ಪುತ್ತೂರಿನಲ್ಲಿ ಸಂಭ್ರಮದಿಂದ ನಡೆದ ಈದುಲ್ ಫಿತ್ರ್

ಪುತ್ತೂರು, ಜು.6: ರಮಝಾನ್ ಪ್ರಯುಕ್ತ ಪುತ್ತೂರಿನ ಎಲ್ಲಾ ಮಸೀದಿಗಳಲ್ಲಿ ಬುಧವಾರ ಈದ್ ವಿಶೇಷ ನಮಾಝ್ ಮತ್ತು ಪ್ರಾರ್ಥನೆಗಳು ನಡೆಯಿತು. ಪುತ್ತೂರಿನ ಕೇಂದ್ರ ಜುಮ್ಮಾ ಮಸೀದಿ, ಬದ್ರಿಯಾ ಜುಮ್ಮಾ ಮಸೀದಿ, ಪರ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಗಳಲ್ಲಿ ಬೆಳಗ್ಗೆ ಈದ್ ನಮಾಝ್ ಮತ್ತು ಪ್ರಾರ್ಥನೆ ನಡೆಸಲಾಯಿತು.
ಕಲ್ಲೇಗ ಜುಮ್ಮಾ ಮಸೀದಿ, ಸಾಲ್ಮರ ಸೈಯದ್‌ಮಲೆ ಜುಮ್ಮಾ ಮಸೀದಿ, ಕಲ್ಲೇಗ ಜುಮ್ಮಾ ಮಸೀದಿ, ಬಪ್ಪಳಿಗೆ ಮಸ್ಜಿದುನ್ನೂರ್ ಜುಮ್ಮಾ ಮಸೀದಿ, ಕುಂಬ್ರ ಬದ್ರಿಯಾ ಜುಮ್ಮಾ ಮಸೀದಿ, ಹಂಟ್ಯಾರು ಬದ್ರಿಯಾ ಜುಮ್ಮಾ ಮಸೀದಿ, ಎಪಿಎಂಸಿ ರಸ್ತೆಯಲ್ಲಿರುವ ಸಲಫಿ ಜುಮ್ಮಾ ಮಸೀದಿಯಲ್ಲಿ ಈದ್ ನಮಾಝ್ ಮತ್ತು ಪ್ರಾರ್ಥನೆಗಳು ನಡೆಯಿತು. ಎಲ್ಲಾ ಮುಸ್ಲಿಂ ಬಾಂಧವರು ಈದ್ ನಮಾಝ್‌ಗಳಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Next Story





