ದ.ಕ. ಜಿಲ್ಲೆಯಲ್ಲಿ ಜು.6ರಂದು ಸರಕಾರಿ ಕಚೇರಿಗಳಿಗೆ ರಜೆ ಇಲ್ಲ
ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು, ಜು. 5: ರಾಜ್ಯದ ರಾಜಧಾನಿ ಸೇರಿ ಹಲವು ಕಡೆಗಳಲ್ಲಿ ಮುಸ್ಲಿಂ ಬಾಂಧವರು ಜುಲೈ 7(ಗುರುವಾರ)ರಂದು ಈದುಲ್ ಫಿತ್ರ್ ಆಚರಿಸುವುದರಿಂದ ಅಂದು ಶಾಲಾ ಕಾಲೇಜುಗಳು ಸೇರಿ ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಿ ಸರಕಾರ ಆದೇಶ ನೀಡಿದೆ.
ಆದರೆ, ದ.ಕ. ಜಿಲ್ಲೆಯಲ್ಲಿ ಜುಲೈ 6(ಬುಧವಾರ)ರಂದು ಈದುಲ್ ಫಿತ್ರ್ ಆಚರಣೆ ಇರುವುದರಿಂದ ಎಲ್ಲಾ ಶಾಲಾ ಕಾಲೇಜುಗಳಿಗೆ ಬುಧವಾರದಂದೇ ರಜೆ ಘೋಷಿಸಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಆದೇಶ ನೀಡಿದ್ದಾರೆ. ಬುಧವಾರದಂದು ಸರಕಾರಿ ಕಚೇರಿಗಳು ಎಂದಿನಂತೆ ತೆರೆಯಲಿದ್ದು, ದ.ಕ. ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಮರು ರಜಾ ನಿಯಮಾವಳಿ ಪ್ರಕಾರ ರಜೆ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
Next Story





