ಬಾವಿಗೆ ಬಿದ್ದ ತಾಯಿ, ಮಗುವನ್ನು ರಕ್ಷಿಸಿದ ಆಟೊಚಾಲಕ

ಕೋಟ್ಟಯಂ,ಜುಲೈ 5: ಒಂದೂವರೆ ವರ್ಷದ ಮಗು ಅದ್ವೈತ್ ಐದು ಅಡಿ ನೀರು ಮೂವತ್ತು ಅಡಿ ಆಳದ ಬಾವಿಗೆ ಬಿದ್ದಿದ್ದ. ಇದನ್ನು ನೋಡಿ ನಿಲ್ಲದ ಮಗುವಿನ ತಾಯಿ ಧೈರ್ಯವಹಿಸಿ ಬಾವಿಗೆ ಹಾರಿ ಮಗು ನೀರಲ್ಲಿ ಮುಳುಗದಂತೆ ಎತ್ತಿ ಹಿಡಿದಿದ್ದರು. ಆಟೊ ಚಾಲಕರೊಬ್ಬರು ಮಗುವನ್ನು ಬಾವಿಗಿಳಿದು ಮೇಲಕ್ಕೆ ತಂದಿದ್ದಾರೆ. ನಂತರ ಗ್ರಹಿಣಿಯನ್ನು ಇತರರ ಸಹಾಯದಿಂದ ಮೇಲಕ್ಕೆತ್ತಲಾದ ಹೃದಯಸ್ಪರ್ಶಿ ಘಟನೆ ನಿನ್ನೆ ಸಂಜೆ ಕೇರಳದ ಮೂವಾಟ್ಟು ಪುಝದಲ್ಲಿ ನಡೆದಿದೆ.
ಮನೆಯೊಳಗೆ ಆಟವಾಡುತ್ತಿದ್ದ ಅನೂಪ್-ಶ್ರೀಜಾ ದಂಪತಿಯ ಮಗು ಅದ್ವೈತ್ ಅನಿರೀಕ್ಷಿತವಾಗಿ ಕಾಣೆಯಾಗಿದ್ದ. ಮನೆಯ ಎದುರು ದಂಡೆಯಿಲ್ಲದ ಬಾವಿಗೆ ಬಿದ್ದಿದ್ದನ್ನು ನೋಡಿದ್ದ ಅಜ್ಜಿ ಬೊಬ್ಬೆ ಹೊಡೆದಿದ್ದಾರೆ. ಮನೆಯೊಳಗಿದ್ದ ಅದ್ವೈತ್‌ನ ಅಮ್ಮ ಶ್ರೀಜಾ ಓಡಿ ಬಂದು ಹಿಂದೆಮುಂದೆ ಯೋಚಿಸದೆ ಬಾವಿಗೆ ಹಾರಿದ್ದಾರೆ. ಬಾವಿಯಲ್ಲಿಐದು ಅಡಿ ನೀರಿತ್ತು. ಮೂವತ್ತು ಅಡಿ ಆಳದ ಬಾವಿ ಅದಾಗಿತ್ತು. ಬಾವಿಗೆ ಹಾರಿದೊಡನೆ ಶ್ರೀಜಾ ಮಗುವನ್ನು ತೋಳಲ್ಲಿ ಎತ್ತಿ ಹಿಡಿದು ಬೊಬ್ಬೆ ಹೊಡೆದರು. ಆ ದಾರಿ ಯಾಗಿ ಬಂದ ಆಟೊಚಾಲಕ ರವೀಂದ್ರನ್ ಪಿಳ್ಳೆ ಹಗ್ಗದ ಸಹಾಯದಿಂದ ಬಾವಿಗಿಳಿದು ಮಗುವನ್ನು ಮೊದಲು ಮೇಲೆ ತಂದರು. ಆ ನಂತರ ನೆರೆಹೊರೆಯವರ ನೆರವಿನಿಂದ ಶ್ರೀಜಾರನ್ನು ಮೇಲಕ್ಕೆತ್ತಲಾಯಿತು. ಮಗುವಿನ ತಂದೆ ಅನೂಪ್ ಕೂಡಾ ಆಟೊಚಾಲಕನಾಗಿದ್ದಾರೆ.





