ಹೈಕೋರ್ಟ್ ನ್ಯಾಯಮೂರ್ತಿಗೆ ಲಂಚದ ಆಮಿಷ!

ಬೆಂಗಳೂರು, ಜು.6: ಭೂಮಿ ವಿವಾದ ಪ್ರಕರಣ ಸಂಬಂಧ ತಮ್ಮ ಪರವಾಗಿ ತೀರ್ಪು ನೀಡುವಂತೆ ನನಗೆ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹೇಳಿದ್ದಾರೆ.
ಕಂದಾಯ ಇಲಾಖೆ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಉಮ್ರಾ ಡೆವಲಪರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಂತರ ಕೋರ್ಟ್ ಹಾಲ್‌ನಲ್ಲಿ ನ್ಯಾಯಮೂರ್ತಿಗಳು ಈ ವಿಷಯ ಬಹಿರಂಗಪಡಿಸಿದರು.
ತಮ್ಮನ್ನು ಭೇಟಿ ಮಾಡಿದ ವ್ಯಕ್ತಿಯೊಬ್ಬ ಆತನ ಪರವಾಗಿ ತೀರ್ಪು ನೀಡಿ, ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ನನಗೆ ಲಂಚ ನೀಡುವುದಾಗಿ ಹೇಳಿದ್ದ ಎಂದು ಅವರು ತಿಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಈ ಮಾತು ಕೇಳಿ ಕೋರ್ಟ್ ಹಾಲ್‌ನಲ್ಲಿದ್ದ ವಕೀಲರು ಆಶ್ಚರ್ಯಗೊಂಡರು.
Next Story





