ವೌಢ್ಯಾಚರಣೆ ಪ್ರತಿಬಂಧಕ ಮಸೂದೆ ಕರಡು ಸಲ್ಲಿಕೆ

ಬೆಂಗಳೂರು, ಜು.8: ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಮುಖ್ಯಮಂತ್ರಿ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಹೋರಾಟ ಸಮಿತಿಯು ವೌಢ್ಯಾಚರಣೆ ಪ್ರತಿಬಂಧಕ ಕರಡು ಮಸೂದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾನವನ ಘನತೆಗೆ ಧಕ್ಕೆ ತರುವಂತಹ, ವಾನ, ಪ್ರಾಣ ಹಾನಿ ಮಾಡುವಂತಹ ವಿಷಯಗಳನ್ನು ಮಾತ್ರ ನಿಷೇಧಿಸುವಂತೆ ವೌಢ್ಯಾ ಚರಣೆ ಪ್ರತಿಬಂಧಕ ಕರಡು ಮಸೂದೆಯಲ್ಲಿ ಅಳವಡಿಸಿದ್ದೇವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರಡು ಮಸೂದೆಯನ್ನು ಗಮನಿಸಿ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಮಾಡಲು ಭರವಸೆ ನೀಡಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ವೌಢ್ಯಾಚರಣೆ ಪ್ರತಿ ಬಂಧಕ ಮಸೂದೆಯನ್ನು ಚರ್ಚಿಸಲಾಗುವುದು. ನಂತರ ಈ ಮಸೂದೆಯನ್ನು ಸಾರ್ವಜನಿಕ ಚರ್ಚೆಗೂ ಬಿಡಲಾಗುವುದು. ತದ ನಂತರ ಜನಾಭಿಪ್ರಾಯ ಸಂ್ರಹಿಸಿ, ಪರಿಷ್ಕರಿಸಿದ ನಂತರ ಕಾಯ್ದೆಯಾಗಿ ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿರುವು ದಾಗಿ ಚೆನ್ನಮಲ್ಲ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಕೀಲ ಅನಂತ್ ನಾಯ್ಕ ಮಾತನಾಡಿ, ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಯಿಂದ ಯಾವುದೆ ರೀತಿಯ ಧಾರ್ಮಿಕ ಆಚರಣೆಗೆ ಧಕ್ಕೆಯಾಗುವುದಿಲ್ಲ. ಜನತೆಯ ಪ್ರಾಣಕ್ಕೆ ಹಾನಿಕಾರಕ ವಾದ, ಕೆಲವು ದುಷ್ಟರು ಹಣ ಮಾಡುವುದಕ್ಕಾಗಿ ಆಚರಣೆ ಮಾಡುತ್ತಿರುವ ಪದ್ಧತಿಗಳನ್ನು ನಿಷೇಧಿಸಲು ವೌಢ್ಯಪ್ರತಿಬಂಧಕ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಪ್ರೊ.ಮರುಳಸಿದ್ದಪ್ಪ, ಡಾ.ಸಿ.ಆರ್.ಚಂದ್ರಶೇಖರ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ, ಎಸ್‌ಎಫ್‌ಐ ರಾಜ ಶೇಖರಮೂರ್ತಿ ಮತ್ತಿತರರು ಹಾಜರಿದ್ದರು.







