Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಯುರೋ ಸೆಮಿಫೈನಲ್: ವೇಲ್ಸ್‌ಗೆ ಪೋರ್ಚುಗಲ್...

ಯುರೋ ಸೆಮಿಫೈನಲ್: ವೇಲ್ಸ್‌ಗೆ ಪೋರ್ಚುಗಲ್ ಸವಾಲು

ವಾರ್ತಾಭಾರತಿವಾರ್ತಾಭಾರತಿ4 July 2016 11:37 PM IST
share
ಯುರೋ ಸೆಮಿಫೈನಲ್: ವೇಲ್ಸ್‌ಗೆ ಪೋರ್ಚುಗಲ್ ಸವಾಲು

ಲಿಯೊನ್(ಫ್ರಾನ್ಸ್), ಜು.4: ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಬುಧವಾರ ಇಲ್ಲಿ ನಡೆಯಲಿರುವ ಯುರೋ ಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಎದುರಿಸಲಿದೆ.

ಪೋರ್ಚುಗಲ್-ವೇಲ್ಸ್ ತಂಡಗಳು ನಾಲ್ಕನೆ ಬಾರಿ ಮುಖಾ ಮುಖಿಯಾಗುತ್ತಿದ್ದು, 2000ರ ಜೂನ್ ಬಳಿಕ ಮೊದಲ ಬಾರಿ ಸೆಣಸಾಡುತ್ತಿವೆ. 16 ವರ್ಷಗಳ ಹಿಂದೆ ನಡೆದಿದ್ದ ಸೌಹಾರ್ದ ಪಂದ್ಯದಲ್ಲಿ ಪೋರ್ಚುಗಲ್ 3-0 ಗೋಲು ಅಂತರದಿಂದ ಜಯ ಸಾಧಿಸಿತ್ತು.

 ಉಭಯ ತಂಡಗಳು ಇದೇ ಮೊದಲ ಬಾರಿ ಸ್ಪರ್ಧಾತ್ಮಕ ಪಂದ್ಯವನ್ನು ಆಡುತ್ತಿವೆ. ಹಿಂದೆ ಆಡಿರುವ ಮೂರು ಪಂದ್ಯಗಳು ಸೌಹಾರ್ದ ಪಂದ್ಯಗಳಾಗಿದ್ದವು. ಕಳೆದ 3 ಪಂದ್ಯಗಳಲ್ಲಿ 11 ಗೋಲುಗಳು ದಾಖಲಾಗಿವೆ. ಪೋರ್ಚುಗಲ್ 1984ರಲ್ಲಿ ಚೊಚ್ಚಲ ಯುರೋ ಕಪ್‌ನಲ್ಲಿ ಭಾಗವಹಿಸಿದ್ದು, ತಾನಾಡಿರುವ ಏಳನೆ ಯುರೋ ಕಪ್‌ನಲ್ಲಿ ಐದನೆ ಬಾರಿ ಸೆಮಿಫೈನಲ್‌ಗೆ ತಲುಪಿದೆ. ಪೋರ್ಚುಗಲ್ ತಂಡ ಜರ್ಮನಿ ತಂಡ(6)ಬಳಿಕ ಹೆಚ್ಚು ಬಾರಿ ಸೆಮಿಫೈನಲ್‌ಗೆ ತಲುಪಿದ ತಂಡವಾಗಿದೆ.

ಪೋರ್ಚುಗಲ್ ಯುರೋ ಕಪ್‌ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು(33) ಆಡಿದ್ದರೂ ಟ್ರೋಫಿಯನ್ನು ಜಯಿಸಲು ಸಾಧ್ಯವಾಗಿಲ್ಲ. 2004ರಲ್ಲಿ ಯುರೋ ಫೈನಲ್‌ಗೆ ತಲುಪಿದ್ದ ಪೋರ್ಚುಗಲ್ ತಂಡ ಗ್ರೀಸ್ ವಿರುದ್ಧ 1-0 ಅಂತರದಿಂದ ಸೋತಿತ್ತು.

 ಪೋರ್ಚುಗಲ್ ಯುರೋಕಪ್‌ನಲ್ಲಿ ಆಡಿದ್ದ ಕಳೆದ 3 ನಾಕೌಟ್ ಪಂದ್ಯಗಳು ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲ್ಪಟ್ಟಿದ್ದವು. ಮೇಜರ್ ಟೂರ್ನಿಯಲ್ಲಿ ನಾಲ್ಕು ಪೆನಾಲ್ಟಿ ಶೂಟೌಟ್‌ನಲ್ಲಿ ಮೂರರಲ್ಲಿ ಜಯ ಸಾಧಿಸಿ ಉತ್ತಮ ದಾಖಲೆ ಕಾಯ್ದುಕೊಂಡಿದೆ.

ಫೆರ್ನಾಂಡೊ ಸ್ಯಾಂಟೊಸ್ ನೇತೃತ್ವದಲ್ಲಿ ಪೋರ್ಚುಗಲ್ ಈ ವರ್ಷ ಆಡಿರುವ 12 ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಅಜೇಯವಾಗುಳಿದಿದೆ(8 ಜಯ, 4 ಡ್ರಾ). ಎಲ್ಲ 8 ಪಂದ್ಯವನ್ನು 1-0 ಅಂತರದಿಂದ ಜಯಿಸಿದ್ದು ವಿಶೇಷ.

