11 ಡಿವೈಎಸ್ಪಿಗಳು, 76 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಬೆಂಗಳೂರು, ಜು.8: ರಾಜ್ಯ ಪೊಲೀಸ್ ಇಲಾಖೆಯ 11ಡಿವೈಎಸ್ಪಿಗಳು ಮತ್ತು 76 ಇನ್‌ಸ್ಪೆಕ್ಟರ್‌ಗಳನ್ನು(ಸಿವಿಲ್) ವರ್ಗಾವಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಸಿಬ್ಬಂದಿಗೆ ಸೂಚಿಸಿದ ಸ್ಥಳದಲ್ಲಿ ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಡಿವೈಎಸ್ಪಿಗಳು: ಪಿ.ನಾಗೇಶ್‌ಕುಮಾರ್-ಏರ್‌ಪೋರ್ಟ್ ವಿಭಾಗ ಬೆಂಗಳೂರು. ಎಂ.ಶಿವಶಂಕರ್-ಸಂಚಾರ ಪಶ್ಚಿಮ ಉಪವಿಭಾಗ ಬೆಂಗಳೂರು. ಎಸ್.ಕೆ.ಉಮೇಶ್-ಬೆಂಗಳೂರು ಗ್ರಾಮಾಂತರ ಉಪವಿಭಾಗ. ಎನ್.ಸತ್ಯನಾರಾಯಣ ಕುದೂರು-ಕೆಂಗೇರಿಗೇಟ್ ಉಪವಿಭಾಗ ಬೆಂಗಳೂರು.
ಕೆ.ಪಿ.ರವಿಕುಮಾರ್-ಕೆ.ಆರ್.ಪುರಂ ಉಪವಿಭಾಗ ಬೆಂ.ನಗರ. ಎಚ್.ಮಂಜುನಾಥ್‌ಬಾಬು- ಮಡಿವಾಳ ಉಪವಿಭಾಗ ಬೆಂ. ಜಗದೀಶ್-ಸಂಚಾರ ಉತ್ತರ ಉಪವಿಭಾಗ ಬೆಂಗಳೂರು. ಎನ್.ನಿರಂಜನ್-ಚಿಕ್ಕಪೇಟೆ ಉಪವಿಭಾಗ ಬೆಂಗಳೂರು. ಎಸ್.ವೀರಭದ್ರಯ್ಯ-ಗೋಕಾಕ್ ಉತ್ತರ ವಿಭಾಗ ಬೆಳಗಾವಿ.
ಇನ್‌ಸ್ಪೆಕ್ಟರ್‌ಗಳು: ಬಿ.ಕೆ.ಮಂಜಯ್ಯ-ಬಂಟ್ವಾಳ ವೃತ್ತ ದಕ್ಷಿಣ ಕನ್ನಡ. ಕೆ.ಶ್ರೀಕಾಂತ್-ಬ್ರಹ್ಮಾವರ ವೃತ್ತ ಉಡುಪಿ ಜಿಲ್ಲೆ ಸೇರಿ ಒಟ್ಟು 76 ಪೊಲೀಸ್ ಇನ್‌ಸ್ಪೆಕ್ಟರ್(ಸಿವಿಲ್)ಗಳನ್ನು ವರ್ಗಾವಣೆ ಮಾಡಲಾಗಿದೆ.





