ಸ್ನಾನಕ್ಕೆ ನದಿಗಿಳಿದಿದ್ದ ಯುವಕರಿಬ್ಬರು ನೀರು ಪಾಲು
ಮಂಗಳೂರು, ಜು. 5: ಸ್ನಾನಕ್ಕೆಂದು ಮರವೂರು ನದಿಗೆ ತೆರಳಿದ್ದ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ.
ನೀರು ಪಾಲಾಗಿರುವ ಯುವಕರನ್ನು ಪಂಜಿಮೊಗರಿನ ನಿವಾಸಿಗಳಾದ ಅವಿನಾಶ್ (26)ಮತ್ತು ಜೈಸನ್ ಡಿಸೋಜಾ (24) ಎಂದು ಗುರುತಿಸಲಾಗಿದೆ. ಇವರು ಇಂದು ಸ್ನಾನ ಮಾಡಲೆಂದು ಮರವೂರು ನದಿಗೆ ತೆರಳಿದ್ದ ಸಂದರ್ಭದಲ್ಲಿ ನದಿಗೆ ಬಿದ್ದು ನೀರು ಪಾಲಾಗಿದ್ದಾರೆ.
ಅವಿನಾಶ್ ಹಾಗೂ ಜೈಸನ್ ಇತ್ತೀಚೆಗೆ ನಡೆದ ಬಿಜೈ ರಾಜಾನ ಕೊಲೆ ಪ್ರಕರಣದಲ್ಲಿ ಆರೋಪಿಗಳು ಹಾಗೂ ಮಾದಕ ದ್ರವ್ಯ ವಸನಿಗಳಾಗಿದ್ದರು ಎಂದು ಹೇಳಲಾಗಿದೆ.
Next Story





