ಕ್ವಾರ್ಟರ್‌ಫೈನಲ್‌ನಲ್ಲಿ ಜಯರಾಮ್-ಪವಾರ್ ಸೆಣಸಾಟ
ಯುಎಸ್ ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ

ನ್ಯೂಯಾರ್ಕ್, ಜು.8: ನಾಲ್ಕನೆ ಶ್ರೇಯಾಂಕದ ಅಜಯ್ ಜಯರಾಮ್ ಹಾಗೂ ಆನಂದ್ ಪವಾರ್ ಯುಎಸ್ ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪವಾರ್ ತಮ್ಮದೇ ದೇಶದ ಪ್ರತೂಲ್ ಜೋಶಿ ಅವರನ್ನು 21-10, 21-13 ಗೇಮ್‌ಗಳ ಅಂತರದಿಂದ ಸೋಲಿಸಿದರೆ, ಮತ್ತೊಂದು ಪಂದ್ಯದಲ್ಲಿ ಜಯರಾಮ್ ಪೋರ್ಚುಗಲ್‌ನ ಪೆಡ್ರೊ ಮಾರ್ಟಿನ್ಸ್‌ರನ್ನು 21-11, 21-15 ಗೇಮ್‌ಗಳ ಅಂತರದಿಂದ ಸೋಲಿಸಿದರು.
ಪುರುಷರ ಡಬಲ್ಸ್‌ನಲ್ಲಿ ಎರಡನೆ ಶ್ರೇಯಾಂಕದ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಜಪಾನ್‌ನ ಮಿಟ್ಸುಹಶಿ ಹಾಗೂ ಯುಟಾ ವಟನಬೆ ವಿರುದ್ಧ 23-21, 21-13 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಭಾರತದ ಮನು-ಸುಮೀತ್ ಜೋಡಿ ಮುಂದಿನ ಸುತ್ತಿನಲ್ಲಿ ಜಪಾನ್‌ನ ಟಕುರೊ ಹೊಕಿ ಹಾಗೂ ಯುಗೊ ಕೊಬಯಶಿ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಅಮೆರಿಕದ ಏರಿಯೆಲ್ ಲೀ ಹಾಗೂ ಸಿಡ್ನಿ ಲೀ ವಿರುದ್ಧ 21-16, 21-6 ಗೇಮ್‌ಗಳ ಅಂತರದಿಂದ ಜಯ ಸಾಧಿಸಿರುವ ಭಾರತದ ಪೂರ್ವಿಶಾ ಹಾಗೂ ಮೇಘನಾ ಅಂತಿಮ 8ರ ಘಟ್ಟಕ್ಕೆ ತಲುಪಿದ್ದಾರೆ





