ಮಡಂತ್ಯಾರು ಎಸ್ಡಿಪಿಐ ವತಿಯಿಂದ ಸಾಂಕ್ರಮಿಕ ರೋಗಗಳ ಬಗ್ಗೆ ಮಾಹಿತಿ ಮತ್ತು ಜನ ಜಾಗೃತಿ ಅಭಿಯಾನ

ಬೆಳ್ತಂಗಡಿ, ಜು.5: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಡಂತ್ಯಾರು ವಲಯ ಇದರ ವತಿಯಿಂದ, ಸಾಂಕ್ರಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾದ ಬಗ್ಗೆ ಕರ ಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಯಿತು. ಸೊಳ್ಳೆಯಿಂದ ಹರಡುವ ಕಾಯಿಲೆಗಳಲ್ಲಿ ಮುಖ್ಯವಾಗಿ ಮಲೇರಿಯಾ ಹಾಗೂ ಡೆಂಗ್ಯೂ ಮನುಷ್ಯರನ್ನು ಮಾರಣಾಂತಿಕಕ್ಕೆ ಕೊಂಡೊಯ್ಯುವ ರೋಗವಾಗಿದೆ. ಈ ರೋಗ ಬರುವ ಮೊದಲೇ ಎಚ್ಚರಿಕೆವಹಿಸಿ ಸೊಳ್ಳೆಗಳ ನಿಯಂತ್ರಣ ಹಾಗೂ ರೋಗಗಳ ತಡೆಗಟ್ಟುವಿಕೆ ಹಾಗೂ ಶೀಘ್ರ ಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆ ಪಡೆಯುವುರ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು.
Next Story





