇಂಬು ಕೊಡುವಂತೆ ಎರಡನೆ ಸಾಲಿನ ನಾಯಕರು ಯಾವುದಾದರೂ ವಿಷಯದ ಬಗ್ಗೆ ಚರ್ಚಿಸಲು ಬಂದಾಗ ‘‘ನೀವು ಮೊದಲು ಶೋಭಾ ಮೇಡಂ ಜೊತೆ ಚರ್ಚಿಸಿ ಬನ್ನಿ’’ ಎಂದು ಕಳುಹಿಸುತ್ತಾರೆಂಬುದು ಸಹ ನಾಯಕರ ಆರೋಪವಾಗಿದೆ. ಈ ಎಲ್ಲ ಅಸಮಾಧಾನಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು ಸುಮಾರು ಹದಿನಾಲ್ಕು ಜನ ನಾಯಕರು ಭಾಜಪದ ಕಚೇರಿಯಲ್ಲಿಯೇ ಸಭೆ ನಡೆಸಿದ್ದಾಗಿದೆ. ಈ ನಡುವೆ ಸಾರ್ವಜನಿಕವಾಗಿ ಇದರ ಬಗ್ಗೆ ಮಾತಾಡದ ಶೆಟ್ಟರ್ ಮತ್ತು ಜೋಷಿಯವರು ಮೊದಲೇ ದಿಲ್ಲಿಗೆ ತೆರಳಿದ್ದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಈಶ್ವರಪ್ಪನವರು ಕೂಡಾ ದಿಲ್ಲಿಗೆ ತೆರಳಿ ತಮ್ಮ ಅಹವಾಲುಗಳನ್ನು ಹೈಕಮಾಂಡ್‌ಗೆ ತಲುಪಿಸಿದ್ದಾರೆ. ದಿಲ್ಲಿಯಿಂದ ಅವರನ್ನು ಸಮಾಧಾನ ಪಡಿಸಿ ಕಳುಹಿಸಲಾಗಿದೆ.
ಅಸಮಾಧಾನಗೊಂಡ ನಾಯಕರ್ಯಾರೂ ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಮಾತಾಡುತ್ತಿಲ್ಲ, ಕೇವಲ ಅವರ ತೀರ್ಮಾನಗಳ ಬಗ್ಗೆ ಮಾತ್ರ ಚರ್ಚಿಸುತ್ತಿದ್ದಾರೆ, ಕಾರಣ ಯಡಿಯೂರಪ್ಪವರ ನಾಯಕತ್ವವಿಲ್ಲದೆ ತಾವು ಗೆಲ್ಲುವುದು ಸುಲಭವಲ್ಲ ಎಂಬ ಸತ್ಯ ಅವರಿಗೆ ಗೊತ್ತಿದೆ. ಯಡಿಯೂರಪ್ಪನವರಿಗೂ ಇದು ಗೊತ್ತಿರುವುದರಿಂದಲೇ ಅವರು ಯಾರನ್ನೂ ಕೇರ್ ಮಾಡದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಭಿನ್ನಮತ ಇದೀಗ ತೀವ್ರ ಸ್ವರೂಪಕ್ಕೆ ಹೋಗಿದೆ.

ಹೀಗೆ ಅಕಾರದಲ್ಲಿ ಇಲ್ಲದೇ ಹೋದರೂ, ಬರಬಹುದಾದ ಅಕಾರದ ನಿರೀಕ್ಷೆಯಿಂದಾಗಿಯೇ ಭಿನ್ನಮತೀಯ ಚಟುವಟಿಕೆಗಳಿಗೆ ಒಳಗಾಗಿರುವ ಒಂದು ಪಕ್ಷವನ್ನು ಶಿಸ್ತಿನ ಪಕ್ಷವೆಂದು ಹೇಗೆ ಕರೆಯಬಹುದು. ಭಾಜಪ ಬೇರೇ ಪಕ್ಷಗಳಿಗಿಂತ ಯಾವುದರಲ್ಲೂ ಭಿನ್ನವಾಗಿಯೇನು ಇಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ.

share
ಕು. ಸ. ಮಧುಸೂದನ ನಾಯರ್
ಕು. ಸ. ಮಧುಸೂದನ ನಾಯರ್
Next Story
X