ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ
ಮಂಗಳೂರು,ಜು.6: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾವತಿಯಿಂದ ವಿಶೇಷ ಘಟಕಯೋಜನೆ (ಎಸ್ ಸಿ ಪಿ) ಮತುತಿ ಗಿರಿಜನ ಉಪಯೋಜನೆಯಡಿ (ಟಿಎಸ್‌ಪಿ) ಉಚಿತವಾಗಿ ಪರಿಶಿಷ್ಠ ಜಾತಿ, ಪಂಗಡದ ಎಸ್ ಎಸ್ ಎಲ್ ಸಿ , ಪಿಯುಸಿ,ಐಟಿಐ ,ಡಿಪ್ಲೋಮ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ 12 ತಿಂಗಳ ಟೂಲ್ ರೂಮ್ ಮೆಷನಿಶ್ಟ್, ಹಾಗೂ ಐಟಿಐ, ಡಿಎಂಇ, ಬಿ ಇ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ 6 ತಿಂಗಳ ಅವಧಿಯ ಸಿ.ಎನ್.ಸಿ. ಟೆಕ್ನಾಲಜಿಸ್ಟ್, ಹಾಗೂ ಐಟಿಐ, ಡಿಪ್ಲೊಮ, ಬಿ ಇ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ 4 ತಿಂಗಳ ಅವಧಿಯ ಕ್ಯಾಡ್ ಕ್ಯಾಮ್ ಹಾಗೂ ಎಸ್ ಎಸ್ ಎಲ್ ಸಿ , ಪಿಯುಸಿ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಟರ್ನರ್, ಮಿಲ್ಲರ್, ಗ್ರೈಂಡರ್ ಕೋರ್ಸ್‌ಗಳಲ್ಲಿ ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿ ಅವದಿಯಲ್ಲಿ ಅಭ್ಯರ್ಥಿಗಳಿಗೆ ಮಾಹೆಯಾನ ರೂ 2500/- ಶಿಷ್ಯವೇತನ ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸ ಬೇಕಾದ ವಿಳಾಸ ಪ್ರಾಂಶುಪಾಲರು, ಜಿಟಿಟಿಸಿ, ನಂ. 7ಇ, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯ, ಮಂಗಳೂರು, ಫೋನ್ ನಂ. 0824-2408003 /9141629595. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಜುಲೈ 18 ವಯೋಮಿತಿ 18 ವರ್ಷ ಮೇಲ್ಪಟ್ಟಿರಬೇಕು ಎಂದು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.





