ಜೀವದ ಬೆಲೆ ತಿಳಿಯದವರು
ಮಾನ್ಯರೆ,
ವೈದ್ಯ ವಿದ್ಯಾರ್ಥಿಗಳಿಬ್ಬರು ಮೂಕ ಪ್ರಾಣಿಯಾದ ನಾಯಿಯನ್ನು ಮಹಡಿಯಿಂದ ಕೆಳಗೆ ಎಸೆದು ವಿಕೃತ ಆನಂದ ಪಡೆದ ದೃಶ್ಯಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು, ಈ ವಿದ್ಯಾರ್ಥಿಗಳು ಸಾರ್ವಜನಿಕರಿಂದ ತೀವ್ರ ಛೀಮಾರಿಗೊಳಗಾಗಿದ್ದಾರೆ.
ಮುಂದೆ ವೈದ್ಯಕೀಯ ಶಿಕ್ಷಣ ಮುಗಿಸಿ ಜೀವದ ಜೀವ ಉಳಿಸಬೇಕಾದ ಈ ವಿದ್ಯಾರ್ಥಿಗಳು, ಇಷ್ಟರವರೆಗಿನ ಕಲಿಕೆಯಲ್ಲಿ ಜೀವವೊಂದರ (ಅದು ಪ್ರಾಣಿಯಾಗಲಿ, ಮನುಷ್ಯನಾಗಲಿ) ಬೆಲೆ ಏನೆಂದು ತಿಳಿಯದಿರುವಾಗ ಅವರ ಕಲಿಕೆಯಲ್ಲಿ ಮನುಷ್ಯತ್ವ ಮೈಗೂಡಿಲ್ಲವೆಂದೇ ಹೇಳಬೇಕು. ಭವಿಷ್ಯದಲ್ಲಿ ಇವರಿಂದ ಚಿಕಿತ್ಸೆಗೊಳಗಾಗುವವರನ್ನು ದೇವರೇ ಕಾಪಾಡಬೇಕು.
Next Story





