ಅವ್ಯವಸ್ಥೆಯ ಮೆಟ್ರೋ ತಾಣ..!
ಮಾನ್ಯರೆ,
ಬೆಂಗಳೂರಿನ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದ ಪೂರ್ವ-ಪಶ್ಚಿಮ ಕಾರಿಡಾರ್‌ನ ಮೆಟ್ರೋ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿಗೆ ಪ್ರತೀದಿನ ಸಾವಿರಾರು ಪ್ರಯಾಣಿಕರು ಬರುತ್ತಾರೆ. ವಿಷಾದವೆಂದರೆ ಇಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯೇ ಇಲ್ಲ..! ಹೀಗಾಗಿ ಮಹಿಳೆಯರು, ವೃದ್ಧ್ದರು, ಮಕ್ಕಳು ಪರದಾಡುವಂತಹ ಸ್ಥಿತಿ ಬಂದಿದೆ. ಇಲ್ಲಿ ಲಿಫ್ಟ್, ಎಸ್ಕಲೇಟರ್ ವ್ಯವಸ್ಥೆ ಮಾಡಿದವರಿಗೆ ಆಸನಗಳ ವ್ಯವಸ್ಥೆ ಮಾಡುವುದು ಯಾಕೆ ಕಷ್ಟ ಆಯಿತು? ಎಂಬುದು ಜನರ ಪ್ರಶ್ನೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಸೂಕ್ತ ವ್ಯವಸ್ಥೆ ಮಾಡಿಯಾರೇ?.
Next Story





