ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸೇನಾ ಕಾರ್ಯಾಚರಣೆಗೆ ಸಿದ್ಧವಾಗಲಿ: ಸರಕಾರಿ ಪತ್ರಿಕೆ
ಬೀಜಿಂಗ್, ಜು. 5: ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ಕಾರ್ಯಾಚರಣೆಗೆ ಚೀನಾ ಸಿದ್ಧವಾಗಬೇಕು ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಹೇಳಿದೆ.
ಸಾಗರ ತೀರ ವಿವಾದಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ನ್ಯಾಯ ಮಂಡಳಿಯೊಂದು ನೀಡಲಿರುವ ತೀರ್ಪಿಗೆ ಪೂರ್ವಭಾವಿಯಾಗಿ ಚೀನಾವು ವಿವಾದಿತ ಜಲಪ್ರದೇಶದಲ್ಲಿ ನೌಕಾ ಅಭ್ಯಾಸ ನಡೆಸುತ್ತಿರುವ ನಡುವೆಯೇ ಪತ್ರಿಕೆಯು ಈ ಸಲಹೆ ನೀಡಿದೆ.
ಸಂಪನ್ಮೂಲಗಳ ಆಗರವಾಗಿರುವ ಆಯಕಟ್ಟಿನ ಬಹುತೇಕ ಎಲ್ಲ ಜಲಪ್ರದೇಶಗಳಲ್ಲಿ ಚೀನಾ ಹಕ್ಕು ಸ್ಥಾಪಿಸುತ್ತಿದೆ. ಆದರೆ, ಇದಕ್ಕೆ ಅದರ ನೆರೆಯ ದೇಶಗಳು ವಿರೋಧ ವ್ಯಕ್ತಪಡಿಸುತ್ತಿದ್ದು ಸ್ಥಳದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ನೆಲೆಸಿದೆ.
ಈ ವಲಯದಲ್ಲಿರುವ ಹೆಚ್ಚಿನ ದೇಶಗಳೊಂದಿಗೆ ಅಮೆರಿಕ ಮಹತ್ವದ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿದೆ.
Next Story





