ಉಡುಪಿ: 5.5ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು
ಉಡುಪಿ, ಜು.5: ದೊಡ್ಡಣಗುಡ್ಡೆಯ ರಾಘವೇಂದ್ರ ಸೋಮಯಾಜಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಜು.1ರಂದು ರಾಘವೇಂದ್ರ ಸೋಮಾಯಜಿ ಮನೆಗೆ ಬೀಗ ಹಾಕಿ ಪತ್ನಿ ಮಕ್ಕಳೊಂದಿಗೆ ತಾಯಿಯ ಶ್ರಾದ್ಧ ಕಾರ್ಯಕ್ಕೆಂದು ಬೆಂಗಳೂರಿಗೆ ತೆರಳಿದ್ದು ಜು.5ರಂದು ಮನೆಗೆ ಮರಳಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಂನ ಅಲ್ಮೇರಾದಲ್ಲಿದ್ದ 2 ಚಿನ್ನದ ನೆಕ್ಲೇಸ್, ಕಿವಿಯ ಆಭರಣ, 4 ಚಿನ್ನದ ಚೈನ್, ಚಿನ್ನದ ಡಾಲರ್, 1 ಜೊತೆ ಬಳೆ, 5 ಉಂಗುರ, 8 ಜೊತೆ ಚಿನ್ನದ ಕಿವಿಯ ಸೆಟ್, 3 ಚಿನ್ನದ ಪೆಂಡೆಂಟ್‌ಗಳು, ಚಿನ್ನದ ಅವಲಕ್ಕಿ ಸರ, ಬೆಳ್ಳಿಯ ಮಧು ಪರ್ಕ, ಬೆಳ್ಳಿಯ ದೀಪ, ಬೆಳ್ಳಿಯ ಕೀ ಬಂಚ್, ಬೆಳ್ಳಿಯ ಕಾಲುಗೆಜ್ಜೆ, 2 ಜೊತೆ ಬೆಳ್ಳಿಯ ಗೆಜ್ಜೆಯನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಒಟ್ಟು ಮೌಲ್ಯ ಐದೂವರೆ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





