Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೇಂದ್ರ ಸಂಪುಟ ವಿಸ್ತರಣೆ: ಕರ್ನಾಟಕ...

ಕೇಂದ್ರ ಸಂಪುಟ ವಿಸ್ತರಣೆ: ಕರ್ನಾಟಕ ಲೆಕ್ಕಕ್ಕಿಲ್ಲವೇ?

ರಮಾನಂದ ಶರ್ಮಾರಮಾನಂದ ಶರ್ಮಾ8 July 2016 11:23 PM IST
share

ದಿಲ್ಲಿಯಲ್ಲಿ ಕರ್ನಾಟಕ ಅಟಕ್ಕುಂಟು, ಅದರೆ ಲೆಕ್ಕಕ್ಕಿಲ್ಲ ಎನ್ನುವುದು ಕೇಂದ್ರ ಸಂಪುಟದ ವಿಸ್ತರಣೆ ಸಮಯದಲ್ಲಿ ಇನ್ನೊಮ್ಮೆ ಸಾಬೀತಾಗಿದೆ. ಕೇಂದ್ರದ ಭಾಜಪ ಸರಕಾರಕ್ಕೆ 17 ಸಂಸದರ ಬಲವನ್ನು ಕೊಟ್ಟ ಕರ್ನಾಟಕವನ್ನು ಈ ರೀತಿ ನಡೆಸಿ ಕೊಳ್ಳಬಾರದಿತ್ತು. ಭಾಜಪಕ್ಕೆ ದಕ್ಷಿಣದಲ್ಲಿ ಸ್ವಲ್ಪಲೆಗ್ ರೂಂ ಅವಕಾಶ ಕೊಟ್ಟ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಗೌರವಾನ್ವಿತ ಮನ್ನಣೆ ಬೇಕಾಗಿತ್ತು. ಆದರೆ ಬಿಜೆಪಿ ತಾನು ಅಖಿಲ ಭಾರತ ಪಕ್ಷ ಮತ್ತು ಎಲ್ಲಾ ರಾಜ್ಯಗಳನ್ನು ಸಮಾನವಾಗಿ ನೋಡುತ್ತೇವೆ ಎನ್ನುವುದನ್ನು ತೋರಿಸಲು ವಿಫಲವಾಯಿತು.
ಸಂಪುಟ ವಿಸ್ತರಣೆಯಲ್ಲಿ ಮತ್ತು ಯಾರನ್ನು ತೆಗೆದುಕೊಳ್ಳಬೇಕು, ಬಿಡಬೇಕು ಎನ್ನುವುದು ಪ್ರಧಾನಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ ಮತ್ತು ಅದು ಅವರ ಪರಮಾಧಿಕಾರ ಕೂಡಾ. ಆದರೆ, ಈ ವಿವೇಚನೆ ಮತ್ತು ಪರಮಾಧಿಕಾರವನ್ನು ಪ್ರಶ್ನಿಸಲಾಗದು ಎನ್ನುವ ಒಂದೇ ದೃಷ್ಟಿಯಲ್ಲಿ ಅದನ್ನು ಉಪಯೋಗಿಸಲಾಗದು.
ರಾಜ್ಯದ ಸಂಸದ ಸದಾನಂದ ಗೌಡರಿಗೆ ರೈಲ್ವೆ ಇಲಾಖೆಯನ್ನು ನೀಡಿ ಮೂರೇ ತಿಂಗಳಲ್ಲಿ ರೈಲಿ ನಿಂದ ಇಳಿಸಲಾಯಿತು. ನಂತರ ಅವರಿಗೆ ಕಾನೂನು ಇಲಾಖೆಯನ್ನು ನೀಡಲಾಯಿತು. ಈಗ ಈ ಖಾತೆಯಲ್ಲೂ ಸಾಧನೆ ಸಮರ್ಪಕವಾಗಿಲ್ಲವೆಂದು ಹಿಂಬಡ್ತಿ ನೀಡಲಾಗಿದೆ.
