ಈಜಲು ಹೋಗಿ ಯುವಕ ಸಾವು
ಅಂಕೋಲಾ,ಜು.5: ಈಜಾಡಲು ಹೋದ ಯುವಕನೊರ್ವನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ತಾಲೂಕಿನ ಅಗ್ರಗೋಣ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ಬೆಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಲಿ ಅಗ್ರಗೋಣ ಗ್ರಾಮದ ಸಚಿನ್ ಸದಾನಂದ ನಾಯಕ (23) ಸಾವನ್ನ್ನಪ್ಪಿದ ಯುವಕನಾಗಿದ್ದಾನೆ. ಈತನು ಕಳೆದ 15 ದಿನಗಳಿಂದ ಊರಿಗೆ ಬಂದಿದ್ದು, ಮಂಜಗುಣಿಯ ತಾರಿಜಟಕನ ದೇವರ ಆವಾರಿ ಮುಗಿಸಿ ಬುಧವಾರ ಬೆಂಗಳೂರಿಗೆ ತೆರಳಿದ್ದಾನೆ ಎನ್ನಲಾಗಿದೆ. ಪನ್ನಂಗ ಗೋವಿಂದ ನಾಯಕ, ವೈಭವ ಲಕ್ಷ್ಮೀಧರ ನಾಯಕ ಎನ್ನುವ ಗೆಳಯರೊಂದಿಗೆ ಚಿರೆಕಲ್ಲಿನ ಹೊಂಡದಲ್ಲಿ ಈಜಾಡಲು ಹೋಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ
ಈ ಕುರಿತು ಮಂಜುನಾಥ ನಾರಾಯಣ ನಾಯಕ ದೂರು ಸಲ್ಲಿಸಿದ್ದಾರೆ. ಪಿಐ ಅರುಣಕುಮಾರ ಕೋಳೂರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಸೈ ವಸಂತ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ವಿಷಯ ತಿಳಿದ ತಾಪಂ ಅಧ್ಯಕ್ಷೆ ಸುಜಾತ ಟಿ. ಗಾಂಕವರ, ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ವಿಜಯಕುಮಾರ ನಾಯಕ ಭೆೇಟಿ ನೀಡಿದರು. ಮೃತ ದೇಹವನ್ನು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸುವಲ್ಲಿ ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ ವಾಯ್ ನಾಯ್ಕ, ಗುರು ಗೌಡ ಸಹಕರಿಸಿದರು.





