ಹಾಸನ: ಕಾಡುಹಂದಿ ದಾಳಿಯಿಂದ ಇಬ್ಬರಿಗೆ ಗಾಯ

ಹಾಸನ, ಜು.5: ಕಾಡು ಹಂದಿ ದಾಳಿಯಿಂದ ಇಬ್ಬರಿಗೆ ಗಾಯಗಳಾದ ಘಟನೆ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಶಾಂತಿಗ್ರಾಮ ಹೋಬಳಿ ಪಿರುಮನಹಳ್ಳಿ ಗ್ರಾಮದ ನಿವಾಸಿಗಳಾದ ಬಾಲಕೃಷ್ಣ (22) ಹಾಗೂ ಸಣ್ಣರೇವಯ್ಯ (55) ಕಾಡುಹಂದಿ ದಾಳಿಗೆ ತುತ್ತಾಗ ಗಾಯಗೊಂಡಿದ್ದು, ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸಂಜೆ ಕುರಿ ಕಾಯುತ್ತಿದ್ದಾಗ ಏಕಾಏಕಿ ಕಾಡು ಹಂದಿಗಳ ಗುಂಪು ದಾಳಿಮಾಡಿದೆ ಎನ್ನಲಾಗಿದೆ.
ಕಾಡು ಹಂದಿ ದಾಳಿಯಿಂದ ಗಾಯಗೊಂಡ ಬಾಲಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಆರು ತಿಂಗಳಿನಿಂದ ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ನಾನು ಕುರಿ ಕಾಯುತ್ತಿದ್ದಾಗ ಸಂಜೆ 5 ಗಂಟೆ ಸಮಯದಲ್ಲಿ ಕುರಿಗಳನ್ನು ಕಚ್ಚಲು ಬಂದು ನಂತರ ನನಗೂ ಕಚ್ಚಿದೆ. ಈ ಹಿಂದೆಯು ಕೂಡ ಅನೇಕ ಮಹಿಳೆಯರ ಮೇಲೆ ಆಕ್ರಮಣ ಮಾಡಿದೆ ಎಂದರು. ಈ ಭಾಗದಲ್ಲಿ ಕಿರುಬ, ಚಿರತೆ ಕಾಟ ಕೂಡ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೂ ಕೂಡ ತಿಳಿಸಲಾಗಿದೆ ಎಂದು ಹೇಳಿದರು.
Next Story