 ಕೆಲವು ಮಾಧ್ಯಮದ ವರದಿಗಳನ್ನು ನಂಬುವುದಾದರೆ ನಿಜವಾಗಿ ಕಾನೂನು ಸಚಿವಾಲಯವನ್ನು ನಡೆಸುತ್ತಿ ದ್ದವರು ಅರುಣ್ ಜೇಟ್ಲಿ. ಗೌಡರು ಹೆಸರಿಗೆ ಮಾತ್ರ ಮಂತ್ರಿಗಳಾಗಿದ್ದರು. ಅಟಾರ್ನಿ ಜನರಲ್ ಸೇರಿದಂತೆ ಕೇಂದ್ರ ಸರಕಾರದ ಕಾನೂನು ಅಧಿಕಾರಿಗಳು ಕರ್ನಾಟಕದ ಗೌಡರಿಗಿಂತ ಅರುಣ್ ಜೇಟ್ಲಿಯವರಿಗೆ ಹತ್ತಿರವಾಗಿದ್ದರಂತೆ. ಇದನ್ನು ಸೂಕ್ಷ್ಮ್ಮವಾಗಿ ಗಮನಿಸಿದ ಗೌಡರು ಬದಲಾವಣೆಯನ್ನು ಬಯಸಿದ್ದರಂತೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗಣನೀಯವಾಗಿ ಇರುವ ಗೌಡರ ಮತಬ್ಯಾಂಕನ್ನು ಉಳಿಸಿಕೊಳ್ಳಲು ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ ಎನ್ನುವ ರಾಜಕೀಯ ಪಂಡಿತರ ವಿಶ್ಲೇಷಣೆಯಲ್ಲಿ ಅರ್ಥವಿಲ್ಲದಿಲ್ಲ. ಅವರಿಗೆ ಈಗ ಕೊಟ್ಟ ಖಾತೆ ಯಾವ ಪುರುಷಾರ್ಥಕ್ಕೆ ಎಂದು ಕನ್ನಡಿಗರು ಕೇಳುತ್ತಿದ್ದಾರೆ. ರಾಜ್ಯದ ಅಭಿವೃದ್ದಿಗೆ ಕಿಂಚಿತ್ ಆದರೂ ಸಹಾಯವಾಗಬಹುದೇ?
ನಾಗರಿಕ ವಿಮಾನ ಮಂತ್ರಿಯಾಗಿದ್ದ ಸಿದ್ದೇಶ್ವರರನ್ನು ಮೂರೇ ತಿಂಗಳಲ್ಲಿ ನಡು ಆಕಾಶದಲ್ಲಿಯೇ ಕೆಳಗಿಳಿಸ ಲಾಯಿತು. ಅದೇ ಖಾತೆಯಲ್ಲಿ ಇದ್ದಿದ್ದರೆ, ಪಾಳು ಕೊಂಪೆಯಾಗಿರುವ ಕೆಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ಇಳಿಯಲು ಪ್ರಯತ್ನಿಸುತ್ತಿದ್ದವೇನೋ? ಅರ್ಧ ನಿರ್ಮಿಸಲ್ಪಟ್ಟ ವಿಮಾನ ನಿಲ್ದಾಣಗಳು ಪೂರ್ಣವಾಗುತ್ತಿದ್ದವೇನೋ? ಅವರನ್ನು ಸಣ್ಣ ಕೈಗಾರಿಕೆಗೆ ನೂಕಲಾಯಿತು. ಅನಂತ ಕುಮಾರರ ಗೊಬ್ಬರ ಖಾತೆಯಿಂದ ಹೆಚ್ಚಿನದ್ದೇನನ್ನೂ ನಿರೀಕ್ಷಿಸು ವಂತಿಲ್ಲ.. ಈಗ ನೀಡಿರುವ ಸಂಸದೀಯ ವ್ಯವಹಾರಗಳ ಖಾತೆಯಿಂದ ರಾಜ್ಯಕ್ಕೆ ಏನು ದೊರಕಬಹುದು? ಎಲ್ಲವೂ ಕಾಟಾಚಾರದ ಮಂತ್ರಿ ಪದವಿಗಳೇ ವಿನಹ ‘‘ಕಾರ್ಯ’’ ಮಾಡುವ ಪದವಿಗಳಲ್ಲ.
