ಫೆಡರರ್-ಸಿಲಿಕ್ ಕ್ವಾರ್ಟರ್‌ಫೈನಲ್‌ಗೆ
ವಿಂಬಲ್ಡನ್ ಓಪನ್

ಲಂಡನ್, ಜು.4: ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಹಾಗೂ ಕ್ರೊಯೇಷಿಯದ ಮರಿನ್ ಸಿಲಿಕ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.
ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸ್ಟೀವ್ ಜಾನ್ಸನ್‌ರನ್ನು 6-2, 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದ ಫೆಡರರ್ 14ನೆ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದರು. ಈ ಮೂಲಕ 8ನೆ ಬಾರಿ ವಿಂಬಲ್ಡನ್ ಸಿಂಗಲ್ಸ್ ಕಿರೀಟ ಧರಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ನೊವಾಕ್ ಜೊಕೊವಿಕ್ 3ನೆ ಸುತ್ತಿನಲ್ಲಿ ಟೂರ್ನಿಯಿಂದ ಸೋತು ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಫೆಡರರ್ ಹಾಗೂ ಬ್ರಿಟನ್‌ನ ಆ್ಯಂಡಿ ಮರ್ರೆಗೆ ಪ್ರಶಸ್ತಿ ಜಯಿಸುವ ಉತ್ತಮ ಅವಕಾಶವಿದೆ.
ಫೆಡರರ್ ಕ್ವಾರ್ಟರ್‌ಫೈನಲ್‌ನಲ್ಲಿ ಕ್ರೊಯೇಷಿಯದ ಸಿಲಿಕ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಎದುರಾಳಿ ಜಪಾನ್‌ನ 5ನೆ ಶ್ರೇಯಾಂಕದ ಕೀ ನಿಶಿಕೊರಿ ಗಾಯದಿಂದ ಪಂದ್ಯದಿಂದ ನಿವೃತ್ತಿಯಾದರು.
ಈ ಹಿನ್ನೆಲೆಯಲ್ಲಿ ಸಿಲಿಕ್ ಸತತ ಮೂರನೆ ಬಾರಿ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಗಾಯದಿಂದ ನಿವೃತ್ತಿಯಾದಾಗ ನಿಶಿಕೊರಿ ಪಂದ್ಯದಲ್ಲಿ 6-1, 5-1 ಸೆಟ್‌ನಿಂದ ಹಿನ್ನಡೆಯಲ್ಲಿದ್ದರು.
ವಿಂಬಲ್ಡ್ಡನ್: ಕರ್ಬರ್,ಸಿಬುಲ್ಕೋವಾ, ಸೆರೆನಾ ಕ್ವಾರ್ಟರ್‌ಫೈನಲ್‌ಗೆ
ಲಂಡನ್, ಜು.4: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆ್ಯಂಜೆಲಿಕ್ ಕರ್ಬರ್ ಜಪಾನ್‌ನ ಮಿಸಾಕಿ ಡೊಯ್ ಅವರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಸೋಮವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿಯ ನಾಲ್ಕನೆ ಶ್ರೇಯಾಂಕದ ಕರ್ಬರ್ ಅವರು ಮಿಸಾಕಿ ಅವರನ್ನು 6-3, 6-1 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಕರ್ಬರ್ 2012ರಲ್ಲಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು. ಎದುರಾಳಿ ಆಟಗಾರ್ತಿ ಮಿಸಾಕಿ ವಿರುದ್ಧ ಆರಂಭದಲ್ಲೇ ಮೇಲುಗೈ ಸಾಧಿಸಿದ ಕೆರ್ಬರ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು.
ಜನವರಿಯಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು ಮಣಿಸಿದ್ದ ಕರ್ಬರ್ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ರಾಂಡ್ವಾಂಸ್ಕಾಗೆ ಸಿಬುಲ್ಕೋವಾ ಶಾಕ್:
ಮತ್ತೊಂದು ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಲೊವಾಕಿಯದ ಡೊಮಿನಿಕಾ ಸಿಬುಲ್ಕೋವಾ ವಿಶ್ವದ ನಂ.3ನೆ ಆಟಗಾರ್ತಿ ಅಗ್ನೆಸ್ಕಾ ರಾಂಡ್ವಾಂಸ್ಕಾರನ್ನು 6-3, 5-7, 9-7 ಸೆಟ್‌ಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದರು.
ಕಳೆದ ತಿಂಗಳು ನಡೆದ ಈರ್ಸ್ಟ್‌ಬರ್ನ್ ಗ್ರಾಸ್‌ಕೋರ್ಟ್ ಟೂರ್ನಿಯಲ್ಲಿ ಸಿಬುಲ್ಕೋವಾ ಅವರು ಪೊಲೆಂಡ್‌ನ ರಾಂಡ್ವಾಂಸ್ಕಾರನ್ನು ಮಣಿಸಿದ್ದರು. ಇದೀಗ ಮತ್ತೊಮ್ಮೆ ರಾಂಡ್ವಾಂಸ್ಕಾರನ್ನು ಸೋಲಿಸಿರುವ ಸಿಬುಲ್ಕೋವಾ 2001ರ ನಂತರ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದರು.
ವಿಂಬಲ್ಡನ್‌ನಲ್ಲಿ ಈ ತನಕ ಸೆಮಿಫೈನಲ್‌ಗೆ ತಲುಪಲು ವಿಫಲರಾಗಿರುವ ಸಿಬುಲ್ಕೋವಾ ಮುಂದಿನ ಸುತ್ತಿನಲ್ಲಿ ರಶ್ಯದ ವೆಸ್ನಿನಾ ಅಥವಾ ಎಕಟೆರಿನಾ ಮಕರೋವಾರನ್ನು ಎದುರಿಸಲಿದ್ದಾರೆ.
12ನೆ ಬಾರಿ ಸೆರೆನಾ ಕ್ವಾ.ಫೈನಲ್‌ಗೆ
ಲಂಡನ್, ಜು.4: ರಶ್ಯದ ಸ್ವೆತ್ಲಾನಾ ಕುಝೆಸೋವಾರನ್ನು 7-5, 6-0 ಸೆಟ್‌ಗಳ ಅಂತರದಿಂದ ಮಣಿಸಿದ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಸೋಮವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಜಯ ಸಾಧಿಸಿದ ವಿಶ್ವದ ನಂ.1 ಆಟಗಾರ್ತಿ ಸೆರೆನಾ 12ನೆ ಬಾರಿ ವಿಂಬಲ್ಡನ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ತಲುಪಿದರು. ಈ ಮೂಲಕ 22ನೆ ಗ್ರಾನ್‌ಸ್ಲಾಮ್ ಹಾಗೂ ಏಳನೆ ವಿಂಬಲ್ಡನ್ ಕಿರೀಟ ಧರಿಸಲು ಸಜ್ಜಾಗಿದ್ದಾರೆ.







