ಅಕ್ರಮ ಮರಳು ಸಾಗಾಟದ ಲಾರಿ ವಶ
ಮಂಗಳೂರು, ಜು. 6: ಅಕ್ರಮ ಮರಳು ಸಾಗಾಟದ ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು ನಗರದ ಕಣ್ಣೂರು ಗ್ರಾಮದ ಬಳಿ ಬುಧವಾರ ಪತ್ತೆಹಚ್ಚಿದ್ದಾರೆ.
ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಮರಳು ಸಾಗಿಸುತ್ತಿದ್ದ ಈಚರ್ ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸಿ, ಕೆಳಗಿಳಿದು ಓಡಿಹೋಗಿದ್ದಾನೆ. ಅಧಿಕಾರಿಗಳು ಲಾರಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿದ್ದಾರೆ.
Next Story





