ಜುಗಾರಿ: ಎಂಟು ಮಂದಿಯ ಸೆರೆ
ಕಾರ್ಕಳ, ಜು.5: ನಿಟ್ಟೆ ಗ್ರಾಮ ಗುಂಡ್ಯಡ್ಕ ಚೇತನಹಳ್ಳಿ ಎಂಬಲ್ಲಿ ಸೋಮವಾರ ಸಂಜೆ ವೇಳೆ ಜುಗಾರಿ ಆಡುತ್ತಿದ್ದ ಆರೋಪಿಗಳಾದ ಸುಮಂತ್ ರಾಣೆ, ಅಬ್ದುರ್ರಹ್ಮಾನ್, ಆನಂದ, ಅಲ್ಪಾಸ್, ಶೇಖರಪ್ಪ, ಜೋಯಿ, ಸತೀಶ ಹಾಗೂ ಕರುಣೇಶ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2,650 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಂದರ್ಭ ಓರ್ವ ಪರಾರಿಯಾಗಿದ್ದಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





