Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರೊ. ಕೆ.ರಾಮದಾಸ್ ಪ್ರತಿಭಟನೆ ಮತ್ತು...

ಪ್ರೊ. ಕೆ.ರಾಮದಾಸ್ ಪ್ರತಿಭಟನೆ ಮತ್ತು ರಾಮ ರಾಜ್ಯ

ಕೆ. ಎಸ್. ಮಧುಕೆ. ಎಸ್. ಮಧು5 July 2016 11:58 PM IST
share
ಪ್ರೊ. ಕೆ.ರಾಮದಾಸ್ ಪ್ರತಿಭಟನೆ ಮತ್ತು ರಾಮ ರಾಜ್ಯ

ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲ. ಮೈಸೂರಿನ ಉಸ್ತುವಾರಿ ಅಂದಿನ ಸಚಿವ ಎಚ್.ವಿಶ್ವನಾಥ್‌ರ ಕೈಯಲ್ಲಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜು ಆವರಣದಲ್ಲೊಂದು ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ ವಿಶ್ವನಾಥ್ ಭಾಗವಹಿಸಿದ್ದರು. ಅವರು ಇನ್ನೇನು ತಮ್ಮ ಮಾತುಗಳನ್ನು ಆರಂಭಿಸಬೇಕಿತ್ತು. ಆಗ ಅದೆಲ್ಲಿದ್ದವರೋ ಎಂಬಂತೆ ವಿಚಾರವಾದಿ ಕೆ.ರಾಮದಾಸ್ ಎದ್ದು ನಿಂತರು. ‘‘ನಿಷೇಧವಾಗಿರುವ ಪ್ರಾಣಿ ಬಲಿಯನ್ನು ಮಾಡಿಬಂದಿರುವ ಮಂತ್ರಿ ನೀನು. ನೀನು ಆ ಹುದ್ದೆಗೆ ನಾಲಾಯಕ್..’’ ಎಂದು ದನಿ ಎತ್ತಿದರು. ಬೆಳವಣಿಗೆಯಿಂದ ಸ್ವಲ್ಪ ವಿಚಲಿತರಾದ ‘ನೀವು ನಾಲಾಯಕ್ ವಿಚಾರವಾದಿ’’ ಎಂದು ಜಗಳಕ್ಕೆ ನಿಂತರು.
ಸಚಿವರಾದ ವಿಶ್ವನಾಥ್ ಅವರ ಕುಟುಂಬ ಕೆಲವೇ ದಿನಗಳ ಹಿಂದೆ ತಮ್ಮ ಊರಿನ ಹತ್ತಿರದ ದೇವರಿಗೆ ಕುರಿ ಬಲಿ ಕೊಟ್ಟು ಊಟ ಏರ್ಪಡಿಸಿದ್ದರು ಎಂಬ ಸುದ್ದಿ ಅದೇ ದಿನ ವರದಿಯಾಗಿತ್ತು. ಆ ಸುದ್ದಿಯನ್ನು ಓದಿದ ರಾಮದಾಸ್ ಅವರು, ಒಬ್ಬ ಮಂತ್ರಿಯಾದವರು ಹೀಗೆ ಮಾಡುವುದು ಸರಿಯಲ್ಲ, ಹಾಗಾಗಿ ಅವರನ್ನು ನೇರಾನೇರ ಎಲ್ಲರ ಎದುರು ಟೀಕಿಸಬೇಕು ಎಂದು ತಮ್ಮ ಒಂದೆರಡು ಗೆಳೆಯರೊಂದಿಗೆ ಆ ಕಾರ್ಯಕ್ರಮಕ್ಕೆ ಹೋಗಿ ಹಾಗೆ ವಾದಕ್ಕಿಳಿದಿದ್ದರು.
ನೆನಪಿರಲಿ. ಅಂದಿಗೆ, ರಾಮದಾಸ್ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ. ವಿಶ್ವನಾಥ್ ಕ್ಯಾಬಿನೆಟ್ ದರ್ಜೆಯ ಮಂತ್ರಿ. ಇಂದು ರಾಮದಾಸ್ ನಮ್ಮ ಮಧ್ಯೆ ಇಲ್ಲ. ಆದರೆ ವಿಶ್ವನಾಥ್ ಸೇರಿದಂತೆ, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅನೇಕರು ಇಂದು ಇದ್ದಾರೆ.
