ತಂದೆಯ ಕೈಯಿಂದಲೇ ಮೃತಪಟ್ಟ ಮಗ
ಗನ್‌ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು

ಫ್ಲೊರಿಡಾ, ಜು.5: ಗನ್‌ನಿಂದ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ 14 ವರ್ಷದ ಬಾಲಕನೊಬ್ಬ ತನ್ನ ತಂದೆಯ ಕೈಯಿಂದಲೇ ಮೃತಪಟ್ಟ ದಾರುಣ ಘಟನೆ ಪ್ಲೋರಿಡಾದಲ್ಲಿ ಸೋಮವಾರ ನಡೆದಿದೆ.
ವಿಲಿಯಮ್ ಬ್ರುಂಬೆ ಎಂಬಾತ ತನ್ನ ಗನ್‌ನಿಂದ ಶೆಲ್‌ಗಳನ್ನು ತೆಗೆಯುವ ಯತ್ನದಲ್ಲಿದ್ದಾಗ ಗನ್ ಆಕಸ್ಮಿಕವಾಗಿ ಸಿಡಿಯಲ್ಪಟ್ಟಿದ್ದು, ಆತನ ಹಿಂದೆ ನಿಂತಿದ್ದ 14ರ ಹರೆಯದ ಮಗನಿಗೆ ಗುಂಡು ತಗಲಿದೆ.
ಸ್ಟೀಫನ್ ಜೆ. ಬ್ರುಂಬಿ ಹೆಸರಿನ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೆ ಪ್ರಯೋಜನವಾಗಲಿಲ್ಲ. ವಿಲಿಯಮ್‌ರ ಇನ್ನಿಬ್ಬರು ಮಕ್ಕಳು ಅವರೊಂದಿಗೆ ಇದ್ದರು. ಆದರೆ, ಆ ಇಬ್ಬರಿಗೆ ಯಾವುದೇ ಗಾಯವಾಗಿಲ್ಲ. ಶೂಟಿಂಗ್‌ನ ವಿಡಿಯೋವನ್ನು ವೀಕ್ಷಿಸಿ, ಸಾಕ್ಷಿಗಳನ್ನು ಮಾತನಾಡಿಸಿದ ಬಳಿಕ ತನಿಖೆ ಮುಂದುವರಿಸುತ್ತೇವೆ. ಮೃತ ಬಾಲಕನ ತಂದೆಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Next Story





