ಎಎಪಿ ಮುಖಂಡ ಆಶೀಷ್ ಖೇತಾನ್ ವಿರುದ್ಧ ಎಫ್‌ಐಆರ್
ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ

ಚಂಡೀಗಢ, ಜು.6: ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಆರೋಪದಲ್ಲಿ ಎಎಪಿ ಮುಖಂಡ ಆಶೀಷ್ ಖೇತಾನ್ ವಿರುದ್ಧ ಪಂಜಾಬ್ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಸಿಖ್ಖರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಕಾರಣಕ್ಕೆ ಮಂಗಳವಾರ ಅಮೃತಸರದಲ್ಲಿ ಆಶೀಷ್ ಖೇತಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಖೇತಾನ್ ಅಮೃತಸರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಎಎಪಿ ಪ್ರಣಾಲಿಕೆಯನ್ನು ಗುರು ಗ್ರಂಥ ಸಾಹಿಬ್ ಹಾಗೂ ಇತರ ಧಾರ್ಮಿಕ ಗ್ರಂಥಗಳಿಗೆ ಹೋಲಿಕೆ ಮಾಡಿದ್ದರು ಎಂದು ವರದಿಯಾಗಿತ್ತು.
ಪಂಜಾಬ್ ವಿಧಾನಸಭಾ ಚುನಾವಣೆಯ ‘ಯೂತ್ ಪ್ರಣಾಲಿಕೆ’ಯ ಮುಖಪುಟದಲ್ಲಿ ‘ಗೋಲ್ಡನ್ ಟೆಂಪಲ್‘ ಇಮೇಜ್‌ನ್ನು ಬಳಸಿರುವುದಕ್ಕೂ ಎಎಪಿ ತೀವ್ರ ಟೀಕೆಗೆ ಗುರಿಯಾಗಿದೆ.
ಮಂಗಳವಾರ ಈ ಬಗ್ಗೆ ಕ್ಷಮೆಯಾಚಿಸಿರುವ ಎಎಪಿ,‘‘ ಸಮಾಜದ ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ಉದ್ದೇಶ ತನಗಿಲ್ಲ’’ ಎಂದು ಹೇಳಿದೆ.
Next Story





