ಬಾಂಬ್ ಸ್ಫೋಟ ಆರೋಪಿ ಪ್ರಜ್ಞಾಳನ್ನು ರಾಜನಾಥ್ ಸಿಂಗ್ ಭೇಟಿ ಮಾಡಿದ್ದಕ್ಕೆ ಏನು ಹೇಳುತ್ತೀರಿ ?
ದಿಗ್ವಿಜಯ್ ಸಿಂಗ್ ಪ್ರಶ್ನೆ

ಝಾಕಿರ್ ನಾಯ್ಕ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ವಿವಾದ
ಹೊಸದಿಲ್ಲಿ, ಜು.9 : ಖ್ಯಾತ ಇಸ್ಲಾಮಿಕ್ ವಿದ್ವಾಂಸ ಡಾ. ಝಾಕಿರ್ ನಾಯ್ಕ್ ಜೊತೆಗೆ ತಾನು ವೇದಿಕೆ ಹಂಚಿಕೊಂಡಿದ್ದರ ಕುರಿತು ಮಾಧ್ಯಮಗಳು ಹಾಗೂ ಸಂಘ ಪರಿವಾರ ವಿವಾದ ಸೃಷ್ಟಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಜೊತೆ ಕುಳಿತ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ ?
ತನ್ನ ಫೇಸ್ ಬುಕ್ ನಲ್ಲಿ ಈ ಕುರಿತು ಫೋಟೋ ಜೊತೆ ಸ್ಟೇಟಸ್ ಹಾಕಿರುವ ದಿಗ್ವಿಜಯ್ , ಈವರೆಗೆ ಝಾಕಿರ್ ನಾಯ್ಕ್ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ಞಾ ಜೊತೆ ರಾಜನಾಥ್ ಭೇಟಿ ಆಗಿದ್ದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಾರೆ. ಅದೇ ರೀತಿ ಝಾಕಿರ್ ನಾಯ್ಕ್ ಜೊತೆ ವೇದಿಕೆ ಹಂಚಿಕೊಂಡ ಶ್ರೀ ಶ್ರೀ ರವಿಶಂಕರ್ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.





