ಮೀನು ಕೃಷಿಕರಿಗೆ ತರಬೇತಿ
ಮಂಗಳೂರು,ಜು.8: ನಗರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜು.20ರಂದು ಮೀನು ಕೃಷಿಕರ ದಿನಾಚರಣೆ ನಡೆಯಲಿದೆ. ಇದರ ಅಂಗವಾಗಿ ವೈಜ್ಞ್ಞಾನಿಕ ಮೀನುಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತ ಹಾಗೂ ರೈತ ಮಹಿಳೆಯರು ಹೆಸರುಗಳನ್ನು ದೂ.ಸಂ:0824-2431872/9008914009 ಮುಖಾಂತರ ನೋಂದಾಯಿಸಿಕೊಳ್ಳಬಹುದು. ಮೊದಲು ನೋಂದಾಯಿಸಿಕೊಂಡ 30 ಮಂದಿಗೆ ಆದ್ಯತೆ ನೀಡಲಾಗುವುದು ಎಂದು ಕಾರ್ಯಕ್ರಮ ಸಂಯೋಜಕರ ಪ್ರಕಟನೆ ತಿಳಿಸಿದೆ.ವಿದ್ಯುತ್ ಸಂಪರ್ಕ ಕಡಿತಮಂಗಳೂರು, ಜು.8: 110 ಕೆವಿ ಕುಂದಾಪುರ ವಿದ್ಯುತ್ ಉಪಕೇಂದ್ರದಲ್ಲಿ ಸಂಗಂ ಫೀಡರ್‌ನ ಹಳೆಯ ಡಿ.ಪಿ. ಸ್ಟಚ್ಚರ್ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು.12ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮುಖ್ಯ ರಸ್ತೆ ಕುಂದಾಪುರ, ಎನ್.ಹೆಚ್-66, ಚಿಕನ್ ಸ್ಟಾಲ್ ರಸ್ತೆ, ಖಾರ್ವಿಕೇರಿ, ರಾಮಮಂದಿರ, ತಲ್ಲೂರು, ಹೇರಿಕುದ್ರು, ಹೆಮ್ಮಾಡಿ, ಕಟ್‌ಬೇಲ್ತೂರು ಹಾಗೂ ದೇವಲ್ಕುಂದ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದು ಎಂದು ಪ್ರಕಟನೆ ತಿಳಿಸಿದೆ.





