ಜಿಶಾರ ಕುಟುಂಬಕ್ಕೆ ಮನೆ ಸಿದ್ಧ: ಕೀಲಿಕೈ ಮುಖ್ಯಮಂತ್ರಿ ಹಸ್ತದಿಂದ ಹಸ್ತಾಂತರ

ಪೆರುಂಬಾವೂರ್,ಜುಲೈ 8: ಜಿಶಾರ ಕುಟುಂಬಕ್ಕೆ ಸರಕಾರ ಮತ್ತು ವಿವಿಧ ಸಂಘಟನೆಗಳು ಮುಂದೆ ನಿಂತು ಕಟ್ಟಿಸಿದ ಮನೆ ಸಿದ್ಧವಾಗಿದ್ದು ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಮನೆಯನ್ನು ಜಿಶಾ ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ.
ಮಲಗಿ ನಿದ್ರಿಸಲು ಭದ್ರವಾದ ಮನೆಯೊಂದು ಆಗಬೇಕಾಗಿದೆ ಎಂಬುದು ಜಿಶಾರ ಬಹುದೊಡ್ಡ ಕನಸಾಗಿತ್ತು. ಕುಟುಂಬಕ್ಕೆ ಮುಡಕ್ಕುಯ ಪಂಚಾಯತ್ ಸಮೀಪದ ತೃಕೈಪಾರದಲ್ಲಿ ಎರಡುಕೋಣೆಗಳನ್ನು ಹೊಂದಿರುವ ಮನೆಯನ್ನು ಕಟ್ಟಿಸಲಾಗಿದೆ. ಸ್ವಂತ ಸ್ಥಳ ಮನೆಗಳಿಲ್ಲದೆ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸರಕಾರ ನೀಡಿದ ಮೂರು ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಿದ ಸಮಯದಲ್ಲಿ ಜಿಶಾ ಕೊಲೆಯಾದರು. ಜಿಶಾ ಕೊಲೆಯಾಗುವ ಸಮಯದಲ್ಲಿ ಒಂದು ಆಳೆತ್ತರ ಗೋಡೆ ಕಟ್ಟುವ ಕೆಲಸ ಮುಗಿದಿತ್ತು. ಜಿಶಾ ಕೊಲೆ ಯಾಗುವ ಮೊದಲು ಮನೆಕೆಲಸ ಪೂರ್ತಿಮಾಡಲು ಹಲವರಲ್ಲಿ ಹಣ ಸಹಾಯ ಕೇಳಿದ್ದರೂ ಕೊಡಲು ಯಾರೂ ಮುಂದಾಗಿರಲಿಲ್ಲ.
ಮೊದಲು ಕೆಲಸ ಶುರು ಮಾಡಿದ್ದ ಮನೆಗೆ ಬಾಲಕ್ಷಯ ಇದೆ ಎಂದು ತಿಳಿದದ್ದರಿಂದ ಅದನ್ನು ಕೆಡವಿಎರಡು ಕೋಣೆ, ಅಡಿಗೆಕೋಣೆ ಹಾಲ್ ಇರುವ ಮನೆಯ ಕೆಲಸ ಪೂರ್ತಿಯಾಗಿದೆ.ಹೊಸ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಲ್ವತ್ತೈದು ದಿವಸಗಳಲ್ಲಿ ಮನೆ ನಿರ್ಮಾಣ ಪೂರ್ತಿಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಕಾಕ್ಕನಾಡ್ ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.





