ಕಾಸರಗೋಡು: ಬದಿಯಡ್ಕ ಗ್ರಾಮ ಪಂಚಾಯತ್ ಹಾಗೂ ಕುಟುಂಬ ಶ್ರೀ ವತಿಯಿಂದ ಹಲಸು ಮೇಳ

ಕಾಸರಗೋಡು, ಜು.8: ಹಲಸಿನ ಮಹತ್ವ ಕುರಿತು ಜನರಿಗೆ ತಿಳುವಳಿಕೆ ಮೂಡಿಸಲು ಬದಿಯಡ್ಕ ಗ್ರಾಮ ಪಂಚಾಯತ್ ಹಾಗೂ ಕುಟುಂಬ ಶ್ರೀ ಹಾಗೂ ಇನ್ನಿತರ ಸಂಘಟನೆಗಳ ಸಹಕಾರದೊಂದಿಗೆ ಬದಿಯಡ್ಕದ ಗುರುಸದನದಲ್ಲಿ ಹಲಸು ಮೇಳ ಶುಕ್ರವಾರ ಬೆಳಗ್ಗೆ ಆರಂಭಗೊಂಡಿದ್ದು , ಪ್ರದರ್ಶನ , ಮಾರಾಟ ವ್ಯವಸ್ಥೆ ಮಾಡಲಾಗಿದೆ.
ಮೇಳದಲ್ಲಿ ವಿವಿಧ ಜಾತಿಯ ಹಲಸಿನ ಹಣ್ಣು ಮತ್ತು ಹಲಸಿನ ಕಾಯಿಗಳ ಪ್ರದರ್ಶನ, ಹಲಸಿನ ಕಾಯಿಯಿಂದ ತಯಾರಿಸಿದ ವಿವಿಧ ರೀತಿಯ ತಿಂಡಿಗಳು , ಹಲಸಿನ ಹಣ್ಣಿನ ಪಾಯಸ , ಉಪ್ಪಿನ ಸೊಳೆ ಮೊದಲಾದ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಔಷಧಿಯ ಗುಣವುಳ್ಳ ಬಹುಬೇಡಿಕೆಯ ಹಲಸು ಇಂದು ಯಾರಿಗೂ ಬೇಡವಾಗಿದೆ. ಹಳ್ಳಿಗಳಲ್ಲಿ ಬೇಡಿಕೆ ಇಲ್ಲದಿದ್ದರೂ ಪಟ್ಟಣಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿದೆ. ಇದಲ್ಲದೆ ವಿದೇಶಕ್ಕ ಹಲಸಿನ ಕಾಯಿ ಮತ್ತು ಹಣ್ಣನ್ನು ರಫ್ತು ಮಾಡಲಾಗುತ್ತಿದೆ.
ಮಾರಕ ಕ್ಯಾನ್ಸರಿಗೂ ಹಲಸಿನ ಹಣ್ಣಿನಲ್ಲಿ ಔಷಧಿ ಗುಣ ಇದೆ. ಇದಲ್ಲದೆ ಹಲವು ರೋಗಗಳಿಗೂ ಹಲಸು ಔಷಧಿ ಗುಣ ಇದರಲ್ಲಿ ಹೊಂದಿದೆ. ಈ ಹಿನ್ನಲೆಯಲ್ಲಿ ಹಲಸಿನ ಕಾಯಿಯ ಉಪಯೋಗ ಹಾಗೂ ಗುಣದ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ . ಬದಿಯಡ್ಕದಲ್ಲಿ ಈ ಮೇಳ ಹಮ್ಮಿಕೊಂಡಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಕೆ .ಎನ್ . ಕೃಷ್ಣ ಭಟ್ , ಸದಸ್ಯರಾದ ಶ್ಯಾಮ್ ಪ್ರಸಾದ್ ಮಾನ್ಯ , ಜಯಶ್ರೀ , ಅನ್ವರ್ ಓಜೋನ್ ಮೊದಲಾದವರು ನೇತೃತ್ವ ನೀಡುತ್ತಿದ್ದಾರೆ







