ಕುಂದಾಪುರ: ಹಣದ ವಿಚಾರದಲ್ಲಿ ಯುವಕನ ಕೊಲೆಯತ್ನ
ಕುಂದಾಪುರ, ಜು.8: ಪಡೆದ ಹಣ ನೀಡದ ಕಾರಣಕ್ಕಾಗಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಜು.7ರಂದು ಸಂಜೆ 7.15ರ ಸುಮಾರಿಗೆ ವಡೇರಹೋಬಳಿ ಗ್ರಾಮ ಕುಂದೇಶ್ವರ ದೇವಸ್ಥಾನದ ಹಿಂಬದಿ ರಸ್ತೆಯಲ್ಲಿ ನಡೆದಿದೆ.
ಚೂರಿ ಇರಿತಕ್ಕೆ ಒಳಗಾಗಿರುವ ಕೋಟೇಶ್ವರ ಗ್ರಾಮದ ಮಠದಬೆಟ್ಟು ನಿವಾಸಿ ಗೋಪಾಲ ಆಚಾರಿ ಎಂಬವರ ಮಗ ಪ್ರಸಾದ್(25) ಎಂದು ಗುರುತಿಸಲಾಗಿದೆ.
ಮನೆಯಲ್ಲಿದ್ದ ಪ್ರಸಾದ್‌ರನ್ನು ದೂರವಾಣಿ ಕರೆ ಮಾಡಿ ಕರೆಸಿದ ಕುಂದೇಶ್ವರ ದೇವಸ್ಥಾನದ ಬಳಿಯ ನಿವಾಸಿ ಅಶೋಕ ರಾಜ್ ಎಂಬಾತ ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಪ್ರಸಾದ್‌ರ ಎದೆಗೆ ಚುಚ್ಚಿದ ಎನ್ನಲಾಗಿದೆ. ಅಶೋಕ್‌ಗೆ ಪ್ರಸಾದ್ ಸುಮಾರು ಒಂದುವರೆ ಲಕ್ಷ ಹಣ ಕೊಡಲು ಬಾಕಿ ಇದ್ದು, ಈ ಬಾಕಿ ಹಣ ನೀಡದ ಕಾರಣಕ್ಕೆ ಈ ಕೃತ್ಯ ಎಸಗಿ ರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