 ಇಂತಹ ಗೊಂದಲ ಮತ್ತು ನಿರ್ಲಕ್ಷಕ್ಕೆ ಪ್ರಧಾನಿ ಮೋದಿ ಮತ್ತು ಭಾಜಪದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತ್ರ ಕಾರಣವಲ್ಲ. ರಾಜ್ಯದ ಸಂಸದರ ನಿಷ್ಕ್ರಿಯತೆಯೂ ಕಾರಣವಾಗಿದೆ.
  ಮಗು ಅತ್ತರೂ ಹಾಲು ಕೊಡದ ದಿನಗಳಲ್ಲಿ, ಅಳದೇ ಹಾಲು ಸಿಗಬಹುದೇ? ಈ ನಿಟ್ಟಿನಲ್ಲಿ ಭಾಜಪದ ರಾಜ್ಯ ಘಟಕವು ಏನಾದರೂ ಪ್ರಯತ್ನ ಮಾಡಿದೆಯೇ? ತಮ್ಮ ಹಕ್ಕನ್ನು ಪ್ರಬಲವಾಗಿ ಮಂಡಿಸಿದೆಯೇ? ತಮ್ಮ ವರಿಷ್ಠರ ಮುಂದೆ ಧೈರ್ಯವಾಗಿ ವಾದಿಸುವ ಶಕ್ತಿ ರಾಜ್ಯದ ಸಂಸದರಿಗಿದೆಯೇ? ಕಳೆದ ಒಂದು ವರ್ಷದಿಂದ ಉತ್ತರ ಕರ್ನಾಟಕದ ಜನರು ಕಳಸಾ-ಬಂಡೂರಿಗಾಗಿ ಹೋರಾಟ ನಡೆಸುತ್ತಿದ್ದು, ಈ ಮಧ್ಯೆ ಎರಡು ಬಾರಿ ಪ್ರಧಾನಿ ಮೋದಿಯವರು ಈ ಭಾಗಕ್ಕೆ ಭೇಟಿಕೊಟ್ಟರೂ, ಅವರ ಬಳಿ ಈ ವಿಷಯವನ್ನು ಪ್ರಸ್ತಾಪಮಾಡಲಾರದೆ ಹೋದರು. ತಮ್ಮ ಬಲಾಢ್ಯ ಮತ ಬ್ಯಾಂಕ್ ಇರುವ ಪ್ರದೇಶದ ಸಮಸ್ಯೆಯನ್ನೇ ಪ್ರಸ್ತಾಪಿಸಲಾಗದವರು, ರಾಜ್ಯದ ಹಿತ ಕಾಪಾಡುವರೇ ಎನ್ನುವ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಇವರ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸಿದ ಪಕ್ಷದ ವರಿಷ್ಠರು ಇವರನ್ನು ಕ್ಯಾರೇ ಮಾಡುತ್ತಿಲ್ಲ. 2018ರಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಈಗ ಉತ್ತರ ಪ್ರದೇಶ ನೆನಪಾದಂತೆ, ಆ ಸಮಯದಲ್ಲಿ ದಿಲ್ಲಿಗೆ ಕರ್ನಾಟಕ ಖಂಡಿತವಾಗಿ ನೆನಪಾಗುತ್ತದೆ. ಚುನಾವಣೆ ಗೆಲ್ಲಲು, ಅಧಿಕಾರ ಹಿಡಿಯಲು ಮತ್ತು ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಲು ಮಾತ್ರ ಕೇಂದ್ರಕ್ಕೆ ಕರ್ನಾಟಕ ನೆನಪಾಗುತ್ತದೆ
ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯವನ್ನು ಪ್ರತಿಭಟಿಸದೆ, ರಾಜ್ಯ ಭಾಜಪವು ಅದನ್ನು ಸಮರ್ಥಿಸಿಕೊಂಡಿದ್ದು ಅನ್ಯಾಯದ ಪರಮಾವಧಿ. ಟಿವಿ ಚರ್ಚೆಯಲ್ಲಿ ಅದರ ಪದಾಧಿಕಾರಿ ಗಳೊಬ್ಬರು ಸಮಸ್ತ ಕನ್ನಡಿಗರು ತಲೆ ತಗ್ಗಿಸುವಂತೆ ಮಾತನಾಡಿದರು. ಎಲ್ಲಾ ಖಾತೆಗಳಲ್ಲಿ ಕೈಆಡಿಸುವಂಥ ಮಹತ್ವದ ಖಾತೆಯನ್ನು ಗೌಡರಿಗೆ ಕೊಡಲಾಗಿದೆ ಎಂದು ತೀರಾ ಹಾಸ್ಯಾಸ್ಪದ ಹೇಳಿಕೆ ಕೊಟ್ಟು ಪ್ರಜ್ಞಾವಂತರನ್ನು ಮುಜುಗರಕ್ಕೀಡು ಮಾಡಿ ರಾಜ್ಯದ ಹಿತಕ್ಕಿಂತ ವ್ಯಕ್ತಿ ಪೂಜೆ ಮತ್ತು ಪಕ್ಷ ನಿಷ್ಠೆ ಮೇಲು ಎಂದು ತೋರಿಸಿದ್ದಾರೆ. ಮಂತ್ರಿ ಪದವಿಗಿಂತ, ಖಾತೆಗಳಿಗಿಂತ, ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಮುಖ್ಯ ಎಂದು ಅಸಮರ್ಥನೀಯ ಅಂಕಿ-ಸಂಖ್ಯೆಗಳೊಡನೆ ವಿಷಯ ಮರೆಮಾಚುವ ಹತಾಶ ಪ್ರಯತ್ನ ಮಾಡಿ ಪಕ್ಷದ ವರಿಷ್ಠರನ್ನು ಸಮರ್ಥಿಸಿಕೊಂಡರು..
ರಾಜ್ಯದ ಸಂಸದರು ಕೇವಲ ಹೌದಪ್ಪಗಳಾಗದೇ ತಮ್ಮ ಇರುವಿಕೆಯನ್ನು ವರಿಷ್ಠರಿಗೆ ಮನಗಾಣಿಸಿ, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರದಿಂದ ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಪಕ್ಷದೊಂದಿಗೆ ರಾಜ್ಯದ ಹಿತವನ್ನೂ ಕಾಪಾಡುವ ಮಹತ್ತರ ಜವಾಬ್ದಾರಿ ಅವರ ಮೇಲೆ ಇದೆ. ಈ ನಿಟ್ಟಿನಲ್ಲಿ ಮೀನ-ಮೇಷ ಎಣಿಸಿದರೆ ಪಕ್ಷವು ಮುಂದಿನ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುವುದು ಖಂಡಿತ. ವ್ಯಕ್ತಿಪೂಜೆ ಮತ್ತು ಪಕ್ಷ ನಿಷ್ಠೆ ಮಿತಿಯನ್ನು ದಾಟಿ ಪರಾಕಾಷ್ಠೆ ತಲುಪಿದ್ದು, ಎಚ್ಚರಿಕೆ ಘಂಟೆ ಜೋರಾಗಿ ಬಾರಿಸುತ್ತಿದೆ. ಗೋಡೆಯ ಮೇಲಿನ ಬರಹವೂ ನಿಚ್ಚಳವಾಗಿ ಕಾಣುತ್ತಿದೆ. ಶೀಘ್ರವಾಗಿ ಓದಿ ಅರಗಿಸಿಕೊಂಡಷ್ಟು ಪಕ್ಷಕ್ಕೆ ಒಳ್ಳೆಯದು.

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X