ರಾಜ್ಯದ ಕೇಂದ್ರ ಸಚಿವರೆಲ್ಲರೂ ಅದಕ್ಷರು: ಸಿಎಂ ಸಿದ್ದರಾಮಯ್ಯ
.jpg)
ಬೆಂಗಳೂರು, ಜು.6: ಕೇಂದ್ರ ಸರಕಾರದ ಬಿಜೆಪಿಯ ಎಲ್ಲ ಸಚಿವರು ಅದಕ್ಷರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆಯಲ್ಲಿ ರಾಜ್ಯದ ಸದಾನಂದಗೌಡರಿಗೆ ಮಹತ್ವವಲ್ಲದ ಖಾತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿವಿಎಸ್ ಒಬ್ಬರು ಮಾತ್ರ ಅದಕ್ಷರಲ್ಲ, ಉಳಿದ ಎಲ್ಲರೂ ಅದಕ್ಷರೇ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರದ ಸಂಪುಟ ವಿಸ್ತರಣೆಯಲ್ಲಿ ಸದಾನಂದಗೌಡರಿಗೆ ಎರಡು ಬಾರಿ ಹಿಂಭಡ್ತಿ ನೀಡಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿನ ಎಲ್ಲ ಕೇಂದ್ರ ಸಚಿವರು ಅದಕ್ಷರಾಗಿದ್ದಾರೆ ಸದಾನಂದಗೌಡರಷ್ಟೇ ಅಲ್ಲ ಎಂದು ಹೇಳಿದರು.
Next Story





