ಶಿವಮೊಗ್ಗ: ಮುಂದುವರಿದ ಧಾರಾಕಾರ ವರ್ಷಧಾರೆ
ಪಶ್ಚಿಮಘಟ್ಟದಲ್ಲಿ ಅಬ್ಬರಿಸುತ್ತಿರುವ ವರುಣ!
![ಶಿವಮೊಗ್ಗ: ಮುಂದುವರಿದ ಧಾರಾಕಾರ ವರ್ಷಧಾರೆ ಶಿವಮೊಗ್ಗ: ಮುಂದುವರಿದ ಧಾರಾಕಾರ ವರ್ಷಧಾರೆ](https://www.varthabharati.in/sites/default/files/images/articles/2016/07/4/sukesh photo.jpg)
ಶಿವಮೊಗ್ಗ, ಜು. 4: ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾ ಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳ ಹರಿವಿನಲ್ಲಿ ಏರಿಕೆ ಕಂಡು ಬಂದಿದ್ದು, ಪ್ರಮುಖ ಜಲಾಶಯಗಳ ಒಳಹರಿ ವಿನಲ್ಲಿ ಹೆಚ್ಚಳ ಕಂಡ
ುಬಂದಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಮಾಹಿತಿಯ ಪ್ರಕಾರ, ಸೋಮವಾರ ಬೆಳಗ್ಗೆ 8.30 ಕ್ಕೆ ಕೊನೆ ಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ 43.97 ಮಿ.ಮೀ. ಆಗಿದೆ. ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ 18.20 ಮಿ.ಮೀ. ಭದ್ರಾ ವತಿ 24.40 ಮಿ.ಮೀ., ತೀರ್ಥಹಳ್ಳಿ 54.40 ಮಿ.ಮೀ. ಸಾಗರ 66.40 ಮಿ.ಮೀ. ಶಿಕಾರಿಪುರ 40.60 ಮಿ.ಮೀ., ಸೊರಬ 21.80 ಮಿ.ಮೀ. ಹಾಗೂ ಹೊಸನಗರದಲ್ಲಿ 82 ಮಿ.ಮೀ. ವರ್ಷ ಧಾರೆಯಾಗಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 151 ಮಿ.ಮೀ. ಹೊಸನಗರ ತಾಲೂಕಿನ ಹುಲಿಕಲ್ಲುವಿನಲ್ಲಿ 206 ಮಿ.ಮೀ.,ಸಾವೇಹಕ್ಲುವಿನಲ್ಲಿ 263 ಮಿ.ಮೀ. ಮಾಣಿ ಡ್ಯಾಂ ವ್ಯಾಪ್ತಿಯಲ್ಲಿ 156 ಮಿ.ಮೀ. ಮಳೆಯಾಗಿದೆ. ಹೆಚ್ಚಳ: ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಲಿಂಗನಮಕ್ಕಿ ಜಲಾಶಯದ ಒಳಹರಿವಿ ನಲ್ಲಿ ಹೆಚ್ಚಳ ಕಂಡುಬಂದಿದೆ. ಸೋಮ ವಾರದ ಬೆಳಗ್ಗಿನ ಮಾಹಿತಿಯಂತೆ ಡ್ಯಾಂಗೆ 26, 424 ಕ್ಯೂಸೆಕ್ಸ್ ಒಳಹರಿ ವಿದ್ದು, 71 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 1, 767.20 (ಗರಿಷ್ಠ ಮಟ್ಟ : 1819) ಅಡಿಯಿದೆ. ಡ್ಯಾಂ ವ್ಯಾಪ್ತಿಯಲ್ಲಿ 53.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1770.30 ಅಡಿ ನೀರು ಸಂಗ್ರಹವಾಗಿತ್ತು. ಭದ್ರಾ ಜಲಾಶಯದ ಒಳಹರಿವು 12,114 ಕ್ಯೂಸೆಕ್ಸ್ಗೆ ಏರಿಕೆಯಾಗಿದ್ದು, 104 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನಲ್ಲಿ 128.11 (ಗರಿಷ್ಠ ಮಟ್ಟ : 186) ಅಡಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನದಂದು 153 ಅಡಿ ನೀರು ಸಂಗ್ರಹವಾಗಿತ್ತು. ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದ್ದು, 24, 843 ಕ್ಯೂಸೆಕ್ಸ್ ಒಳಹರಿವು ಹೊಂದಿದೆ. 24, 808 ಕ್ಯೂಸೆಕ್ಸ್ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಬಿಡಲಾಗುತ್ತಿದೆ. ಉಳಿದಂತೆ ಮಾಣಿ ಡ್ಯಾಂನ ನೀರಿನ ಮಟ್ಟ 576.15 ( ಗರಿಷ್ಠ ಮಟ್ಟ : 594.36) ಮೀಟರ್ ಇದೆ. 4,445 ಕ್ಯೂಸೆಕ್ಸ್ ಒಳಹರಿವಿದ್ದು, ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ.