ರೈಲ್ವೆ ವ್ಯಾಜ್ಯ ನ್ಯಾಯಾಧಿಕರಣದ ಅಧ್ಯಕ್ಷರಾಗಿ ನ್ಯಾ.ಕೆ.ಕಣ್ಣನ್ ನೇಮಕ
ಹೊಸದಿಲ್ಲಿ,ಜು.8: ರೈಲ್ವೆ ಅಪಘಾತಗಳು ಮತ್ತು ಇತರ ಸಂಬಂಧಿತ ಪ್ರಕರಣಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ರೈಲ್ವೆ ವ್ಯಾಜ್ಯ ನ್ಯಾಯಾಧಿಕರಣದ ಅಧ್ಯಕ್ಷರಾಗಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಕೆ.ಕಣ್ಣನ್ ಅವರನ್ನು ಶುಕ್ರವಾರ ನೇಮಕಗೊಳಿಸಲಾಗಿದೆ.
ಐದು ವರ್ಷಗಳ ಕಾಲ ಅಥವಾ 65 ವರ್ಷ ತುಂಬುವವರೆಗೆ ಅವರು ಅಧಿಕಾರದಲ್ಲಿರುತ್ತಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.
Next Story





