ಉಚ್ಚಿಲ: ಮುಂದುವರಿದ ಕಡಲ್ಕೊರೆತ; ರೆಸಾರ್ಟ್ ಕಟ್ಟಡ ಸಮುದ್ರಪಾಲು
ಉಳ್ಳಾಲ, ಜು.5: ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತಾತ್ಕಾಲಿಕ ತಡೆಗಾಗಿ ತೀರಕ್ಕೆ ಕಲ್ಲುಗಳನ್ನು ಹಾಕುವ ಕಾರ್ಯ ಪ್ರಗತಿಯಲ್ಲಿದ್ದರೂ ಇದ್ಯಾವುದನ್ನೂ ಲೆಕ್ಕಿಸದ ಸಮುದ್ರದ ಅಲೆಗಳಿಂದ ರೆಸಾರ್ಟ್ ಕಟ್ಟಡವೊಂದು ಸಮುದ್ರಪಾಲಾಗಿದೆ.
ಮಂಗಳವಾರ ಮಧ್ಯಾಹ್ನ ಉಚ್ಚಿಲದಲ್ಲಿ ಸಮುದ್ರದಲ್ಲಿ ಅಲೆಗಳ ತೀವ್ರತೆ ಜೋರಾಗಿದ್ದು ಭಾಗಶ: ಹಾನಿಗೊಳಗಾಗಿದ್ದ ಯಮುನಾ ಅವರ ಮನೆಯ ಅಡಿಪಾಯವನ್ನು ಅಲೆಗಳು ಸಂಪೂರ್ಣ ಕೊರೆದಿದ್ದು, ಸಮೀಪದಲ್ಲಿದ್ದ ವಾರೆಝ್ಕಿ ಬೀಚ್ ರೆಸಾರ್ಟ್‌ನ ಸಿಬ್ಬಂದಿ ನೆಲೆಸುವ ಕಟ್ಟಡವೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಅಲೆಗಳ ರೌದ್ರನರ್ತನವು ದಿನನಿತ್ಯವೂ ಜೋರಾಗುತ್ತಿದ್ದು ಹಾಕಿದ ಬೃಹತ್ ಕಲ್ಲುಗಳು ಕೂಡಾ ಸಮುದ್ರಪಾಲಾಗುತ್ತಿವೆ. ಇದರಿಂದಾಗಿ ಈ ಭಾಗದ ಜನರು ಭಯಭೀತರಾಗಿದ್ದಾರೆ.
Next Story





.jpg.jpg)