ಈಗ ಹೇಳಿ, ಇಂತಹದೊಂದು ಸನ್ನಿವೇಶವನ್ನು ನಾವು ಇಂದು ಕಾಣಬಹುದೇ? ಕ್ಯಾಬಿನೆಟ್ ದರ್ಜೆಯ ಮಂತ್ರಿ ಬೇಡ, ತನ್ನ ಊರಿನ ಶಾಸಕನನ್ನು ಟೀಕಿಸುವುದು ಒತ್ತಟ್ಟಿಗಿರಲಿ, ಎದುರು ನಿಂತು ಕತ್ತು ಬಗ್ಗಿಸದೆ ಮಾತನಾಡುವ ಸಾಮರ್ಥ್ಯ ಎಷ್ಟು ಪ್ರಾಧ್ಯಾಪಕರಿಗಿದೆ? ಕೆಲ ಕಾಲೇಜುಗಳಲ್ಲಿ ಶಾಸಕರು ಬಂದಾಗ ಕಾಲಿಗೆ ಬಿದ್ದ ಪ್ರಾಂಶುಪಾಲರಿದ್ದಾರೆ, ಪ್ರಾಧ್ಯಾಪಕರಿದ್ದಾರೆ. ಇಂತಹವರಿಂದ ಹುಡುಗರು ಕಲಿಯುವುದೇನನ್ನು?
ಪ್ರೊ.ಕೆ.ರಾಮದಾಸ್ ಅವರ ಉದಾಹರಣೆಯನ್ನು ಈಗಿನ ಕೆಲ ಹುಡುಗರಿಗೆ ಹೇಳಿದರೆ, ‘ಇವನ್ಯಾರೋ ಸುಳ್ಳು ಹೇಳುತ್ತಿದ್ದಾನೆ’ ಎನ್ನಿಸಬಹುದು. ಏಕೆಂದರೆ ಇಂದಿನ ಪರಿಸ್ಥಿತಿ ಹಾಗಿದೆ. ಅಂತಹದೊಂದು ಘಟನೆ ಈ ಹೊತ್ತಲ್ಲಿ ನಡೆದಿದ್ದರೆ, ಏನೆಲ್ಲಾ ಆಗುತ್ತಿತ್ತು ಎನ್ನುವುದನ್ನು ಒಂದ್ಸಾರಿ ಯೋಚನೆ ಮಾಡೋಣ. ‘‘ಏ. ಯಾರಲ್ಲಿ ಪೊಲೀಸರು, ಈತನನ್ನು ಒಳಗೆ ಹಾಕಿ..’’ - ಎಂದು ಆಜ್ಞೆ ಹೊರಡಿಸಬಹುದಾದ ಮಂತ್ರಿ, ಶಾಸಕರು ನಮ್ಮ ಮಧ್ಯೆ ಇದ್ದಾರೆ. ‘‘ಅದ್ಸರಿ, ಹೀಗೆ ಅವರು ಮಂತ್ರಿಯವರನ್ನು ಟೀಕೆ ಮಾಡಲು ಹೋಗುವಾಗ, ಕಾಲೇಜಿಗೆ ರಜೆ ಹಾಕಿದ್ರಾ..ಅಥವಾ ಹುಡಗರಿಗೆ ಪಾಠ ಮಾಡೋದನ್ನು ಬಿಟ್ಟು ಮಂತ್ರಿಗೆ ಪಾಠ ಮಾಡೋಕೆ ಬಂದಿದ್ದರಾ.?’’ - ಹೀಗೆ ಪ್ರಶ್ನೆ ಮಾಡುವ ಮಾಧ್ಯಮದವರಿದ್ದಾರೆ.
ರಾಮದಾಸ್ ಅಂತಹವರು ತಮ್ಮ ಅಂತಹದೊಂದು ಪ್ರತಿಭಟನೆಯ ಮೂಲಕ ಒಬ್ಬ ಶಿಕ್ಷಕ ಒಂದು ವರ್ಷ ಕಾಲ ಪಾಠ ಮಾಡಿ ಹುಡುಗರಿಗೆ ತಿಳಿಸುವುದಕ್ಕಿಂತ ಹೆಚ್ಚಿನ ಮೌಲ್ಯಯುತವಾದದ್ದನ್ನು ಬೋಧಿಸಿದ್ದರು. ಹಾಗೆ ಪಾಠ ಮಾಡುವವರು ಇಂದು ಬೇಕಾಗಿದ್ದಾರೆ. ಆದರೆ ನಮ್ಮನ್ನಾಳುವ ಸರಕಾರಕ್ಕೆ ಇಂತಹವರ ಅಗತ್ಯ ಇದ್ದಂತೆ ಕಾಣುವುದಿಲ್ಲ. ಇಲ್ಲವಾಗಿದ್ದಲ್ಲಿ, ಪ್ರೊ.ಬಿ.ಪಿ. ಮಹೇಶ್‌ಚಂದ್ರ ಗುರು ಬಂಧನವಾಗುತ್ತಿರಲಿಲ್ಲ. ಅವರು ತಮ್ಮ ಮಾನವ ಹಕ್ಕುಗಳ ಬಗೆಗಿನ ಉಪನ್ಯಾಸದಲ್ಲಿ ಹೇಳಿದ್ದಿಷ್ಟೆ. ‘‘ರಾಮ ಸೀತೆಯನ್ನು ಶಂಕಿಸಿ, ಅಗ್ನಿ ಪ್ರವೇಶ ಮಾಡಲು ಹೇಳುವ ಮೂಲಕ, ಆತ ಸೀತೆಯ ಹಕ್ಕುಗಳನ್ನು ನಿರಾಕರಿಸಿದ್ದ’’. ಅದೊಂದು ಮಾತನ್ನು ಸಹಿಸಿಕೊಳ್ಳಲಾಗದವರು ದೂರು ಕೊಟ್ಟರು. ಅವರ ಬಂಧನವಾಯ್ತು. ಅಷ್ಟರ ಮಟ್ಟಿಗೆ ನಮ್ಮದು ರಾಮ ರಾಜ್ಯ!
ಕೃಪೆ: ವರ್ತಮಾನ

share
ಕೆ. ಎಸ್. ಮಧು
ಕೆ. ಎಸ್. ಮಧು
Next Story
X