  ಈ ವರ್ಷದ ಯುರೋ ಕಪ್‌ನಲ್ಲಿ ಪೋರ್ಚುಗಲ್ ಆಡಿರುವ 5 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ನಿಗದಿತ ಸಮಯದಲ್ಲಿ ಜಯಿಸಿದೆ. ಕ್ರೊಯೇಷಿಯ ವಿರುದ್ಧ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಕೊನೆಯ ಕ್ಷಣದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಜಯ ಸಾಧಿಸಿ ಸೆಮಿಫೈನಲ್‌ಗೆ ತಲುಪಿತ್ತು.

 ಸ್ಟಾರ್ ಆಟಗಾರ ರೊನಾಲ್ಡೊಗೆ ಈ ಪಂದ್ಯ ಅತ್ಯಂತ ಮುಖ್ಯ. 12 ವರ್ಷಗಳ ಬಳಿಕ ತಂಡವನ್ನು ಫೈನಲ್‌ಗೆ ತಲುಪಿಸುವ ಹೊಣೆಗಾರಿಕೆ ರೊನಾಲ್ಡೊ ಮೇಲಿದೆ. ಅತ್ಯಂತ ಹೆಚ್ಚು ಯುರೋ ಪಂದ್ಯಗಳನ್ನು(19) ಆಡಿರುವ ರೊನಾಲ್ಡೊ ತಮ್ಮದೇ ದೇಶದ ಮೈಕಲ್ ಪ್ಲಾಟಿನಿ ಹೆಸರಲ್ಲಿರುವ ಗರಿಷ್ಠ ಗೋಲು(9) ದಾಖಲೆ ಮುರಿಯಲು ಇನ್ನೊಂದು ಗೋಲು ಅಗತ್ಯವಿದೆ.

ಮತ್ತೊಂದೆಡೆ ಬಿ ಗುಂಪಿನಿಂದ ಅಗ್ರ ಸ್ಥಾನ ಪಡೆದು ಯುರೋ ಟೂರ್ನಿಯ ನಾಕೌಟ್ ಹಂತಕ್ಕೆ ತಲುಪಿ ಅಚ್ಚರಿ ಮೂಡಿಸಿರುವ ವೇಲ್ಸ್ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು ರೋಚಕವಾಗಿ ಮಣಿಸಿತ್ತು. ವೇಲ್ಸ್ ಹಾಗೂ ಐಸ್‌ಲ್ಯಾಂಡ್ ತಂಡಗಳು ಈವರ್ಷದ ಯುರೋ ಕಪ್‌ನಲ್ಲಿ ಗಮನ ಸೆಳೆದ ತಂಡಗಳಾಗಿವೆ.

ಈ ವರ್ಷದ ಟೂರ್ನಿಯಲ್ಲಿ ವೇಲ್ಸ್ ತಂಡ(10) ಫ್ರಾನ್ಸ್(11) ಬಳಿಕ ಅತ್ಯಂತ ಹೆಚ್ಚು ಗೋಲು ಬಾರಿಸಿದ ತಂಡವಾಗಿದೆ.

 ಪೋರ್ಚುಗಲ್ ಪ್ರಮುಖ ಡಿಫೆಂಡರ್ ಪೀಪೆ ಸೇವೆಯಿಂದ ವಂಚಿತವಾಗುವ ಸಾಧ್ಯತೆಯಿದೆ. ಪೇಪೆ ಸೋಮವಾರ ನಡೆದ ತರಬೇತಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಭಾಗವಹಿಸಿರಲಿಲ್ಲ. ವೇಲ್ಸ್ ತಂಡ ಸ್ಟಾರ್ ಆಟಗಾರ ಆ್ಯರೊನ್ ರಾಮ್ಸೆ ಇಲ್ಲದೇ ಸೆಮಿಫೈನಲ್ ಆಡಬೇಕಾಗಿದೆ.ರಾಮ್ಸೆ ತಂಡದ ಇನ್ನೊಬ್ಬ ಸ್ಟಾರ್ ಆಟಗಾರ ಗಾರೆತ್ ಬಾಲೆಗಿಂತಲೂ ಹೆಚ್ಚು ಪ್ರಭಾವಶಾಲಿ ಆಟಗಾರ. ರಾಮ್ಸೆ ಹಾಗೂ ಕ್ರಿಸ್ ಕಾಲ್‌ಮನ್ಸ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ರಾಮ್ಸೆ ವೇಲ್ಸ್ ಆಟಗಾರರು ಬಾರಿಸಿದ ಕಳೆದ 8 ಗೋಲುಗಳಲ್ಲಿ ಐದರಲ್ಲಿ ಪ್ರಮುಖ ಕಾಣಿಕೆ ನೀಡಿದ್ದರು.

ಸೆಮಿಫೈನಲ್

ಜು.7 ಗುರುವಾರ, ರಾತ್ರಿ 12:30 (ಭಾರತೀಯ ಕಾಲಮಾನ)

ಪೋರ್ಚುಗಲ್-ವೇಲ್ಸ್

ಜು.8, ಶುಕ್ರವಾರ ರಾತ್ರಿ 12:30(ಭಾರತೀಯ ಕಾಲಮಾನ)

ಜರ್ಮನಿ-ಫ್ರಾನ್ಸ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X