ಅಹಮದಾಕ
ಬಂಟ್ವಾಳ, ಜು.5: ಕಲ್ಲಡ್ಕದ ಇಸ್ಮಾಯೀಲ್ ನಗರ ನಿವಾಸಿ ಅಹಮದಾಕ(50) ಮಂಗಳವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಕಲ್ಲಡ್ಕದ ವಿಟ್ಲ ರಸ್ತೆಯ ಸರಪಾಡಿ ಗ್ಲಾಸ್ - ಪ್ಲೈವುಡ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇವರು ಎರಡು ಹೆಣ್ಣು, ಎರಡು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಕಲ್ಲಡ್ಕ ಮುಹಿದ್ದೀನ್ ಜುಮಾ ಮಸೀದಿಯಲ್ಲಿ ಅಸರ್ ನಮಾಝಿನ ಬಳಿಕ ನಡೆಯಿತು.
Next Story





